ಲೋಕಸಭಾ ಚುನಾವಣೆ | ತಮಿಳುನಾಡು: ಪ್ರತ್ಯೇಕ ಮತಗಟ್ಟೆಗೆ ಬೇಡಿಕೆ ಇಟ್ಟ ಮೇಲ್ಪತಿ ದಲಿತರು

Date:

Advertisements

ತಮಿಳುನಾಡಿನ ಮೇಲ್ಪತಿ ಗ್ರಾಮದ 450 ಹೆಚ್ಚು ದಲಿತ ಮತದಾರರು ತಮಗೆ ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕ ಮತಗಟ್ಟೆ ನೀಡುವಂತೆ ಒತ್ತಾಯಿಸಿದ್ದಾರೆ. 2023ರ ಏಪ್ರಿಲ್‌ನಲ್ಲಿ ಗ್ರಾಮದ ದ್ರೌಪದಿ ಅಮ್ಮನ್ ದೇವಸ್ಥಾನಕ್ಕೆ ದಲಿತರು ಪ್ರವೇಶಿಸಿದ್ದಕ್ಕಾಗಿ, ಅವರ ಮೇಲೆ ಹಲ್ಲೆ, ಜಾತಿ ನಿಂದನೆ ನಡೆದಿತ್ತು. ಹೀಗಾಗಿ, ಈಗ ಮತ ಚಲಾಯಿಸಲು ಗ್ರಾಮದ ಒಳಗೆ ಹೋದರೆ, ಮತ್ತೆ ಪ್ರಬಲ ಜಾತಿಗರು ಹಲ್ಲೆ ನಡೆಸಬಹುದು ಎಂಬ ಭಯ ದಲಿತರನ್ನು ಕಾಡುತ್ತಿದೆ.

ಗ್ರಾಮದ ದಲಿತರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. “ಪ್ರಬಲ ಜಾತಿಯವರು ಅವಕಾಶ ಸಿಕ್ಕಾಗಲೆಲ್ಲ ನಮ್ಮ ಮೇಲೆ ದಾಳಿ ನಡೆಸುವ ತಂತ್ರ ಎಣೆಯುತ್ತಿದ್ದಾರೆ. ಇದರಿಂದ ನಾವು ಭಯಭೀತರಾಗಿದ್ದೇವೆ. ಗ್ರಾಮದಲ್ಲಿ ಮತಗಟ್ಟೆಯು ಪ್ರಬಲ ಜಾತಿಗರಿರುವ ಪ್ರದೇಶದಲ್ಲಿದೆ. ಮತದಾನದ ದಿನ ನಾವು ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ. ಹೀಗಾಗಿ, ನಮಗೆ ಮತ ಚಲಾಯಿಸಲು ಪ್ರತ್ಯೇಕ ಮತಗಟ್ಟೆ ಬೇಕು” ಎಂದು ಒತ್ತಾಯಿಸಿದ್ದಾರೆ.

“ನಾವು ಪ್ರತ್ಯೇಕ ಮತಗಟ್ಟೆ ಕೇಳುತ್ತಿರುವುದು ಭಯದಿಂದಲ್ಲ. ಆದರೆ, ನಮ್ಮ ಆತ್ಮಗೌರವ ಮತ್ತು ಘನತೆಯನ್ನು ಕಾಪಾಡುವುವುದಕ್ಕಾಗಿ. ಒಂದು ವರ್ಷದ ಹಿಂದೆ, ದೇವಸ್ಥಾನಕ್ಕೆ ಪ್ರವೇಶಿಸಿದ ಕಾರಣಕ್ಕೆ ಪ್ರಬಲ ಜಾತಿಗರು ಜಾತಿ ಹಿಂದೂಗಳು) ಅಟ್ಟಿಸಿಕೊಂಡು ಬಂದು ಹಲ್ಲೆ ನಡೆಸಿದ್ದರು. ನಂತರ, ನಾವು ಅವರಿಂದ ದೂರ ಉಳಿದಿದ್ದೇವೆ” ಎಂದು ಗ್ರಾಮದ ದಲಿತ ನಿವಾಸಿಯೊಬ್ಬರು ಹೇಳಿದ್ದಾರೆ.

