ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ನಡೆಸಿರುವ ಕಾಂಗ್ರೆಸ್, ಇಂದು (ಮಾ.8) ಕರ್ನಾಟಕ ಸೇರಿದಂತೆ ಒಟ್ಟು 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಅಜಯ್ ಮಾಕನ್ ಹಾಗೂ ಪವನ್ ಖೇರಾ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
In the first list of candidates for the 2024 Lok Sabha elections, Congress CEC has selected 39 names.
• 15 candidates are from the General category
• 24 candidates are from SC, ST, OBC and minority groups
• 12 candidates are below 50 years of age
• 8 candidates are in the… pic.twitter.com/YbH1dVuaLb— Congress (@INCIndia) March 8, 2024
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಹೈವೋಲ್ಟೇಜ್ ಮೀಟಿಂಗ್ನಲ್ಲಿ ಛತ್ತೀಸ್‌ಗಢ, ಕೇರಳ ಸೇರಿದಂತೆ ಒಟ್ಟು 9 ರಾಜ್ಯಗಳ ಸುಮಾರು 39 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿ, ಬಿಡುಗಡೆಗೊಳಿಸಿದೆ.
कांग्रेस अध्यक्ष श्री @kharge की अध्यक्षता में आयोजित ‘केंद्रीय चुनाव समिति’ की बैठक में लोकसभा चुनाव, 2024 के लिए 39 लोकसभा सीटों पर कांग्रेस उम्मीदवारों के नाम घोषित किए गए। pic.twitter.com/jOQk3rycwG
— Congress (@INCIndia) March 8, 2024
39 ಜನರ ಪೈಕಿ ಪಟ್ಟಿಯಲ್ಲಿ 15 ಜನರಲ್, 24 ಎಸ್‌ಸಿ ಎಸ್‌ಟಿ ಹಾಗೂ ಅಲ್ಪಸಂಖ್ಯಾತರು ಪಟ್ಟಿಯಲ್ಲಿದ್ದಾರೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಈ ಬಾರಿ ಕೂಡ ಕೇರಳದ ವಯನಾಡ್ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ.
ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ರಾಜನಂದಗಾಂವ್‌ನಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಸಚಿವ ತಾಮ್ರಧ್ವಜ್ ಸಾಹು ಮಹಾಸಮುಂಡ್ ಅಭ್ಯರ್ಥಿಯಾಗಿದ್ದಾರೆ. ದೆಹಲಿ, ಛತ್ತೀಸ್‌ಗಢ, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಈಶಾನ್ಯ ರಾಜ್ಯಗಳ ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಪರಿಗಣಿಸಲಾಗಿದೆ.
