ಬಿಜೆಪಿಯಲ್ಲಿ ಗಂಡಸರಿದ್ದರೆ ಅನ್ಯಾಯದ ವಿರುದ್ಧ ದನಿ ಎತ್ತಲಿ: ಮಾಗಡಿ ಶಾಸಕ ಎಚ್‌ ಸಿ ಬಾಲಕೃಷ್ಣ

Date:

“ಬಿಜೆಪಿಯಲ್ಲಿ ಗಂಡಸರಿದ್ದರೆ ಅನ್ಯಾಯದ ವಿರುದ್ಧ ದನಿ ಎತ್ತಲಿ. ನಮ್ಮ ಪಾಲಿನ ಅನುದಾನಕ್ಕಾಗಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ನೋಡಿಯಾದರೂ ಭಾಗಿಯಾಗಲಿ” ಎಂದು ಮಾಗಡಿ ಶಾಸಕ ಎಚ್‌ ಸಿ ಬಾಲಕೃಷ್ಣ ಸವಾಲು ಹಾಕಿದರು.

ರಾಮನಗರ ತಾಲ್ಲೂಕಿನ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಸಚಿವರು ಹಾಗೂ ಸಂಸದರು, ದೆಹಲಿಗೆ ಹೋಗಿ ಟಿ.ಎ ಮತ್ತು ಡಿ.ಎ ತಗೊಂಡು ಬರ್ತಾರಷ್ಟೆ. ಇವರೆಲ್ಲಾ ಷೋ ಪೀಸ್‌ಗಳು. ತಮ್ಮ ಹಕ್ಕಿಗಾಗಿ ತಮಿಳುನಾಡು ಸಂಸದರು ಹೇಗೆ ದನಿ ಎತ್ತುತ್ತಾರೆ ಎಂಬುದನ್ನು ನೋಡಿ ಕಲಿಯಲಿ” ಎಂದು ಕುಟುಕಿದರು.

“ಬಿಜೆಪಿಯವರು ದನಿ ಕಳೆದುಕೊಂಡಿರುವುದರಿಂದ ಅನುದಾನಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇದರ ಅರ್ಥ ಬಿಜೆಪಿಯಲ್ಲಿ ಗಂಡಸರಿಲ್ಲ ಎಂದರ್ಥ. ಅನುದಾನದ ವಿಷಯದಲ್ಲಿ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ದೇಶದ ದನಿ ಎಳುತ್ತದೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿರುವುದನ್ನು, ಬಿಜೆಪಿಯವರು ತಿರುಚಿದ್ದಾರೆ ಅಷ್ಟೇ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಲಕ್ಷ್ಮಣ ಸವದಿ ಕಾಂಗ್ರೆಸ್‌ ಪರವಾಗಿದ್ದಾರೆ, ಅವರು ಪಕ್ಷ ಬಿಡುವುದಿಲ್ಲ: ಸಚಿವ ಸತೀಶ ಜಾರಕಿಹೊಳಿ

“ಕೇಂದ್ರಕ್ಕೆ ಹೆಚ್ಚು ತೆರಿಗೆ ಪಾವತಿಸುವ ದೇಶದ ಎರಡನೇ ರಾಜ್ಯ ನಮ್ಮದು. ಹೀಗಿದ್ದರೂ, ನಮಗೆ ಕೊಡಬೇಕಾದ ಅನಯದಾನ ಕೊಡುತ್ತಿಲ್ಲ. ರಾಜ್ಯದ ಬಿಜೆಪಿ ಸಚಿವರು ಮತ್ತು ಸಂಸದರಿಗೆ ಪ್ರಧಾನಿ ಮೋದಿ ಅವರ ಮುಂದೆ ನಿಲ್ಲುವುದಕ್ಕೂ ಆಗುವುದಿಲ್ಲ. ವೈಯಕ್ತಿಕ ವರ್ಚಸ್ಸಿಲ್ಲದ ಅವರು, ಕೇವಲ ಮೋದಿ ಹೆಸರಲ್ಲಿ ಗೆಲ್ಲುತ್ತಾರೆ” ಎಂದು ಟೀಕಿಸಿದರು.

“ನಮಗಾಗಿರುವ ಅನ್ಯಾಯಕ್ಕೆ ಹೋರಾಟ ಮಾಡಬೇಕಿದೆ. ಈ ವಿಷಯದಲ್ಲಿ ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ” ಎಂದು ಸವಾಲು ಹಾಕಿದರು.

“ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದಲ್ಲಿ ಸುರೇಶ್ ಅವರನ್ನು ಎದುರಿಸುವಂತಹ ಅಭ್ಯರ್ಥಿ ಇಲ್ಲ. ಅವರ ವಿರುದ್ಧ ಮೈತ್ರಿ ತಂತ್ರ ಫಲ ನೀಡುವುದಿಲ್ಲ. ಬೇಕಿದ್ದರೆ ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಮಾಡಲಿ. ಆನಂತರ ಮಾತನಾಡೋಣ. ಸಂಸದರು ಜನಸಾಮಾನ್ಯರ ಜೊತೆ ಬೆರೆತು ಹೇಗೆ ಕೆಲಸ ಮಾಡಬಹುದು ಎಂಬುದನ್ನು ಸುರೇಶ್ ತೋರಿಸಿ ಕೊಟ್ಟಿದ್ದಾರೆ” ಎಂದು ತಿರುಗೇಟು ನೀಡಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಷ್ಟ್ರೀಯತೆ, ದೇಶಭಕ್ತಿ ಬಗ್ಗೆ ಬಿಜೆಪಿ ನಮಗೆ ಹೇಳಿಕೊಡಬೇಕಿಲ್ಲ: ಸಚಿವ ಎಂ ಬಿ ಪಾಟೀಲ್‌

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಮತ್ತು ದೇಶ ವಿಭಜನೆಯನ್ನು ತಡೆಯಲು ಶಕ್ತಿ ಮೀರಿ...

ಬಿಎಂಟಿಸಿ | 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಖಾಲಿ ಇರುವ ಸುಮಾರು 2,500...

ಬೆಂಗಳೂರು | ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕ ಹಾಕಲು ಬುಧವಾರವೇ ಕೊನೆ ದಿನ

ಫೆ.28ರೊಳಗೆ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ವಾಣಿಜ್ಯ ಮಳಿಗೆಗಳ ಮುಂದೆ...

ಬೆಂಗಳೂರು ಪೂರ್ವ | ಆರು ತಿಂಗಳಲ್ಲಿ 46 ‘ವ್ಹೀಲಿಂಗ್ ಮಾಡಿದ’ ಪ್ರಕರಣ ದಾಖಲು

ಬೆಂಗಳೂರಿನ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 2023 ರಿಂದ 2024ರ...