ಇಸ್ರೇಲ್‌ನಿಂದ ನಿಷೇಧಿಸಲ್ಪಟ್ಟ ಬಿಳಿ ರಂಜಕ ಅಸ್ತ್ರ ಬಳಕೆ: ‘ಹ್ಯೂಮನ್‌ ರೈಟ್ಸ್‌ ವಾಚ್‌’ ಆರೋಪ

Date:

Advertisements

ಇಸ್ರೇಲ್ ಸೇನೆಯು ಗಾಝಾ ಮತ್ತು ಲೆಬನಾನ್‌ ವಿರುದ್ಧದ ಕಾರ್ಯಾಚರಣೆಗಳ ವೇಳೆ ಬಿಳಿ ರಂಜಕ ಬಾಂಬ್‌ಗಳನ್ನು ಬಳಸಿದೆ ಎಂದು ಹ್ಯೂಮನ್‌ ರೈಟ್ಸ್‌ ವಾಚ್‌ ಆರೋಪಿಸಿದೆ.

ಈ ಬಗ್ಗೆ ವಿಡಿಯೋ ದಾಖಲೆಗಳನ್ನು ಹಂಚಿಕೊಂಡು ಆರೋಪಿಸಿರುವ ಹ್ಯೂಮನ್‌ ರೈಟ್ಸ್‌ ವಾಚ್‌, ಬಿಳಿ ರಂಜಕ ಬಾಂಬ್‌ನಂತಹ ಅಸ್ತ್ರಗಳ ಬಳಕೆಯಿಂದ ನಾಗರಿಕರ ಮೇಲೆ ಹೆಚ್ಚು ಅಪಾಯ ಉಂಟು ಮಾಡುತ್ತದೆ ಹಾಗೂ ದೀರ್ಘಕಾಲಿಕ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ತಿಳಿಸಿದೆ.

ಅ.10ರಂದು ಲೆಬನಾನ್‌ನಲ್ಲಿ ಹಾಗೂ ಅ.11ರಂದು ಗಾಝಾದಲ್ಲಿ ತೆಗೆಯಲಾದ ವಿಡಿಯೋಗಳನ್ನು ತಾನು ಪರಿಶೀಲಿಸಿರುವುದಾಗಿ ಹೇಳಿರುವ ಹ್ಯೂಮನ್‌ ರೈಟ್ಸ್‌ ವಾಚ್‌, ಬಿಳಿ ರಂಜಕ ಹೊಂದಿದ ಹಲವು ಶಸ್ತ್ರಗಳ ಬಳಕೆ ನೋಡಿದ್ದೇವೆ. ವೀಡಿಯೋಗಳಲ್ಲಿ ಗಾಝಾ ನಗರ ಬಂದರು ಮತ್ತು ಇಸ್ರೇಲ್-ಲೆಬನಾನ್‌ ಗಡಿಯ ಭಾಗದ ಎರಡು ಗ್ರಾಮೀಣ ಭಾಗಗಳಲ್ಲಿ ಇದನ್ನು ಇಸ್ರೇಲ್ ಬಳಸಿದೆ.

Advertisements

ಆದರೆ ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್‌ ಮಿಲಿಟರಿ, ಪ್ರಸ್ತುತ ಗಾಝಾದಲ್ಲಿ ಬಿಳಿ ರಂಜಕ ಹೊಂದಿದ ಶಸ್ತ್ರಾಸ್ತ್ರಗಳನ್ನು ಬಳಸಿದ ಬಗ್ಗೆ ತಿಳಿದಿಲ್ಲ ಎಂದು ಹೇಳಿದೆ. ಆದರೆ ಬಿಳಿ ರಂಜಕವನ್ನು ಲೆಬನಾನ್‌ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಲಾಗಿದೆಯೇ ಎಂಬ ಪ್ರಶ್ನೆಗೆ ಇಸ್ರೇಲ್‌ ಮಿಲಿಟರಿ ಉತ್ತರಿಸಿಲ್ಲ.

