ಇಸ್ರೇಲ್ ವಿರುದ್ಧ ಶನಿವಾರದಿಂದ ದಾಳಿ ನಡೆಸುತ್ತಿರುವ ‘ಹಮಾಸ್’ ಜೊತೆಗೆ ಕೈ ಜೋಡಿಸಿರುವ ಲೆಬನಾನ್‌ನ ‘ಹಿಜ್ಬುಲ್ಲಾ’ ಸಂಘಟನೆಯು, ಇಸ್ರೇಲ್‌ನ ವಿರುದ್ಧ ಬಾಂಬ್ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.
ಭಾನುವಾರ ಬೆಳಗ್ಗೆ ದಕ್ಷಿಣ ಲೆಬನಾನ್‌ನ ಬಳಿ ಇರುವ ಇಸ್ರೇಲಿನ ಮೂರು ಸೇನಾ ಹೊರಠಾಣೆಗಳ ಮೇಲೆ ಶೆಲ್‌ಗಳಿಂದ ಬಾಂಬ್ ದಾಳಿ ಮಾಡಿರುವುದಾಗಿ ಲೆಬನಾನ್‌ನ ‘ಹಿಜ್ಬುಲ್ಲಾ’ ಸಂಘಟನೆ ಹೇಳಿಕೊಂಡಿದೆ. ಅಲ್ಲದೇ, ದಾಳಿ ನಡೆಸಿರುವ ವಿಡಿಯೋ ಕೂಡ ಬಿಡುಗಡೆ ಮಾಡಿದೆ.
🚨BREAKING: HEZBOLLAH STATEMENT RELEASED CLAIMING RESPONSIBILITY FOR THE ATTACK ON ISRAEL
Hezbollah has made a statement about the attacks in the past hour:
“The groups of Martyr Haj Emad Mughniyeh in the Islamic Resistance has attacked three positions of the Zionist occupation… pic.twitter.com/5SW6PvQmuD
— Mario Nawfal (@MarioNawfal) October 8, 2023
ಬಾಂಬ್ ಹಾಕಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಸ್ರೇಲ್‌ನ ಸೇನಾ ಔಟ್‌ಪೋಸ್ಟ್‌ಗಳ ಮೇಲೆ ಬಾಂಬ್‌ಗಳನ್ನು ಹಾರಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಇಸ್ರೇಲಿನ ಮಿಲಿಟರಿ ಹೊರಠಾಣೆಗಳನ್ನು ಗುರಿಯಾಗಿಸಿಕೊಂಡು ಶೆಲ್ ಹಾಗೂ ಕ್ಷಿಪಣಿಗಳನ್ನು ಹಾರಿಸಿದ್ದೇವೆ. ರಾಡಾರ್ ಕೇಂದ್ರವನ್ನು ನಿಷ್ಕ್ರಿಯಗೊಳಿಸಿದ್ದೇವೆ ಎಂದು ಹಿಜ್ಬುಲ್ಲಾ ಹೇಳಿಕೊಂಡಿದೆ.
Footage apparently from the Hezbollah attack on one of the Israeli military sites this morning.
Hezbollah hasn’t officially entered the field, but is likely sending Israel a warning shot in light of IDF plans for a ground invasion on Gaza. pic.twitter.com/ZwarIqXZ3U
— Naks Bilal (@NaksBilal) October 8, 2023
ಇಸ್ರೇಲ್‌ನ ರಾಡಾರ್ ಕೇಂದ್ರವನ್ನು ನೇರವಾಗಿ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂಬ ವರದಿಗಳೂ ಇವೆ. ಸಿಗ್ನಲಿಂಗ್ ಟವರ್ ಗಳಿರುವ ಪ್ರದೇಶದಲ್ಲಿ ಸ್ಫೋಟಗಳು ನಡೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ.
