ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ; ಸಿ.ಟಿ ರವಿ ಸ್ಪಷ್ಟನೆ

Date:

Advertisements
  • 40 ಪರ್ಸೆಂಟ್ ಕಮಿಷನ್‌ ಆರೋಪ; ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿ
  • ಉಡುಪಿ ಪ್ರಕರಣದಲ್ಲಿ ಸರ್ಕಾರದ ನಡೆ ಅನುಮಾನ ಉಂಟುಮಾಡಿದೆ

ರಾಜ್ಯಾಧ್ಯಕ್ಷ ಎನ್ನುವುದು ಒಂದು ಜವಾಬ್ದಾರಿ, ಅದು ಕೇಳಿ ಪಡೆಯುವ ಸಂಗತಿ ಅಲ್ಲ. ಯಾರಿಗೆ, ಯಾವಾಗ ಕೊಡಬೇಕು ಎಂಬುದನ್ನು ದೊಡ್ಡವರು ತೀರ್ಮಾನ ಮಾಡುತ್ತಾರೆ. ಹಾಗಾಗಿ ಅ ಹುದ್ದೆಯ ಆಕಾಂಕ್ಷಿ ನಾನಲ್ಲ. ಊಹಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ಪಷ್ಟನೆ ನೀಡಿದರು.

ರಾಜ್ಯಾಧ್ಯಕ್ಷ ಸ್ಥಾನ ನೀಡುವ ಉದ್ದೇಶದಿಂದಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಡಲಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಈ ಕುರಿತು ಭಾನುವಾರ ಬೆಂಗಳೂರಿಲ್ಲಿ ಸುದ್ದಿಗಾರರಿಗೆ ಪ್ರತಿಕ್ರೀಯೆ ನೀಡಿದ ಸಿ.ಟಿ ರವಿ, “ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ನಾನೀಗ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಭವಿಷ್ಯದ ಬಗ್ಗೆ ನನಗೆ ಏನು ಗೊತ್ತಿಲ್ಲ” ಎಂದರು.

“ನಮ್ಮ ಪಕ್ಷದಲ್ಲಿ ಯಾವುದೇ ಹುದ್ದೆ ಶಾಶ್ವತವಲ್ಲ, ಸಾಯೋ ವರೆಗೂ ನಮಗೆ ಇದೇ ಹುದ್ದೆ ಅಂತ ಇಲ್ಲ. ಈ ರೀತಿ ಹಲವಾರು ಹುದ್ದೆಗಳ ಜವಾಬ್ದಾರಿ ಕೊಟ್ಟು ಕೈ ಬಿಟ್ಟಿರುವ ಕಾರಣಕ್ಕೋಸ್ಕರವೇ ಇಲ್ಲಿವರೆಗೂ ಬೆಳೆಯಲು ಸಾಧ್ಯವಾಗಿದೆ. ನಾನು 35 ವರ್ಷದ ಹಿಂದೆ ಬೂತ್‌ ಅಧ್ಯಕ್ಷ ಆಗಿದ್ದೆ. ಅಲ್ಲಿಂದ ಹೋಬಳಿ ಕಾರ್ಯದರ್ಶಿ, ಜಿಲ್ಲಾ ಸಮಿತಿ, ಯುವ ಮೋರ್ಚ ಹೀಗೆ ಹಲವು ಹುದ್ದೆಗಳನ್ನು ನಿರ್ವಹಿಸಿಯೇ ಇಲ್ಲಿಯವರೆಗೂ ಬಂದಿದ್ದೇನೆ” ಎಂದು ಹೇಳಿದರು.

Advertisements

“ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಬಿಜೆಪಿ ನನಗೆ 2 ವರ್ಷ 10 ತಿಂಗಳು ಕಾಲ ಅವಕಾಶ ನೀಡಿದೆ. ಆಗಲೂ ಕಾರ್ಯಕರ್ತ ಎನ್ನುವ ಭಾವನೆಯಿಂದ ಕೆಲಸ ಮಾಡಿದ್ದೇನೆ. ಈಗಲೂ ಕಾರ್ಯಕರ್ತ ಎನ್ನುವ ಭಾವನೆಯಿಂದಲೇ ಮುಂದುವರಿಯುತ್ತೇನೆ. ಎಲ್ಲಿವರೆಗೂ ಪಕ್ಷಕ್ಕಾಗಿ ಕಾರ್ಯ ಮಾಡುತ್ತಿರುತ್ತೇವೋ ಅಲ್ಲಿವರೆಗೂ ಕಾರ್ಯಕರ್ತ ಎನ್ನುವುದು ಪರ್ಮನೆಂಟ್‌ ಆಗಿ ಇರಲಿದೆ. ಉಳಿದಂತೆ ಹುದ್ದೆಗಳು ಬದಲಾಗುತ್ತಿರುತ್ತವೆ ಅದು ಸ್ವಾಭಾವಿಕ” ಎಂದು ಸ್ಪಷ್ಟನೆ ನೀಡಿದರು.

ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿ.ಟಿ ರವಿ, ವಿಪಕ್ಷ ನಾಯಕನಾಗಿ ಯತ್ನಾಳ್‌ ಅವರುನ್ನು ನೇಮಕ ಮಾಡಲು ಚರ್ಚೆ ನಡೆದಿದೆ ಎಂಬ ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, “ದೇವೇಗೌಡರು ಹಿರಿಯ ರಾಜಕಾರಣಿಗಳು, ಅವರು ಯಾವ ಹಿನ್ನೆಲೆ ಅಥವಾ ಮಾಹಿತಿ ಆಧಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಅಂತಿಮ ನಿರ್ಣಯ ಆಗಿದೆ ಎಂದು ಹೇಳಿಲ್ಲ. ಚರ್ಚೆ ಆಗಿದೆ ಎಂದು ಹೇಳಿದ್ದಾರೆ. ಎಲ್ಲ ಚರ್ಚೆಗಳು ನಿರ್ಣಯ ಆಗುವುದಿಲ್ಲ. ನಿರ್ಣಯವನ್ನು ರಾಷ್ಟ್ರೀಯ ಅಧ್ಯಕ್ಷರು, ಪಾರ್ಲಿಮೆಂಟರಿ ಬೋರ್ಡ್‌ ಮಾಡಲಿದೆ” ಎಂದರು.

40 ಪರ್ಸೆಂಟ್ ಕಮಿಷನ್‌ ಆರೋಪ; ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿ

40 ಪರ್ಸೆಂಟ್‌ ಭ್ರಷ್ಟಾಚಾರ ಆರೋಪ ಕುರಿತು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತನಿಖೆಗೆ ಮುಂದಾಗಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ, ಖಂಡಿತಾ ಅವರು ತನಿಖೆ ಮಾಡಬೇಕು, “ಮಾಡಲಿ. ಸತ್ಯಾಸತ್ಯತೆ ಬಯಲಿಗೆಳೆಯಲಿ. 40 ಪರ್ಸೆಂಟ್‌ ಕಮಿಷನ್‌ ಯಾರು ಯಾರಿಗೆ ಕೊಟ್ಟಿದ್ದಾರೆ ಎಂದು ಈವರೆಗೂ ಯಾರು ದೂರು ಕೊಟ್ಟಿಲ್ಲ. ಸುಮ್ಮನೆ ಒಂದು ಆರೋಪ ಮಾಡಿ ನಮ್ಮ ವಿರುದ್ಧ ಒಂದು ನರೆಟಿವ್‌ ಸೆಟ್‌ ಮಾಡಿದ್ರು. ಅವರಿಗೆ ವಿನಂತಿಸುತ್ತೇನೆ. ಮೂರು ತಿಂಗಳ ಒಳಗೆ ವರದಿ ಸಲ್ಲಿಸಿ. ಯಾರು ಯಾರಿಗೆ ಲಂಚ ಕೊಟ್ಟಿದ್ದಾರೆ ಎಂದು ಎಫ್‌ಐಆರ್‌ ಹಾಕಿ. ಅಧಿಕಾರಿಗಳು ಯಾರಿದ್ದಾರೆ, ಶಾಸಕರು, ಸಚಿವರು ಯಾರು? ಅಥವಾ ಯಾರ ಮೇಲೆ ಆರೋಪ ಇತ್ತು ಎಂಬುದನ್ನು ಬಹಿರಂಗಪಡಿಸಲಿ” ಎಂದು ಆಗ್ರಹಿಸಿದರು.

“ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ರಚನೆ ಮಾಡಿದ್ದ ಸದನಸಮಿತಿ ‘ನೈಸ್‌’ ಸಂಬಂಧ ವರದಿ ಕೊಟ್ಟಿದೆ. ಅದರ ಮೇಲೆ ಕ್ರಮ ಕೈಗೊಳ್ಳಲಿ. ಅರ್ಕಾವತಿಗೆ ಸಂಬಂಧಿಸಿದಂತೆ ಕೆಂಪಣ್ಣ ಆಯೋಗ ವರದಿ ಕೊಟ್ಟಿದೆ. ಅದರ ವಿರುದ್ಧವೂ ಕ್ರಮ ಕೈಗೊಳ್ಳಿ. ಆಗ ನಿಮ್ಮ ಸರ್ಕಾರದ ಬಗ್ಗೆ ಭರವಸೆ ನಂಬಿಕೆಗಳು ಹೆಚ್ಚಾಗುತ್ತವೆ. ಇಲ್ಲದಿದ್ದಾರೆ, ನೀವು ಬೇರೆ ಏನೋ ಒಳ ಷಡ್ಯಂತ್ರ ಮಾಡಿದ್ದೀರಿ ಎನ್ನುವಂತಹ ಅನುಮಾನ ಬರುತ್ತೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಉಡುಪಿ ಪ್ರಕರಣ; ಸರ್ಕಾರದ ನಡೆ ಅನುಮಾನ ಉಂಟುಮಾಡಿದೆ

“ಉಡುಪಿ ಘಟನೆಯಲ್ಲಿ ಏನು ನಡೆದೇ ಇಲ್ಲ ಎನ್ನುವುದಾದರೆ, ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಯಾಕೆ ಅಮಾನತು ಮಾಡಿತು? ಪೋಲಿಸ್‌ ಠಾಣೆಗೆ ಏಕೆ ದೂರು ಕೊಟ್ಟರು? ಸಾರ್ವಜನಿಕ ಒತ್ತಡ ನಿರ್ಮಾಣ ಆಗುವವರೆಗೂ ಪೊಲೀಸರು ಏಕೆ ಎಫ್‌ಐಆರ್ ದಾಖಲಿಸಲಿಲ್ಲ? ಈ ತರದ ಕೆಲವು ಅನುಮಾನಗಳು ಕಾಡುತ್ತಿವೆ. ಸರಿಯಾದ ತನಿಖೆ ಆಗಬೇಕಾದ ಅವಶ್ಯಕತೆ ಇದೆ. ಯಾರ ಮೇಲೂ ಆರೋಪ ಮಾಡಲು ಬಯಸುವುದಿಲ್ಲ. ಹಾಗೇಯೇ ಯಾರಿಗೂ ಕ್ಲೀನ್‌ಚಿಟ್‌ ಕೊಡಲು ಬಯಸುವುದಿಲ್ಲ. ಸರ್ಕಾರದ ನಡೆ ತನಿಖೆಗೆ ಮುಂಚೆಯೇ ಕ್ಲೀನ್‌ ಚಿಟ್‌ ಕೊಡುವಂತೆ ಇದ್ದಿದ್ದು, ಅನುಮಾನ ಉಂಟು ಮಾಡಿದೆ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಪಕ್ಷ ನೀಡುವ ಜವಾಬ್ದಾರಿಯನ್ನು ಕಾಯಾ ವಾಚಾ ಮನಸಾ ನಡೆಸುತ್ತೇನೆ: ಸಿ.ಟಿ ರವಿ

‘ಅಮಾಯಕರು ಎಂಬ ಸರ್ಟಿಫಿಕೇಟ್‌ ನೀಡುವುದು ಸರಿಯಾದ ಕ್ರಮವಲ್ಲ’

“ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಆರೋಪಿಗಳನ್ನು ಅಮಾಯಕರು ಎಂದು ಹೇಳಿದ್ದಾರೆ. ದಲಿತ ಶಾಸಕನ ಮನೆ ಸುಟ್ಟವರು ಮತ್ತು ಪೊಲೀಸ್‌ ಠಾಣೆಗೆ ಬೆಂಕಿ ಹಾಕಿದವರು ಹೇಗೆ ಅಮಾಯಕರಾಗುತ್ತಾರೆ? ಅಮಾಯಕರು ಎನ್ನುತ್ತಿರುವವರಿಗೆ ಪ್ರಾಥಮಿಕ ಮಾಹಿತಿ ಇದ್ದರೆ, ಬೆಂಕಿ ಹಾಕಿದ ದಿನವೇ ಇಂತವರು ಮಾತ್ರ ಬೆಂಕಿ ಹಾಕಿದವರು ಎಂದು ಯಾಕೆ ಬಂದು ಹೇಳಲಿಲ್ಲ? ಸರ್ಕಾರ ಬದಲಾದ ತಕ್ಷಣ ಯಾಕೆ ಅಮಾಯಕರು ಎಂದು ಪತ್ರಬರೆದಿದ್ದಾರೆ? ನಿಜವಾಗಲೂ ಅಮಾಯಕರಾಗಿದ್ದರೆ ಅವಾಗಲೇ ಹೇಳಬೇಕಿತ್ತು” ಎಂದು ಆರೋಪಿಸಿದರು.

“ಬೆಂಕಿ ಹಾಕಿದವರಿಗೆ ಅಮಾಯಕರು ಎಂದು ಸರ್ಫಿಕೇಟ್‌ ನೀಡುವುದು ಅದಕ್ಕಿಂತ ದೊಡ್ಡ ಅಪರಾಧ ಇನ್ನೊಂದಿಲ್ಲ.
ಕಾಂಗ್ರೆಸ್‌ ಏನು ತನಿಖಾ ತಂಡ ಅಲ್ಲ. ಇಷ್ಟೆಲ್ಲ ಆದ ಮೇಲೆ ಅಪರಾಧಿ ಹೌದೋ ಅಲ್ಲವೋ ಎಂಬ ನಿರ್ಣವನ್ನು ನ್ಯಾಯಾಲಯ ತೆಗೆದುಕೊಳ್ಳಬೇಕು. ನ್ಯಾಯಾಲಯದ ಪಾತ್ರವನ್ನು ಕಾಂಗ್ರೆಸ್‌ ವಹಿಸಲು ಸಾಧ್ಯವೆ” ಎಂದು ಪ್ರಶ್ನಿಸಿದರು.

“ಇದು ಸಾಮಾನ್ಯ ಘಟನೆಯೇ? ರೈತ ಚಳುವಳಿಯೇ? ಅಥವಾ ಕನ್ನಡ ಪರ ಹೋರಾಟವೇ? ಕಾಂಗ್ರೆಸ್‌ ರಾಜ್ಯದಲ್ಲಿ ಯಾವ ರಾಜಕೀಯ ಮಾಡಲು ಹೊರಟಿದೆ? ಈ ರೀತಿಯ ಘಟನೆಗಳಲ್ಲಿ ಅಮಾಯಕರು ಎನ್ನುವ ಸರ್ಟಿಫಿಕೇಟ್‌ ನೀಡುವುದು ಸರಿಯಾದ ಕ್ರಮ ಅಲ್ಲಿ. ಈ ರೀತಿಯ ಘಟನೆಗಳಿಂದಲೇ ಕಾಂಗ್ರೆಸ್‌ ಬಗ್ಗೆ ಅನುಮಾನ ಮೂಡುವುದು” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X