- ‘ರವಿಕುಮಾರ್ ಗಣಿಗ ಹೇಳಿಕೆ ವೈಯಕ್ತಿಕವಾದದ್ದು’
- ‘ಹೈಕಮಾಂಡ್ ಇದೆಲ್ಲವನ್ನು ಗಮನಿಸುತ್ತದೆ’
ಎರಡುವರೆ ವರ್ಷದ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಹೇಳಿಕೆ ವೈಯಕ್ತಿಕವಾಗಿದ್ದು, ಅವರ ಮೇಲಿನ ಪ್ರೀತಿಯಿಂದ ಹೇಳಿರಬಹುದು. ರಾಜ್ಯಕ್ಕೆ ಯಾರು ಮುಖ್ಯಮಂತ್ರಿಯಾಗಬೇಕು, ಯಾರು ಮುಂದುವರಿಯಬೇಕು ಎಂಬುದನ್ನು ನಮ್ಮ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎರಡುವರೆ ವರ್ಷಗಳಾದ ಬಳಿಕ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ ಎಂದು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಅವರ ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
“ಅಸಲಿಗೆ ಬದಲಾವಣೆಯ ಅವಶ್ಯಕತೆ ಇದೆಯಾ, ಇಲ್ಲವಾ, ಸಚಿವ ಸಂಪುಟದಲ್ಲಿ ಯಾರಿರಬೇಕು ಮೊದಲಾದ ಎಲ್ಲ ಸಂಗತಿಗಳನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಂದೀಪ್ ಸಿಂಗ್ ಸುರ್ಜೆವಾಲಾ ಅವರನ್ನೊಳಗೊಂಡ ಹೈ ಕಮಾಂಡ್ ತೀರ್ಮಾನಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಐಸ್‌ಲ್ಯಾಂಡ್ ಮಹಿಳೆಯರ ಮುಷ್ಕರದಲ್ಲಿ ಅಡಗಿರುವ ಪಾಠಗಳು
ಕೆಲ ಶಾಸಕರು ತಮ್ಮ ತಮ್ಮ ನಾಯಕರ ಮೇಲಿನ ಪ್ರೀತಿಯಿಂದ ಅವರು ಸಿಎಂ ಆಗಬೇಕು ಅನ್ನುತ್ತಿರುತ್ತಾರೆ. ಹೈಕಮಾಂಡ್ ಅದೆಲ್ಲವನ್ನು ಗಮನಿಸುತ್ತಿರುತ್ತದೆ. ಯಾವುದೇ ನಾಯಕರು ಮುಖ್ಯಮಂತ್ರಿ ವಿಚಾರವನ್ನು ಬಹಿರಂಗವಾಗಿ ಮಾತನಾಡಬಾರದು ಎಂದು ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ, ಸ್ವತಃ ಡಿಕೆ ಶಿವಕುಮಾರ್ ಕೂಡ ಹೇಳಿದ್ದಾರೆ” ಎಂದು ಹೇಳಿದರು.