Live stream: Isreal attack on ghaza tower #Palestine #Israel #Hamas #FreePalestine #طوفان_الأقصى #SupportGaza #supportghaza #IsrealUnderAttack pic.twitter.com/xi6om2xwnW
— AlettaOcean (@Hot_aletta) October 8, 2023
ಇಸ್ರೇಲಿ ಸೇನೆಯು ಲೆಬನಾನ್‌ನ ಗಡಿಯುದ್ದಕ್ಕೂ ಬೀಡುಬಿಟ್ಟಿದ್ದು, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳು ಸೈನ್ಯದ ಅಧಿಕಾರಿಗಳಿಗೆ ತಿಳಿಸಿದ್ದು, ಯುದ್ಧಕ್ಕೆ ಸಿದ್ಧರಾಗಿರಬೇಕು ಎಂದು ಆದೇಶಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.
Breaking News: Rockets fired from southern #Lebanon towards Israel.#Hezbollah Targets Israeli Radar Station 🔥🚨💥🇮🇱🇵🇸🚀#Gaza #Palestine #MiddleEast #hamasattack #ısrael #IraniansStandWithIsrael #IsrealUnderAttack Israelites #BigTime Mossad Qatar Taliban Palestine #zadakhabar pic.twitter.com/Z5q5eQSkWI
— zadakhabar (@zadakhabar) October 8, 2023
ಹಮಾಸ್ ಜೊತೆಗೆ ಹಿಜ್ಬುಲ್ಲಾ ಸಂಘಟನೆ ಕೈ ಜೋಡಿಸಿರುವುದು ಇಸ್ರೇಲ್ ಅನ್ನು ಕೆರಳಿಸಿದ್ದು, ಇದು ಮತ್ತಷ್ಟು ದೀರ್ಘ ಕಾಲದ ಯುದ್ಧದ ಮುನ್ಸೂಚನೆಯನ್ನು ನೀಡಿದೆ.
ಇಸ್ರೇಲ್ ಹಾಗೂ ಪ್ಯಾಲೆಸ್ತೀನಿನ ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವು ಅತ್ಯಂತ ವಿನಾಶಕಾರಿ ತಿರುವು ಪಡೆಯುತ್ತಿದ್ದು, ಈವರೆಗೂ ಈ ಯುದ್ಧದಲ್ಲಿ ಕನಿಷ್ಠ 500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
LATEST : Hezhbollah fires dozens of rockets against Israel from Lebanon#Israel #Palestine #Hamas #طوفان_الأقصى #Gaza #حماس pic.twitter.com/a0dpm9B6IY
— Hareem Shah (@_Hareem_Shah) October 8, 2023
ಮಾಹಿತಿಯ ಪ್ರಕಾರ, ಈ ಯುದ್ಧದಲ್ಲಿ ಇದುವರೆಗೆ ಇಸ್ರೇಲ್‌ವೊಂದರಲ್ಲಿ ಕನಿಷ್ಠ 300ಕ್ಕೂ ಅಧಿಕ ಇಸ್ರೇಲಿಯನ್ನರು ಸಾವನ್ನಪ್ಪಿದ್ದು, 1750 ಜನ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಗಾಝಾ ಮೇಲೆ ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇಸ್ರೇಲ್ ಹಿಂದೆಂದೂ ಕಂಡಿರದ ಐತಿಹಾಸಿಕ ದುರಂತವನ್ನು ಕಂಡಿದೆ. ಕೇವಲ 20 ನಿಮಿಷಗಳಲ್ಲಿ ಇಸ್ರೇಲ್ ಮೇಲೆ 5 ಸಾವಿರ ರಾಕೆಟ್ಗಳನ್ನು ಹಾರಿಸಿರುವುದಾಗಿ ನಿನ್ನೆ ಹಮಾಸ್ ವಿಡಿಯೋ ಬಿಡುಗಡೆ ಮಾಡಿತ್ತು.
🚨 BREAKING – Hamas releases footage of missile attacks on Israel today#Israel #Palestine #War #Hamas #Rockets #Gaza #Palestinian#TelAviv #IsraelUnderAttack #IDF #Lebanon pic.twitter.com/jLtlbFQBmX
— T R U T H P O L E (@Truthpole) October 8, 2023