ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ‘ಕರ್ನಾಟಕ ಬಂದ್’ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಬೆಂಗಳೂರಿನ ಪುರಭವನ ಎದುರು ಬಿಎಂಟಿಸಿ ಬಸ್ ಗಾಜು ಒಡೆದ ಘಟನೆ ಹೊರತುಪಡಿಸಿದರೆ ಬಂದ್ ಬಹುತೇಕ ಶಾಂತಿಯುತವಾಗಿತ್ತು.
ಕಾವೇರಿ ಕಣಿವೆ ಭಾಗದ ಜಿಲ್ಲೆಗಳಲ್ಲಿ ಬಂದ್ಗೆ ಉತ್ತಮ ವ್ಯಕ್ತವಾಗಿದ್ದರೆ, ಕಾವೇರಿಯ ಉಗಮ ಸ್ಥಾನವಾದ ಕೊಡಗು ಜಿಲ್ಲೆಗೆ ಬಂದ್ಗೆ ಬಿಸಿ ತಟ್ಟಿಲ್ಲ. ಅಲ್ಲದೆ, ಕೆಲವು ಜಿಲ್ಲೆಗಳಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಬಂದ್ಗೆ ಸಹಕಾರ ನೀಡಿದ ಜಿಲ್ಲೆಗಳಲ್ಲಿ ಅಗತ್ಯ ಸೇವೆ ಬಿಟ್ಟು ಉಳಿದೆಲ್ಲವೂ ಬಹುತೇಕ ಬಂದ್ ಆಗಿದ್ದವು, ಕರ್ನಾಟಕ ಬಂದ್ಗೆ ಸುಮಾರು ಎರಡು ಸಾವಿರ ಸಂಘಟನೆಗಳ ಸಾಥ್ ನೀಡಿದ್ದವು. ಹೋಟೆಲ್, ಮಾಲ್, ಚಲನಚಿತ್ರ ಮಂದಿರಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು ಬಂದ್ ಆಗಿದ್ದವು.
#KarnatakaBandh
— Kamran (@CitizenKamran) September 29, 2023
Scenes from Town Hall, Bangalore Vatal Nagaraj president of Karnataka Okkuta, the organization that called for #KarnatakaBandh has been taken in bus from Town hall to Freedom Park. #bengalurubandh #CauveryIssue pic.twitter.com/pBBrkmRAGs
ಬೆಂಗಳೂರಿನಲ್ಲಿ ಸಿನಿಮಾ ನಟರು, ನಿರ್ಮಾಪಕರು ಹಾಗೂ ತಂತ್ರಜ್ಞರು ಕಾವೇರಿಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಇದೇ ವೇಳೆ ನಟ ಶಿವರಾಜ್ಕುಮಾರ್ ಅವರು ತಮಿಳು ನಟ ಸಿದ್ದಾರ್ಥ್ ಅವರನ್ನು ಕ್ಷಮೆಯೂ ಕೇಳಿದರು.
ಅರ್ಥ ಆಯಿತು ಅಂದುಕೊಳ್ತಿನಿ. ಹೋರಾಟ ನ ಎಲ್ಲಿ ಮಾಡಬೇಕೋ ಅಲ್ಲಿ ಮಾಡ್ಬೇಕು. pic.twitter.com/bGkXNszwxb
— 👑Che_ಕೃಷ್ಣ🇮🇳💛❤️ (@ChekrishnaCk) September 29, 2023
ಬಂದ್ಗೆ ಕರೆ ಕೊಟ್ಟಿದ್ದ ಸಂಘಟಕರಲ್ಲೊರ್ವರಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಖಾಲಿ ಕೊಡ ಹಿಡಿದು, ಬುರ್ಖಾ ಧರಿಸಿ ಪ್ರತಿಭಟಿಸಿ, ಗಮನ ಸೆಳೆದಿದ್ದಾರೆ.
The 83 year old Vatal Nagaraj never fails to surprise! Today, at Karnataka Bandh over Cauvery. #KarnatakaBandh @VatalNagaraj pic.twitter.com/f3INJuKfQP
— DP SATISH (@dp_satish) September 29, 2023
ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಯಿತು. ವಿವಿಧ ಸಂಘಟನೆಗಳು ಬೀದಿಗಿಳಿದು ತಮ್ಮ ಆಕ್ರೋಶ ಹೊರಹಾಕಿದರು. ಖಾಲಿ ಕೊಡ ಹಿಡಿದು, ಉರುಳು ಸೇವೆ ಮಾಡಿ, ಸಂಸದ ಅಣಕು ಶವಯಾತ್ರೆ ನಡೆಸಿ, ತಮಿಳು ಸಿನಿಮಾಗಳ ಪೋಸ್ಟರ್ ಹರಿದು ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿ ಮೆಟ್ರೊ ಸಂಚಾರ ಎಂದಿನಂತೆಯೇ ಇತ್ತು. ಬಿಎಂಟಿಸಿ ಸಂಚಾರ ಇತ್ತಾದರೂ ಎರಡು ಸಾವಿರಕ್ಕೂ ಹೆಚ್ಚು ಟ್ರಪ್ಗಳು ನಡೆಯಲಿಲ್ಲ. ವಿಮಾನ ನಿಲ್ದಾಣದಲ್ಲೂ ಪ್ರತಿಭಟನೆ ನಡೆಯಿತು. ಜತೆಗೆ ಅಲ್ಲಿಗೆ ಹೋಗಲು ಪ್ರಯಾಣಿಕರಿಗೆ ವಾಹನ ಸೌಕರ್ಯ ಇಲ್ಲದ ಕಾರಣ 44 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.
ಕಳೆದ ಮಂಗಳವಾರ ಬೆಂಗಳೂರು ಬಂದ್, ಇಂದು ( ಸೆ29) ಕರ್ನಾಟಕ ಬಂದ್ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. ಬಿಜೆಪಿ ಮತ್ತು ಜೆಡಿಎಸ್ ಈ ಬಂದ್ಗೆ ಬಾಹ್ಯ ಬೆಂಬಲವನ್ನು ನೀಡಿದ್ದವು.
ಎರಡೆರಡು ಬಂದ್ ನಡೆದರು ಕೂಡ ಕರ್ನಾಟಕದ ಸಂಕಷ್ಟ ಮುಗಿಯಲಿಲ್ಲ. ಅಕ್ಟೋಬರ್ 15ರವರೆಗೆ ಪ್ರತಿ ದಿನ 3000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ.