ಭಾರತ | 2023ರಲ್ಲಿ 5 ಲಕ್ಷ ಜನರನ್ನು ಬಲವಂತವಾಗಿ ಮನೆಯಿಂದ ಹೊರ ದಬ್ಬಲಾಗಿದೆ: ವರದಿ

Date:

Advertisements

ದೇಶದಲ್ಲಿ ಕಳೆದ ವರ್ಷ (2023) ಸುಮಾರು 5 ಲಕ್ಷ ಜನರನ್ನು ಬಲವಂತವಾಗಿ ತಮ್ಮ ಮನೆಗಳಿಂದ ಹೊರಹಾಕಲಾಗಿದೆ. ಅವರ ಮನೆಗಳನ್ನು ಉರುಳಿಸಲಾಗಿದೆ ಎಂದು ಹೌಸಿಂಗ್ ಅಂಡ್ ಲ್ಯಾಂಡ್ ರೈಟ್ಸ್ ನೆಟ್‌ವರ್ಕ್ (ಎಚ್‌ಎಲ್‌ಆರ್‌ಎನ್‌) ವರದಿ ಹೇಳಿದೆ.

ಇತ್ತೀಚೆಗೆ ಎಚ್‌ಎಲ್‌ಆರ್‌ಎನ್‌, ‘ಭಾರತದಲ್ಲಿ ಬಲವಂತದ ಹೊರಹಾಕುವಿಕೆಗಳು: 2022 ಮತ್ತು 2023’ ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಿದೆ. ದೇಶದಲ್ಲಿ ಬಲವಂತವಾಗಿ ಹೊರದೂಡುತ್ತಿರುವ ಕೃತ್ಯಗಳ ಬಗ್ಗೆ ಗಮನ ಸೆಳೆದಿದೆ.

2022 ಮತ್ತು 2023ರಲ್ಲಿ ದೇಶಾದ್ಯಂತ ಬಲವಂತವಾಗಿ ಮನೆಗಳನ್ನು ಉರುಳಿಸುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ, ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟವರ ಮೇಲೆ ಇಂತಹ ದಮನಗಳು ಹೆಚ್ಚಾಗಿ ನಡೆದಿವೆ ಎಂಬುದನ್ನು ವರದಿ ಒತ್ತಿ ಹೇಳಿದೆ.

Advertisements

2022-23ರಲ್ಲಿ 1.5 ಲಕ್ಷಕ್ಕೂ ಹೆಚ್ಚು ಮನೆಗಳನ್ನು ರಾಜ್ಯಗಳ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಪರಿಣಾಮವಾಗಿ 7.4 ಲಕ್ಷಕ್ಕೂ ಹೆಚ್ಚು ಜನರನ್ನು ಅವರ ಮನೆಗಳಿಂದ ಬಲವಂತವಾಗಿ ದಬ್ಬಲಾಗಿದೆ. 2023ರಲ್ಲಿಯೇ, ಕನಿಷ್ಠ 5,15,752 ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಈ ಸಂಖ್ಯೆಯು ಕಳೆದ ಏಳು ವರ್ಷಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಅತ್ಯಧಿಕ ಸಂಖ್ಯೆಯಾಗಿದೆ.

2023ರಲ್ಲಿ ಬಹುತೇಕ ತೆರವು ಕಾರ್ಯಾಚರಣೆಗಳು (58.7%) ‘ಸ್ಲಂ’ ತೆರವು, ‘ಅತಿಕ್ರಮಣ’ ತೆರವು ಅಥವಾ ‘ನಗರದ ಸೌಂದರ್ಯೀಕರಣ’ ಯೋಜನೆಗಳ ನೆಪದಲ್ಲಿ ನಡೆದಿವೆ. ಅಲ್ಲದೆ, ಮೂಲಸೌಕರ್ಯ ಯೋಜನೆಗಳು (35%), ಪರಿಸರ ಯೋಜನೆಗಳು (4.7%), ಹಾಗೂ ವಿಪತ್ತು ನಿರ್ವಹಣೆಗಳಂತಹ (0.7%) ಕಾರ್ಯಾಚರಣೆಗಳ ಕಾರಣಕ್ಕೂ ಬಡ ಜನರು ತಮ್ಮ ಮನೆ-ಬದುಕು ಕಳೆದುಕೊಂಡಿದ್ದಾರೆ.

ಕಳೆದ ವರ್ಷ ದೆಹಲಿಯಲ್ಲಿ ಸರಿಸುಮಾರು 2.8 ಲಕ್ಷ ಜನರನ್ನು ತಮ್ಮ ಮನೆಗಳಿಂದ ಹೊರದಬ್ಬಲಾಗಿದ್ದು, ದೇಶದಲ್ಲಿಯೂ ಹೆಚ್ಚು ಜನರನ್ನು ಹೊರ ಹಾಕಿದ ನಗರವಾಗಿದೆ. 2022-23ರ ಎರಡು ವರ್ಷಗಳಲ್ಲಿ 2.9 ಲಕ್ಷಕ್ಕೂ ಹೆಚ್ಚು ಜನರನ್ನು ಹೊರಹಾಕಲಾಗಿದೆ. ಹೊರಹಾಕುವಲ್ಲಿ ನ್ಯಾಯಾಲಯಗಳ ಆದೇಶಗಳು ಮಹತ್ವ ಪಾತ್ರವಹಿಸಿವೆ.

ಹೊರಹಾಕಲ್ಪಟ್ಟವರಲ್ಲಿ ಹೆಚ್ಚಿನವರಿಗೆ ಪುನರ್ವಸತಿ ಸೌಲಭ್ಯಗಳು ದೊರೆತಿಲ್ಲ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸುವಲ್ಲಿ ವಿಫಲರಾಗಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ, ಭಾರತದಾದ್ಯಂತ ಸುಮಾರು 17 ದಶಲಕ್ಷ (1.7 ಕೋಟಿ) ಜನರು ವಿವಿಧ ಕಾರಣಗಳಿಗಾಗಿ ಹೊರ ದಬ್ಬುವಿಕೆ ಮತ್ತು ಸ್ಥಳಾಂತರದ ಬೆದರಿಕೆಯಿಂದ ಬದುಕುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ಈ ಸುದ್ದಿ ಓದಿದ್ದೀರಾ?: ಪೆಟ್ರೋಲ್ ಪಂಪ್‌ಗಳಲ್ಲಿ ‘ಮೋದಿ ಕಿ ಗ್ಯಾರಂಟಿ’ ಹೋರ್ಡಿಂಗ್ ಹಾಕಲು ಸೂಚನೆ!

ವರದಿಯು ಅಗತ್ಯ ಕ್ರಮದ ತುರ್ತು ಅಗತ್ಯತೆಯನ್ನು ಒತ್ತಿಹೇಳಿದೆ. ಎಲ್ಲ ರೀತಿಯಲ್ಲಿಯೂ ಹೊರ ದಬ್ಬುವ ಕಾರ್ಯಾಚರಣೆಗಳನ್ನು ನಿಷೇಧಿಸಬೇಕು ಎಂದು ಕರೆಕೊಟ್ಟಿದೆ. ಯಾವುದೇ ಹೊರ ದೂಡುವಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು ಸರಿಯಾದ ಪ್ರಕ್ರಿಯೆಯನ್ನು ಅನುಸರಿಬೇಕು. ಸಂತ್ರಸ್ತರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂಬುದನ್ನು ಒತ್ತಿಹೇಳಿದೆ. ಇದಲ್ಲದೆ, ಎಲ್ಲ ಸ್ಥಳಾಂತರಗೊಂಡ ಕುಟುಂಬಗಳಿಗೆ ಪುನರ್ವಸತಿ ಮತ್ತು ಪರ್ಯಾಯ ವಸತಿಗಳನ್ನು ಒದಗಿಸಬೇಕೆಂದು ಪ್ರತಿಪಾದಿಸಿದೆ.

ಹೆಚ್ಚುವರಿಯಾಗಿ, ನಗರ ಮತ್ತು ಗ್ರಾಮೀಣ ಸಮುದಾಯಗಳಿಗೆ ಸಾಕಷ್ಟು ವಸತಿ ಮತ್ತು ಭೂಮಿಯ ಹಕ್ಕನ್ನು ಎತ್ತಿಹಿಡಿಯುವ ಅಗತ್ಯವನ್ನು ವರದಿ ಒತ್ತಿಹೇಳಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಗೆ ಅನುಗುಣವಾಗಿ ಹಿಡುವಳಿಯ ಭದ್ರತೆಯನ್ನು ಒದಗಿಸುವ ಕ್ರಮಗಳ ಅನುಷ್ಠಾನಕ್ಕೆ ಆಗ್ರಹಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X