“ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದವು ಇಂಡಿಯಾ ಮೈತ್ರಿಕೂಟದ ಮೇಲಿದ್ದು, ಕಡಿಮೆ ಎಂದರೂ 295 ಸ್ಥಾನಗಳನ್ನು ಗೆಲ್ಲುವ ನಂಬಿಕೆ ಇದೆ” ಎಂದು ‘ಇಂಡಿಯಾ’ ಮೈತ್ರಿಕೂಟದ ಸಭೆಯ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
ಇಂದು ಅಂತಿಮ ಹಂತದ ಚುನಾವಣೆ ನಡೆಯುತ್ತಿದೆ. ಅಲ್ಲದೇ, ಜೂನ್ 4ರಂದು ಮತ ಎಣಿಕೆಗೆ ತಮ್ಮ ಕಾರ್ಯತಂತ್ರವನ್ನು ಚರ್ಚಿಸಲು ‘ಇಂಡಿಯಾ’ ಮೈತ್ರಿಕೂಟದ ಹಿರಿಯ ನಾಯಕರು ಇಂದು ದೆಹಲಿಯಲ್ಲಿರುವ ಖರ್ಗೆ ನಿವಾಸದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಸಭೆ ನಡೆಸಿದರು.
𝐈𝐍𝐃𝐈𝐀 𝐚𝐥𝐥𝐢𝐚𝐧𝐜𝐞 𝐰𝐢𝐥𝐥 𝐰𝐢𝐧 𝟐𝟗𝟓+ 𝐬𝐞𝐚𝐭𝐬 🇮🇳 ✌️ pic.twitter.com/CXMHl4t66Z
— Congress (@INCIndia) June 1, 2024
ಈ ಸಭೆಯ ಬಳಿಕ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಇಂದು ಹೆಚ್ಚಿನ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ಪ್ರಸಾರ ಮಾಡುವಲ್ಲಿ ನಿರತವಾಗಿದೆ. ಎಕ್ಸಿಟ್ ಪೋಲ್‌ನಲ್ಲಿ ಭಾಗವಹಿಸಲು ಬಿಜೆಪಿ ಮತ್ತದರ ನಾಯಕರು ಉತ್ಸುಕದಲ್ಲಿದ್ದಾರೆ. ಆದರೆ ಈ ಸಮೀಕ್ಷೆಯ ಚರ್ಚೆಯಲ್ಲಿ ಭಾಗವಹಿಸಲು ಇಂಡಿಯಾ ಮೈತ್ರಿಕೂಟದ ನಾಯಕರು ಭಾಗವಹಿಸುತ್ತಿಲ್ಲ. ನಮ್ಮ ಮೈತ್ರಿಕೂಟಕ್ಕೆ ಜನರ ಆಶೀರ್ವಾದವು ಇರಲಿದೆ ಎಂಬ ನಂಬಿಕೆ ಇದೆ. ಕಡಿಮೆ ಎಂದರೂ 295 ಸ್ಥಾನಗಳನ್ನು ಗೆಲ್ಲುವ ನಂಬಿಕೆ ನಮಗಿದೆ” ಎಂದು ಹೇಳಿದರು.
INDIA जीतेगा 🇮🇳 pic.twitter.com/Tr9pUQYdW2
— Congress (@INCIndia) June 1, 2024
“ಮತ ಎಣಿಕೆಯ ದಿನ ಅಂಚೆ ಮತ ಎಣಿಕೆಯ ವಿಚಾರವಾಗಿ ಕೆಲವೊಂದು ಸಲಹೆಗಳನ್ನು ನಾವು ಚುನಾವಣಾ ಆಯೋಗಕ್ಕೆ ನೀಡಬೇಕಿದೆ. ಹಾಗಾಗಿ, ನಾಳೆ ಭೇಟಿಗೆ ಸಮಯ ಕೇಳಿದ್ದೇವೆ” ಎಂದ ಮಲ್ಲಿಕಾರ್ಜುನ ಖರ್ಗೆ, “ಮತ ಎಣಿಕೆಯ ದಿನ ಕೊನೆಯ ಕ್ಷಣದವರೆಗೂ ಮತ ಎಣಿಕೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ನಮ್ಮ ಮೈತ್ರಿಕೂಟದ ಮುಖಂಡರು ಕಣ್ಣಿಟ್ಟಿರಬೇಕು” ಎಂದು ಸಲಹೆ ನೀಡಿದರು.
“ಇಂದಿನ ಸಭೆಯಲ್ಲಿ ಎಲ್ಲ ಪಕ್ಷದ ಹಿರಿಯ ನಾಯಕರು ಭಾಗವಹಿಸಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ನಾವೆಲ್ಲರೂ ಒಂದಾಗಿದ್ದೇವೆ. ದಯವಿಟ್ಟು ನಮ್ಮ ನಡುವೆ ಬಿರುಕು ಉಂಟು ಮಾಡಲು ಪ್ರಯತ್ನಿಸಬೇಡಿ” ಎಂದು ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳಿಗೆ ಕಿವಿಮಾತು ಹೇಳಿದರು.
#WATCH | Delhi: After the INDIA alliance leaders meet, Congress National President Mallikarjun Kharge says, “… INDIA Alliance will win at least 295 seats.” pic.twitter.com/ROy2n1EnOa
— ANI (@ANI) June 1, 2024
ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ ವೇಣುಗೋಪಾಲ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಪಂಜಾಬ್ ಸಿಎಂ ಭಗವಂತ್ ಮಾನ್, ಆಪ್ ಸಂಸದ ಸಂಜಯ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಡಿಎಂಕೆ ಸಂಸದೀಯ ಪಕ್ಷದ ನಾಯಕ ಟಿಆರ್ ಬಾಲು ಸೇರಿದಂತೆ ಪ್ರತಿಪಕ್ಷಗಳ ಮೈತ್ರಿಕೂಟದ ಎಲ್ಲ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

Exit poll only preplanned strategy of bjp, godi media, with ec alliance, godi media predict exit poll, ruling party celebrate and EC announce poll predict. write it down for june 4.