Advertisements

“ಪ್ರಬಲ ಜಾತಿಯವರು ನಮ್ಮನ್ನು ಕೃಷಿ ಕಾರ್ಮಿಕರಾಗಿ ನೇಮಿಸಿಕೊಳ್ಳುವುದನ್ನೂ ನಿಲ್ಲಿಸಿದ್ದಾರೆ. ಅಲ್ಲದೆ, ನಮ್ಮ ಮೇಲಿನ ಹಿಂಸಾಚಾರ ಮತ್ತು ಜಾತಿ ತಾರತಮ್ಯಕ್ಕಾಗಿ ಬಲಿಷ್ಠ ಜಾತಿಯವರಲ್ಲಿ ಯಾರನ್ನೂ ಈವರೆಗೆ ಬಂಧಿಸಿಲ್ಲ. ಘಟನೆಯನ್ನು ನಿಭಾಯಿಸುವಲ್ಲಿ ಸರ್ಕಾರದ ನಿಷ್ಕ್ರಿಯತೆ ಮತ್ತು ಪೊಲೀಸರ ನಿರಾಸಕ್ತಿ ತೋರಿದ್ದಾರೆ. ಹೀಗಾಗಿ, ಮತದಾನದ ದಿನದಂದು ಆಡಳಿತಗಳು ಒದಗಿಸಿದ ಭದ್ರತೆಯ ಬಗ್ಗೆ ನಮಗೆ ಅಪನಂಬಿಕೆ ಇದೆ. ನಾವು ಮತ್ತೆ ಅದೇ ನೋವನ್ನು ಅನುಭವಿಸಲು ಚುನಾವಣೆ ಕಾರಣವಾಗಬಾರದು” ಎಂದು ಅವರು ಹೇಳಿದ್ದಾರೆ.

“ಹೊಸ ಬೂತ್ ಸ್ಥಾಪಿಸಲು ಸಾಧ್ಯವಾಗದಿದ್ದರೆ, ನಾವು ಜಿಲ್ಲಾಕೇಂದ್ರದಲ್ಲಿಯೇ ಮತ ಚಲಾಯಿಸುತ್ತೇವೆ. ಮತದಾನದ ದಿನ ಅಲ್ಲಿಗೆ ಹೋಗಲು ನಮ್ಮ ಸ್ವಂತ ಹಣವನ್ನು ಖರ್ಚು ಮಾಡುತ್ತೇವೆ. ಕೇವಲ ದೇವಸ್ಥಾನವನ್ನು ಪ್ರವೇಶಿಸಿದ್ದಕ್ಕಾಗಿ ನಾವು ಅವಮಾನಕ್ಕೊಳಗಾದ ಊರಿಗೆ (ಜಾತಿ ಹಿಂದೂ ಪ್ರದೇಶ) ನಾವು ಹೋಗುವುದಿಲ್ಲ” ಎಂದು ಗ್ರಾಮದ ದಲಿತ ಮುಖಂಡರು ಹೇಳಿದ್ದಾಗಿ ‘ಟಿಎನ್‌ಐಇ’ ವರದಿ ಮಾಡಿದೆ.

ಮೇಲ್ಪತಿ ಗ್ರಾಮದ ದಲಿತರು ಪ್ರತ್ಯೇಕ ಮತಗಟ್ಟೆಗಾಗಿ ಪ್ರಸ್ತಾಪಿಸಿದ್ದಾರೆ. ಆದರೆ, ಮತದಾರರ ಸಂಖ್ಯೆ 1,500ಕ್ಕಿಂತ ಹೆಚ್ಚಿದ್ದರೆ ಮಾತ್ರ ಬೂತ್ ಹಂಚಿಕೆ ಮಾಡಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಮಸ್ಯೆಗೆ ಪ್ರತಿಕ್ರಿಯಿಸಿದರುವ ಜಿಲ್ಲಾಧಿಕಾರಿ ಪಳನಿ, “ನಾವು ಮೇಲ್ಪತಿ ಗ್ರಾಮದ ಮತಗಟ್ಟೆಯನ್ನು ನಿರ್ಣಾಯಕ/ದುರ್ಬಲ ಮತಗಟ್ಟೆ ಎಂದು ಗುರುತಿಸಿದ್ದೇವೆ. ಸಿಆರ್‌ಪಿಎಫ್ ಸಿಬ್ಬಂದಿಯಿಂದ ವಿಶೇಷ ರಕ್ಷಣೆ, ಲೈವ್ ವೆಬ್‌ಕ್ಯಾಮ್ ಕಾಸ್ಟಿಂಗ್, ರಾಜ್ಯ ಪೊಲೀಸ್ ಪಡೆ ಮತ್ತು ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸುತ್ತೇವೆ. ದಲಿತರು ಶಾಂತಿಯಿಂದ ಮತ ಚಲಾಯಿಸಬಹುದು. ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳಲಾಗುವುದು. ಇದಲ್ಲದೆ, ಚುನಾವಣೆಯ ದಿನದಂದು ದಲಿತರೊಂದಿಗೆ ಜಗಳವಾದಲ್ಲಿ ಪ್ರಬಲ ಜಾತಿಗರಿಗೆ ಕಠಿಣ ಪೊಲೀಸ್ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದೇವೆ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X