ಕುಮಾರಸ್ವಾಮಿ ಹೇಗೆಲ್ಲಾ ವರ್ಗಾವಣೆಗೆ ಸೂಚನೆ ಕೊಡುತ್ತಿದ್ದರು ಎಂಬುದು ಗೊತ್ತಿದೆ ಎಂದ ಗೃಹಸಚಿವ ಪರಮೇಶ್ವರ್‌

Date:

Advertisements
  • ಕುಮಾರಸ್ವಾಮಿ ಆರೋಪಗಳು ಹಿಟ್ ಅಂಡ್ ರನ್: ಸಿಎಂ ಸಿದ್ದರಾಮಯ್ಯ
  • ಸರ್ಕಾರ ನಡೆಸುವವರು ನಾವು. ಸರಿ ಕಂಡಿದ್ದು ಮಾಡುತ್ತೇವೆ: ಪರಮೇಶ್ವರ್‌

ಎಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ, ನಾನೇ ಗೃಹಸಚಿವನಾಗಿದ್ದೆ. ಆಗ ಅವರು ವರ್ಗಾವಣೆಗೆ ಯಾವ ರೀತಿ ಸಲಹೆ ಸೂಚನೆ ಕೊಡುತ್ತಿದ್ದರು ಎಂಬುದು ಗೊತ್ತಿದೆ. ಅದನ್ನು ನಾನು ಹೇಳಿಲ್ಲ. ನಮಗೂ ಹೇಳಲು ಬರುತ್ತದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್‌ ತಿರುಗೇಟು ನೀಡಿದ್ದಾರೆ.

ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ಕುರಿತಂತೆ ಸರ್ಕಾರದ ಮೇಲೆ ಆರೋಪ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಮಾತಿಗೆ ಪ್ರತಿಕ್ರಿಯಿಸಿ, “ಕುಮಾರಸ್ವಾಮಿ ಅವರು ಏನು ಬೇಕಾದ್ರೂ ಕಮೆಂಟ್ ಮಾಡಲಿ. ಸರ್ಕಾರ ನಡೆಸುವವರು ನಾವು. ನಮಗೆ ಯಾವುದು ಸರಿ ಕಾಣುತ್ತದೆಯೋ ಅದನ್ನ ಮಾಡುತ್ತೇವೆ” ಎಂದರು.

“1200 ಇನ್ಸ್ ಪೆಕ್ಟರ್ ಗಳಿದ್ದಾರೆ. ಅಷ್ಟೂ ಜನರನ್ನು ನಾವು ವರ್ಗಾವಣೆ ಮಾಡುವುದಿಲ್ಲ. ಎಷ್ಟು ಮಂದಿ ಅಗತ್ಯ ಇದೆಯೋ ಅಷ್ಟು ಜನರನ್ನ ಮಾತ್ರ ವರ್ಗಾವಣೆ ಮಾಡುತ್ತೇವೆ. ಯಾವ ಏರಿಯಾದಲ್ಲಿ ಯಾವ ರೀತಿ ಯಾರನ್ನು ಹಾಕಿದರೆ ಅಪರಾಧ ಪ್ರಕರಣ ಕಂಟ್ರೋಲ್‌ಗೆ ಬರುತ್ತದೆ ಎಂಬುದು ಅವಲೋಕಿಸಿ ವರ್ಗಾವಣೆ ಮಾಡುತ್ತೇವೆ” ಎಂದು ತಿಳಿಸಿದರು.

Advertisements

“ಕೆಲವು ವರ್ಗಾವಣೆ ಸರಿ ಅನ್ನಿಸದೇ ಇರುವುದನ್ನು ನಿಲ್ಲಿಸಿದ್ದೇವೆ. ಅದನ್ನೆಲ್ಲ ನೋಡಿ ಸರಿ ಮಾಡಿ ವರ್ಗಾವಣೆ ಮಾಡುತ್ತೇವೆ. ಒಬ್ಬ ಇನ್ ಸ್ಪೆಕ್ಟರ್ ಗೆ 5, 6 ಕಡೆ ಅವಕಾಶ ಇದೆ. ಅದನ್ನು ನೋಡಿ ಸರಿ ಮಾಡಬೇಕು, ಸರಿ ಮಾಡುತ್ತೇವೆ” ಎಂದರು

ಕುಮಾರಸ್ವಾಮಿ ಆರೋಪಗಳು ಹಿಟ್ ಅಂಡ್ ರನ್: ಸಿಎಂ ಸಿದ್ದರಾಮಯ್ಯ

ಎಚ್‌ ಡಿ ಕುಮಾರಸ್ವಾಮಿಯವರದ್ದು ಯಾವಾಗಲೂ ಹಿಟ್ ಅಂಡ್ ರನ್ ಕೇಸು. ವೃಥಾ ಆರೋಪಗಳನ್ನು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಇನ್ ಸ್ಪೆಕ್ಟರ್ ವರ್ಗಾವಣೆ ವಿಚಾರದಲ್ಲಿ ʼವೈಎಸ್‍ಟಿ ಟ್ಯಾಕ್ಸ್ʼ ಏಕೆ ಉಪಸ್ಥಿತರಿದ್ದರು ಎಂದು ಪ್ರಶ್ನಿಸಿರುವ ಬಗ್ಗೆ ಪ್ರತಿಕ್ರಿಯಿಸಿ, “ಈ ಹಿಂದೆ ಪೆನ್‍ಡ್ರೈವ್ ತೋರಿಸಿದ್ದರು. ಅದನ್ನು ಸಾಬೀತು ಮಾಡಿದರೇ? ಅವರ ಹತ್ತಿರ ಪೆನ್‍ಡ್ರೈವ್ ಇದ್ದರಲ್ಲವೇ ಹೊರಗೆಬಿಡುವುದು” ಎಂದು ಕುಟುಕಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X