“ಜೆಡಿಎಸ್ ಮತ್ತು ಬಿಜೆಪಿಯವರು ಸೇರಿಕೊಂಡು ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಸುತ್ತಿದ್ದಾರೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿ (ಇ.ಡಿ) ಏನು ಮಾಡಿಸುತ್ತಿದ್ದಾರೆ ಎಂಬುದು ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ರಾಮನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನನ್ನು ಕಟ್ಟಿ ಹಾಕಲು ಅದೇನು ರಾಜಕಾರಣ ಮಾಡುತ್ತಾರೊ ಮಾಡಲಿ. ನನ್ನನ್ನು ಜೈಲಿಗೆ ಕಳಿಸುತ್ತೇನೆ ಎಂದು ಹಿಂದೆ ನಮ್ಮ ಜಿಲ್ಲೆಯವರಷ್ಟೇ ಅಲ್ಲದೆ ಬೇರೆಯವರೂ ಹೇಳಿದ್ದರು. ನಾನು ಎಲ್ಲದಕ್ಕೂ ತಯಾರಿದ್ದೇನೆ. ಯಾವುದಕ್ಕೂ ಹೆದರುವುದಿಲ್ಲ” ಎಂದು ತಿರುಗೇಟು ನೀಡಿದರು.
ಹಿಂದೆಯೂ ಒಂದಾಗಿದ್ದರು
“ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸಹೋದರರನ್ನು ಕಟ್ಟಿ ಹಾಕಲು ಬದ್ಧ ವೈರಿಗಳು ಮುಂದಾಗಿದ್ದಾರೆ. ಅವರು ಈಗಷ್ಟೇ ಅಲ್ಲ, ಹಿಂದೆಯೂ ಒಂದಾಗಿದ್ದರು. ಸುರೇಶ್ ಅವರ ಎದುರು ಹಿಂದೊಮ್ಮೆ ಒಬ್ಬರೇ ಅಭ್ಯರ್ಥಿಯನ್ನು ನಿಲ್ಲಿಸಿದ್ದರು. ಆದರೆ, ಸುರೇಶ್ ಅವರು ಮಾಡಿರುವ ಅಭಿವೃದ್ಧಿ ಕೆಲಸವನ್ನು ರಾಜ್ಯದ ಯಾವ ಸಂಸದರೂ ಮಾಡಿಲ್ಲ. ಅದಕ್ಕೆ ದಾಖಲೆಗಳಿವೆ. ಸುರೇಶ್ ವಿರುದ್ಧ ಸ್ಪರ್ಧಿಸಲು ಮುಂದಾಗಿರುವವರು ತಮ್ಮ ಕೈಲಿ ಅಧಿಕಾರವಿದ್ದಾಗ ಏನು ಮಾಡಿದ್ದಾರೆ” ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು, ಹಿಂದೆ ಮೋದಿ ವಿರುದ್ಧ ಏನು ಹೇಳಿಕೆ ನೀಡಿದ್ದರು ಎಂದು ನೆನಪಿಸಿಕೊಳ್ಳಲಿ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ದೇವೇಗೌಡರು ಹೇಳಿದ್ದಾಗ, ನಮ್ಮ ಮನೆಯಲ್ಲಿ ಜಾಗ ಕೊಡ್ತಿನಿ ಎಂದು ಮೋದಿ ಹೇಳಿದ್ದರಲ್ಲವೆ” ಎಂದು ಲೇವಡಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು
“ಬಿಡದಿ ಪ್ಲ್ಯಾನಿಂಗ್ ಅಥಾರಿಟಿಯನ್ನು ಗ್ರೇಟರ್ ಬೆಂಗಳೂರು ಅಂತಾ ನಾಮಕರಣ ಮಾಡಿ ನಕ್ಷೆ ತಯಾರಾಗುತ್ತಿದೆ. ರಾಮನಗರ ಮಾದರಿ ಜಿಲ್ಲೆಯಾಗಿ ಮಾಡಲು ಸಂಸದರು, ಶಾಸಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇವೆ” ಎಂದರು.
