ಮಣಿಪುರ ಹಿಂಸಾಚಾರ | ರಾಷ್ಟ್ರಪತಿ ದ್ರೌಪದಿ ಮುರ್ಮು ತಕ್ಷಣ ಮಧ್ಯ ಪ್ರವೇಶಿಸಲಿ: ಐವನ್ ಡಿ ಸೋಜ

Date:

Advertisements
  • ‘ದೇಶದ ಪ್ರಧಾನಿ, ಮಣಿಪುರ ಸಿಎಂ ತಳೆದಿರುವ ನಿಲುವು ನಾಚಿಗೇಡು’
  • ರಾಜ್ಯ ಬಿಜೆಪಿ ಸ್ಥಿತಿ ನಾವಿಕನಿಲ್ಲದ ಹಡಗಿನಂತಾಗಿದೆ: ಐವನ್ ಡಿ ಸೋಜ

ಮಣಿಪುರದ ಘಟನೆಯ ಬಗ್ಗೆ ದೇಶದ ಪ್ರಧಾನಿ ಮತ್ತು ಅಲ್ಲಿನ ಮುಖ್ಯಮಂತ್ರಿ ತಳೆದಿರುವ ನಿಲುವು ನಾಚಿಗೇಡು. ಅಲ್ಲಿ ಹಿಂಸೆ ದೌರ್ಜನ್ಯ ಹತ್ತಿಕ್ಕುವ ಬದಲು ಪ್ರಧಾನ ಮಂತ್ರಿ ಗುಜರಾತ್, ಛತ್ತೀಸ್ ಗಡದ ಉದಾಹರಣೆ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಮತ್ತು ಎಐಸಿಸಿ ಮುಖಂಡ ಐವನ್ ಡಿ ಸೋಜ ವಾಗ್ದಾಳಿ ನಡೆಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, “ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ಹಿಂಸೆ ಸೇರಿದಂತೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗಟ್ಟಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ತಕ್ಷಣ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ಯನ್ನು ನಿಯಂತ್ರಿಸಬೇಕು. ಅಲ್ಲಿನ ಆದಿವಾಸಿ ಬುಡಕಟ್ಟು ಸೇರಿದಂತೆ ಜನ ಸಾಮಾನ್ಯರ ರಕ್ಷಣೆಗೆ ಮುಂದಾಗಬೇಕು” ಎಂದು ಒತ್ತಾಯಿಸಿದರು.

‘ಚುನಾವಣಾ ಪ್ರಚಾರ’ಕ್ಕೆತೆರಳುವ ನಮ್ಮದೇಶದ ಪ್ರಧಾನಿ ಮಣಿಪುರದ ಸಮಸ್ಯೆ ಬಗೆಹರಿಸಲು ಎಷ್ಟು ಸಮಯ ನೀಡುತ್ತಿದ್ದಾರೆ? ಅಲ್ಲಿ ಮಾನ ವೀಯತೆಯ ಕುರುಹು ಇಲ್ಲದಂತೆ ಹಿಂಸಾಚಾರ ನಡೆಯುತ್ತಿದೆ. ದೇಶದ ಬಿಜೆಪಿಯ ಮಹಿಳಾ ಸಂಸದರು, ಸಚಿವರು ಮಹಿಳಾ ದೌರ್ಜನ್ಯದ ಬಗ್ಗೆ ಮೌನವಹಿಸಿರುವುದು ನಾಚಿಗೇಡು” ಎಂದು ಹರಿಹಾಯ್ದರು.

Advertisements

ನಾವಿಕನಿಲ್ಲದ ಹಡಗು ಬಿಜೆಪಿ

“ರಾಜ್ಯದಲ್ಲಿ ಬಿಜೆಪಿ ನಾವಿಕನಿಲ್ಲದ ಹಡಗಿನಂತಾಗಿದೆ. ದೇಶದ ಯಾವುದೇ ರಾಜ್ಯದಲ್ಲಿ ಕರ್ನಾಟಕ ಹೊರತಾಗಿ ವಿಪಕ್ಷಗಳು ನಾಯಕನಿಲ್ಲದೆ ಬಜೆಟ್ ಅಧಿವೇಶನ ನಡೆದ ಉದಾಹರಣೆಗಳಿಲ್ಲ” ಎಂದರು.

“ಗಮನ ಸೆಳೆಯಬೇಕಾದ ಸದನದಲ್ಲಿ ಸಭಾಪತಿ ಅವಕಾಶ ನೀಡಿದ ನಂತರ ಮುಖಂಡರ ಜೊತೆ ಮಾತುಕತೆ ನಡೆದ ಬಳಿಕವೂ ಜನತೆ ತಲೆ ತಗ್ಗಿಸುವ ರೀತಿಯಲ್ಲಿ ಶಾಸಕರು ಕಾಗದವನ್ನು ಹರಿದು ಸಭಾಧ್ಯಕ್ಷ ರ ಮುಖದ ಮೇಲೆ, ಪೀಠದ ಮೇಲೆ ಎಸೆದು ಅನುಚಿತವಾಗಿ ವರ್ತಿಸಿದ್ದಾರೆ. ಅದಕ್ಕಾಗಿ ಅಮಾನತು ಗೊಂಡಿದ್ದಾರೆ. ಸ್ಪೀಕರ್ ಸರಿಯಾದ ಕ್ರಮ ಕೈ ಗೊಂಡಿದ್ದಾರೆ” ಎಂದು ಯು ಟಿ ಖಾದರ್ ನಡೆ ಸಮರ್ಥಿಸಿಕೊಂಡರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಚಿತ್ರದುರ್ಗ | ಚಳ್ಳಕೆರೆ ನಗರದಲ್ಲಿ ರಸ್ತೆ ಗುಂಡಿಗಳ ಪೂಜೆ; ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನೂತನ ಪ್ರತಿಭಟನೆ

ಚಳ್ಳಕೆರೆ ನಗರದ ಬಹುತೇಕ ವಾರ್ಡುಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ, ಅಲ್ಲದೆ ತಾಲೂಕಿನ...

ವಿಧಾನಸಭೆಯ ಮುಂಗಾರು ಅಧಿವೇಶನ ಮುಕ್ತಾಯ: ಒಟ್ಟು 39 ವಿಧೇಯಕ ಅಂಗೀಕಾರ

ಕಳೆದ ಆಗಸ್ಟ್ 11ರಿಂದ ಆರಂಭಗೊಂಡಿದ್ದ 16ನೇ ವಿಧಾನಸಭೆಯ ಮುಂಗಾರು ಅಧಿವೇಶನವು ಇಂದು(ಆ.22)...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

Download Eedina App Android / iOS

X