ಈ ವೀಡಿಯೋಗಳ ಲಿಂಕ್‌ ಅನ್ನೂ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದೆ. ಎರಡೂ ವೀಡಿಯೋಗಳು ಇಸ್ರೇಲ್-ಲೆಬನಾನ್‌ ಗಡಿ ಪ್ರದೇಶದ್ದಾಗಿದ್ದರೆ ಗಾಝಾದಲ್ಲಿನ ವೀಡಿಯೋವನ್ನು ಒದಗಿಸಿಲ್ಲ. ಆದರೆ ಪ್ಯಾಲೆಸ್ತೀನಿ ಟಿವಿ ವಾಹಿನಿಗಳು ಇತ್ತೀಚೆಗೆ ಪ್ರಸಾರ ಮಾಡಿದ ವಿಡಿಯೋಗಳಲ್ಲಿ ಆಗಸದಲ್ಲಿ ತೆಳುವಾದ ಬಿಳಿ ಹೊಗೆ ಗಾಝಾದಲ್ಲಿ ಕಾಣಿಸುತ್ತದೆ ಹಾಗೂ ಇವು ಬಿಳಿ ರಂಜಕ ಎಂದು ತಿಳಿಸಿವೆ.

ಈ ಬಗ್ಗೆ ‘ಅಲ್ ಜಝೀರಾ’ದೊಂದಿಗೆ ಮಾತನಾಡಿರುವ ಹ್ಯೂಮನ್‌ ರೈಟ್ಸ್‌ ವಾಚ್‌ನ ಅಹ್ಮದ್ ಬೆಂಚೆಮ್ಸಿ, ‘ಬಿಳಿ ರಂಜಕವು ಸ್ಮೋಕ್‌ಸ್ಕ್ರೀನ್‌ ಸೃಷ್ಟಿಸುತ್ತವೆ. ಗುರಿಗಳನ್ನು ಗುರುತಿಸಲು, ಬಂಕರ್‌ ಮತ್ತು ಕಟ್ಟಡಗಳನ್ನು ಸುಟ್ಟು ಹಾಕಲು ಬಳಕೆಯಾಗುತ್ತವೆ. ಆದರೆ ಇಸ್ರೇಲ್ ನಾಗರಿಕರ ಮೇಲೆ ಹೆಚ್ಚು ಅಪಾಯ ಉಂಟು ಮಾಡಲೆಂದೇ ಇದನ್ನು ಬಳಸಿದೆ. ಇದು ಮನುಷ್ಯನ ಮೇಲೆ ಬಿದ್ದರೆ ಆತನ ದೇಹವೇ ಕರಗಿ ಬಿಡಬಹುದು. ಇದು ಅಂತಾರಾಷ್ಟ್ರೀಯ ನಿಯಮಗಳಡಿ ನಿಷೇಧವಿದೆ. ಆದರೂ ಅದನ್ನು ಬಳಸಲಾಗಿದೆ’ ಎಂದು ತಿಳಿಸಿದ್ದಾರೆ.

ಇಸ್ರೇಲ್‌ನ ಮಿಲಿಟರಿ ತಾನು 2008-2009ರಲ್ಲಿ ಗಾಝಾದಲ್ಲಿ ಬಳಸಿದ್ದ ಬಿಳಿ ರಂಜಕ ಸ್ಮೋಕ್‌ಸ್ಕ್ರೀನ್‌ ಅಸ್ತ್ರಗಳನ್ನು ಕೈಬಿಡುವುದಾಗಿ 2013ರಲ್ಲಿ ತಿಳಿಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಬಂಧಿಸಿದ ಇಡಿ: ನಗದು ಸಹಿತ ಚಿನ್ನಾಭರಣ ವಶಕ್ಕೆ

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ, ಕಚೇರಿ ಸೇರಿದಂತೆ 31...

ಗಾಝಾದಲ್ಲಿ ವಿದೇಶಿ ಮಾಧ್ಯಮ ಪ್ರವೇಶ ನಿರ್ಬಂಧ ತೆರವುಗೊಳಿಸಿ: ಇಸ್ರೇಲ್‌ಗೆ 27 ದೇಶಗಳ ಒಕ್ಕೂಟ ಆಗ್ರಹ

ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ ಸರ್ಕಾರವು ವಿಧಿಸಿರುವ ವಿದೇಶಿ ಪತ್ರಕರ್ತರ ನಿರ್ಬಂಧವನ್ನು ತೆಗೆದುಹಾಕಿ...

ಧರ್ಮಸ್ಥಳ ಪ್ರಕರಣ | ನಾವು ಯಾರ ಪರವೂ ಇಲ್ಲ; ನ್ಯಾಯದ ಪರ: ಡಿಸಿಎಂ ಡಿ.ಕೆ.ಶಿವಕುಮಾರ್

"ನಾವು ಧರ್ಮಸ್ಥಳದವರ ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ...

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್

ಬಿಹಾರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ(SIR) ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತ...

Download Eedina App Android / iOS

X