“ಬಿಡದಿ, ಆನೇಕಲ್ಗೆ ಮೆಟ್ರೋ ವಿಸ್ತರಿಸಲು DPR ರೆಡಿ ಮಾಡುತ್ತಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ರಾಮಲಿಂಗಾರೆಡ್ಡಿ ದೊಡ್ಡ ಕ್ರಾಂತಿ ಮಾಡುತ್ತಿದ್ದಾರೆ. ನನ್ನ ಜಿಲ್ಲೆಯ ಜನರ ಪರವಾಗಿ ರಾಮಲಿಂಗಾರೆಡ್ಡಿಗೆ ಅಭಿನಂದಿಸುತ್ತೇನೆ. ಪ್ಯಾಸೆಂಜರ್ ಸೀಟು ಅನುಕೂಲ ಆಗುತ್ತೆ. ಇದಕ್ಕೆ ಕ್ಯಾಮೆರಾ, ಫೋನ್ ಚಾರ್ಜರ್ ಅಳವಡಿಸಿದ್ದಾರೆ” ಎಂದು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವ್ರು ತನ್ನ ವಿರುದ್ಧ ಷಡ್ಯಂತ್ರ ಎಂಬೆಲ್ಲಾ ಮಾತನಾಡ್ತಾರೆ… ಅದ್ರೆ ವಾಸ್ತದಲ್ಲಿ ತಮ್ಮ ಜನರಿಂದ ಕರ್ಟಸಿ ಪಡೆಯುವ ನಾಟಕವಾಡ್ತಿದ್ದಾರೆಂಬುವುದು ಗೊತ್ತಾಗುತ್ತದೆ. ಕಾಂಗ್ರೆಸ್ಸಿಗರು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ವೇಳೆ ಪಕ್ಷ ಹೇಳಿದಂತೆ ತಾವು ಕಾರ್ಯಕ್ರಮಕ್ಕೆ ಹೋಗೋದಿಲ್ಲ ಅಂತೇಳಿದ್ರು. ಆನಂತದಲ್ಲಿ ಸಚಿವ ರಾಮಲಿಂಗಾರೆಡ್ಡಿ ರಾಜ್ಯದ ಶ್ರೀರಾಮನ ದೇಗುಲದಲ್ಲಿ ಪೂಜೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದ್ರು. ಈ ವೇಳೆ ಸಿಎಂ ಸಿದ್ದರಾಮಯ್ಯ ನನಗೆ ಈ ವಿಚಾರ ಗೊತ್ತೇಯಿಲ್ಲ ಅಂದ್ರು.. ಡಿಕೆಶಿ.. ನಮಗೆ ಶ್ರೀರಾಮ ಮುಖ್ಯ ಅಲ್ಲ.. ನಮಗೆ ಸಂವಿಧಾನವೇ ಮುಖ್ಯ ಅಂದ್ರು.. ಈ ರೀತಿಯಾಗಿ ನಾಟಕವಾಡುವ ಈ ಗೋಮುಖವಾಘ್ರಗಳು… ಬಹುಸಂಖ್ಯಾತರ ದೇಶದಲ್ಲಿ ಅಲ್ಪಸಂಖ್ಯಾತರನ್ನು ಒಲೈಸುವ ಕೆಲಸ ಮಾಡ್ತಿದ್ದಾರೆ. ಅದ್ರೆ ಈ ಕಾಂಗ್ರೆಸ್ಸಿನವ್ರಿಗೆ ಸಿಂಗಲ್ ಅಜೆಂಡಾ ಎಂಬುದಿಲ್ಲ… ಕಾಂಗ್ರೆಸ್ ಪಕ್ಷ.. ಸಂಪೂರ್ಣವಾಗಿ ಅಸ್ಪಸಂಖ್ಯಾತರ ಪರವಾದ ಪಕ್ಷ ಎಂದು ಎದೆತಟ್ಟಿಕೊಂಡು ಹೇಳಿಕೊಳ್ಳುವ ತಾಕತ್ತಿಲ್ಲ. ಅಲ್ಲದೇ, ವೋಟ್ ಬ್ಯಾಂಕ್ ಭದ್ರತೆ ಹಿನ್ನಲೆಯಲ್ಲಿ ಅವರನ್ನು ತೃಷ್ಟಿಕರಣಗೊಳಿಸುವ ಕೆಲಸ ಮಾಡುತ್ತಲೇ ಬರುತ್ತಿದೆ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ಸಿಗರಿಗೆ ಬಹುಸಂಖ್ಯಾತ ಹಿಂದೂಗಳ ಮತ ಕೇಳುವ ಅಧಿಕಾರವಿದೆಯೇ…ಅಲ್ಲದೇ, ಈ ವಿಚಾರ ಹಿಂದೂಗಳು ಕೂಡ ಕಾಂಗ್ರೆಸ್ಸಿನ ನಾಟಕವನ್ನು ಗಮನಿಸದಿರುವುದಿಲ್ಲ… ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಾಗದೇ ಪರದಾಡುತ್ತಿರುವ ಕಾಂಗ್ರೆಸ್.. ತನ್ನ ತಪ್ಪುಗಳನ್ನು ಪರಾಮರ್ಶಿಕೊಳ್ಳಲಾಗದ ಅವಿವೇಕಿ ಪಕ್ಷವಾಗಿದೆ. ಬಿಜೆಪಿಯ ಮೋದಿ ಏಕೆ 10 ವರ್ಷಗಳ ಕಾಲ ಪ್ರಧಾನಿ ಆದ್ರೂ ಅವ್ರು ಮಾಡಿದ ಕೆಲಸವೇನು ಅನ್ನೋದನ್ನು ಕೂಡ ಗಮನಿಸದ ಎಡಬಿಡಂಗಿ ಕಾಂಗ್ರೆಸ್ಸಿನಿಂದ ದೇಶದ ಐಕ್ಯತೆ, ಏಕತೆ ಹಾಗು ಸಮಗ್ರತೆ ಸಾಧ್ಯವಿಲ್ಲವೆಂದೇ ಅರಿತ ಪ್ರಜ್ಞಾವಂತ ಮತದಾರ ದೇಶ ಮುಖ್ಯವೆಂದು ಭಾವಿಸಿದ್ದು, ಬಿಜೆಪಿಯನ್ನು ಆಯ್ಕೆ ಮಾಡುತ್ತಿದ್ದಾನೆ. ಹಾಗಂತಾ ಬಿಜೆಪಿ ಮಾಡಿದ್ದೇಲ್ಲವೂ ಸರಿಯ್ಲಲ. ಅದ್ರೆ, ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಬಿಜೆಪಿ ಆಯ್ಕೆ ಸೂಕ್ತ ಎಂದು ಅರಿತಿರುವ ಮತದಾನ ಈ ಬಾರಿಯೂ ಬಿಜೆಪಿ ಆಯ್ಕೆ ಮಾಡಿದ್ರಲ್ಲಿ ಯಾವುದೇ ಆಶ್ಚರ್ಯವಿಲ್ಲ…ದೇಶದ ಬಹುಸಂಖ್ಯಾತರ ಅಸ್ಮಿತೆ, ಹಿಂದೂ ಧರ್ಮದಲ್ಲಿನ ನಂಬಿಕೆಗೆ ಬೆಲೆ ನೀಡಿದ ಗೂಸುಂಬೆ ಕಾಂಗ್ರೆಸ್ಸಿಗರನ್ನು ಹಿಂದೂ ಮತದಾರ ನಂಬುತ್ತಾನೆಯೇ..
ಎಂ. ಶಿವರಾಂ. ಬೆಂಗಳೂರು.