ದ್ವೇಷ ಭಾಷಣಗಳ ಮೂಲಕವೇ ಸುದ್ದಿಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಈಗ “ನಾನು ಜೈವಿಕವಾಗಿ ಜನಿಸಿಲ್ಲ, ದೇವರೇ ನನ್ನನ್ನು ಕಳುಹಿಸಿದ್ದು” ಎಂದು ಹೇಳುವ ಮೂಲಕ ಟ್ರೋಲ್ ಆಗಿದ್ದಾರೆ.
ನ್ಯೂಸ್18ನ ರುಬಿಕಾ ಲಿಯಾಖತ್ ಜೊತೆ ಸಂದರ್ಶನದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಕೂಡಾ ಆಗುತ್ತಿದ್ದು, ನೆಟ್ಟಿಗರು ಇದನ್ನು ಆತ್ಮರತಿ ಎಂದು ಗೇಲಿ ಮಾಡಿಕೊಳ್ಳುತ್ತಿದ್ದಾರೆ.
ರುಬಿಕಾ ಲಿಯಾಖತ್ “ನಿಮಗೆ ಸುಸ್ತು ಅನ್ನೋದೆ ಆಗುದಿಲ್ವೆ” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, ತನ್ನನ್ನು ದೇವರೇ ಕಳುಹಿಸಿದ್ದು ಎಂದಿದ್ದಾರೆ.
Modi: I am convinced that I am not biologically born but sent directly by God.
Next level narcissism 😂😂 pic.twitter.com/0Y9jpkKWsg
— Nimo Tai (@Cryptic_Miind) May 21, 2024
“ನನ್ನ ತಾಯಿ ಜೀವಂತವಾಗಿರುವವರೆಗೂ ನಾನು ಜೈವಿಕವಾಗಿ ಜನಿಸಿದ್ದೇನೆ ಎಂದು ನಾವು ನಂಬಿದ್ದೆ. ನನ್ನ ತಾಯಿ ಮರಣ ಹೊಂದಿದ ಬಳಿಕ ನಾನು ನನ್ನ ಎಲ್ಲಾ ಅನುಭವಗಳನ್ನು ಜೊತೆಗೂಡಿಸಿ ನೋಡುತ್ತೇನೆ. ನನ್ನನ್ನು ಪರಮಾತ್ಮನೇ ಕಳುಹಿಸಿದ್ದು ಎಂದು ನನಗೆ ಮನವರಿಕೆಯಾಗಿದೆ” ಎಂದು ಮೋದಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್, ಸಮಾಜವಾದಿ ಪಕ್ಷವು ಪಾಕಿಸ್ತಾನದ ಹಿತೈಷಿಗಳು- ಮತ್ತೆ ಪ್ರಧಾನಿ ಮೋದಿ ದ್ವೇಷ ಭಾಷಣ
“ಈ ಶಕ್ತಿ ನನಗೆ ಜೈವಿಕ ದೇಹದಿಂದ ಸಿಗುವುದಲ್ಲ. ಈ ಶಕ್ತಿ ನನಗೆ ದೇವರಿಂದ ನನಗೆ ದಯಪಾಲಿಸಲಾಗಿದೆ. ದೇವರು ತನ್ನ ಕೆಲಸವನ್ನು ನನ್ನ ಮೂಲಕ ಮಾಡಿಸಲು ನನಗೆ ಶಕ್ತಿ, ಸಾಮರ್ಥ್ಯ, ಉದ್ದೇಶವನ್ನು, ಪ್ರೇರಣೆಯನ್ನು ನನಗೆ ನೀಡಿದ್ದಾನೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಹಿಟ್ಲರ್‌ನ ಸರ್ವಾಧಿಕಾರ ಮತ್ತು ಮೂರ್ಖತನದ ಸಿದ್ಧಾಂತ: ಇಲ್ಲಿದೆ ಸಮಗ್ರ ವಿವರ | Theary Of Stupidity | Hitlar
“ನಾನು ಸಾಧನವಲ್ಲದೆ ಬೇರೇನೂ ಅಲ್ಲ. ನನ್ನ ಮೂಲಕ ದೇವರು ತನ್ನ ಕಾರ್ಯ ಮಾಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ನಾನು ಯಾವ ಕಾರ್ಯವನ್ನು ಮಾಡುವಾಗಲೂ ದೇವರೇ ನನ್ನ ಬಳಿ ಮಾಡಿಸುತ್ತಿದ್ದಾನೆ ಚಿಂತೆ ಬೇಡ ಎಂದು ಆಲೋಚಿಸುತ್ತೇನೆ” ಎಂದೂ ಹೇಳಿಕೊಂಡಿದ್ದಾರೆ.
“ನಾನು ದೇವರಿಗೆ ಸಮರ್ಪಿತ. ಆದರೆ ಆ ದೇವರನ್ನು ನಾನು ನೋಡಲು ಸಾಧ್ಯವಿಲ್ಲ. ನಾನೂ ಕೂಡಾ ಓರ್ವ ಪೂಜಾರಿ, ನಾನು ಕೂಡಾ ಓರ್ವ ಭಕ್ತ, ನಾನು 40 ಕೋಟಿ ದೇಶವಾಸಿಗಳನ್ನೇ ಈಶ್ವರನ ರೂಪ ಎಂದು ಭಾವಿಸುತ್ತೇನೆ. ಅವರೇ ನನ್ನ ದೇವರು” ಎಂದಿದ್ದಾರೆ.
ಅಹಂಕಾರವೊ , ದುರಹಂಕಾರವೊ , ಅಧಿಕಾರದ ಮದವೊ , ಸೋಲಿನ ಭಯವೊ , ನಿರಾಶೆಯೊ, ಜಿಗುಪ್ಸೆಯೊ , ಭಯವೊ , ಭೀತಿಯೊ…?
ಎಲ್ಲವೂ…!!!