ಕರ್ನಾಟಕದಿಂದ ಸ್ಪರ್ಧಿಸಲಿರುವವರ ಪಟ್ಟಿ ಹೀಗಿದೆ:
ಲೋಕಸಭಾ ಕ್ಷೇತ್ರ ಹಾಗೂ ಅಭ್ಯರ್ಥಿಗಳು: 7 ಕ್ಷೇತ್ರಗಳು
- ವಿಜಯಪುರ: ಹೆಚ್ ಆರ್ ಅಲಗೂರು
- ಶಿವಮೊಗ್ಗ: ಗೀತಾ ಶಿವರಾಜ್ ಕುಮಾರ್
- ಹಾಸನ: ಶ್ರೇಯಸ್ ಪಟೇಲ್
- ಮಂಡ್ಯ: ವೆಂಕಟರಮಣೇಗೌಡ (ಸ್ಟಾರ್ ಚಂದ್ರು)
- ತುಮಕೂರು: ಎಸ್‌ಪಿ ಮುದ್ದಹನುಮೇಗೌಡ
- ಬೆಂಗಳೂರು ಗ್ರಾಮಾಂತರ: ಡಿ ಕೆ ಸುರೇಶ್
- ಹಾವೇರಿ: ಆನಂದಸ್ವಾಮಿ ಗಡ್ಡದೇವ್ರು ಮಠ
ತೆಲಂಗಾಣ: 4 ಕ್ಷೇತ್ರ
- ಝಾಹಿರಾ ಬಾದ್: ಸುರೇಶ್ ಕುಮಾರ್ ಶೆಟ್ಕಾರ್
- ನಳಗುಂದಾ: ರಘುವೀರ್ ಕುಂದುರು
- ಮೆಹಬೂಬ್ ನಗರ: ಚಲ್ಲವಂಶಿ ಚಾಂದ್ ರೆಡ್ಡಿ
- ಮೆಹಬೂಬಾ ಬಾದ್: ಬಾಲರಾಮ್ ನಾಯ್ಕ್ ಪೊರಿಕಾ
ಕೇರಳ: ಲೋಕಸಭಾ ಕ್ಷೇತ್ರ ಹಾಗೂ ಅಭ್ಯರ್ಥಿಗಳು; 16 ಕ್ಷೇತ್ರ
- ಕಾಸರಗೋಡು: ರಾಜ್‌ಮೋಹನ್ ಉನ್ನಿತ್ತಾನ್
- ಕಣ್ಣೂರು: ಕೆ ಸುರೇಂದ್ರನ್
- ವಡಗರ: ಶಫಿ ಪರಂಬಿಲ್
- ವಯನಾಡ್: ರಾಹುಲ್ ಗಾಂಧಿ
- ಕೋಝಿಕ್ಕೋಡ್: ಎಂ ಕೆ ರಾಘವನ್
- ಪಾಲಕ್ಕಾಡ್ : ವಿ ಕೆ ಶ್ರೀಕಂಠನ್
- ಅಲತ್ತೂರು: ರಮ್ಯಾ ಹರಿದಾಸ್
- ತ್ರಿಶ್ಶೂರ್: ಕೆ ಮುರಳೀಧರನ್
- ಚಾಲಕ್ಕುಡಿ: ಬೆನ್ನಿ ಬೆಹಾನನ್
- ಎರ್ನಾಕುಲಂ: ಹಿಬಿ ಇಡೆನ್
- ಇಡುಕ್ಕಿ: ಡೀನ್ ಕುರಿಯಾಕೋಸ್
- ಆಲಪ್ಪುಝ: ಕೆ ಸಿ ವೇಣುಗೋಪಾಲ್
- ಮಾವೇಲಿಕ್ಕರ: ಕೋಡಿಕುನ್ನಿಲ್ ಸುರೇಶ್
- ಪಟ್ಟಣಂತಿಟ್ಟ: ಆ್ಯಂಟೋ ಆ್ಯಂಟನಿ
- ಅಟ್ಟಿಂಗಲ್: ಅಡೂರ್ ಪ್ರಕಾಶ್
- ತಿರುವನಂತಪುರಂ: ಶಶಿ ತರೂರ್
ಛತ್ತೀಸ್‌ಗಢ: 6 ಕ್ಷೇತ್ರ
- ಜಂಗೀರ್-ಚಂಪಾ: ಡಾ. ಶಿವಕುಮಾರ್ ದಹಾರಿಯಾ
- ಕೋರ್ಬಾ: ಜೋತ್ಸಾನ ಮಹಂತ್
- ರಾಜ್‌ನಂದಗಾವ್: ಭೂಪೇಶ್ ಭಘೇಲ್
- ದುರ್ಗ್: ರಾಜೇಂದ್ರ ಸಾಹು
- ರಾಯ್‌ಪುರ: ವಿಕಾಸ್ ಉಪಾಧ್ಯಾಯ್
- ಮಹಾಸಮುಂದ್: ತಾಮರಾಧ್ವಜ್ ಸಾಹು
ಲಕ್ಷದ್ವೀಪ: 1 ಕ್ಷೇತ್ರ
- ಮೊಹಮ್ಮದ್ ಹಮ್ದುಲ್ಲಾ ಸಯೀದ್
ಮೇಘಾಲಯ: 2 ಕ್ಷೇತ್ರ
- ಶಿಲ್ಲಾಂಗ್: ವಿನ್ಸೆಂಟ್ ಹೆಚ್ ಪಾಲ
- ತುರಾ: ಸಾಲೆಂಗ್ ಎ ಸಂಗ್ಮಾ
ತ್ರಿಪುರಾ: 1 ಕ್ಷೇತ್ರ
ತ್ರಿಪುರಾ ವೆಸ್ಟ್: ಅಶೀಶ್ ಕುಮಾರ್ ಸಾಹಾ
ನಾಗಾಲ್ಯಾಂಡ್ : 1 ಕ್ಷೇತ್ರ
ನಾಗಾಲ್ಯಾಂಡ್: ಸುಪೊಂಗ್ ಮಿರೆನ್ ಜಮೀರ್
