ಲೋಕಸಭೆ ಚುನಾವಣೆಯ ಆರನೇ ಮತ್ತು ಅಂತಿಮ ಹಂತಕ್ಕೂ ಮುಂಚಿನ ಮತದಾನ ಪ್ರಕ್ರಿಯೆಯು ಆರಂಭವಾಗಿದ್ದು, ಕನ್ಹಯ್ಯ, ಸಂಬಿತ್ ಪಾತ್ರ, ಸುಷ್ಮಾ ಸ್ವರಾಜ್ ಪುತ್ರಿ ಸೇರಿದಂತೆ ಹಲವು ಪ್ರಮುಖ ನಾಯಕರು ಕಣದಲ್ಲಿದ್ದಾರೆ.
ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಸ್ಥಾನಗಳಲ್ಲಿ ಇಂದು (ಮೇ 25) ನಡೆಯಲಿದೆ. ದೆಹಲಿ ಮತ್ತು ಹರಿಯಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಏಳನೇ ಮತ್ತು ಕೊನೆಯ ಹಂತದಲ್ಲಿ 57 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
#WATCH | Jammu & Kashmir | Polling for the sixth phase of #LokSabhaElections2024 underway in Ranbirpora, Anantnag. Visuals from polling station no. 65.
Jammu and Kashmir National Conference (JKNC) has fielded Mian Altaf Ahmad from the Anantnag-Rajouri Lok Sabha seat. PDP has… pic.twitter.com/g5Sp0e95b8
— ANI (@ANI) May 25, 2024
ಬಿಹಾರ ಮತ್ತು ಬಂಗಾಳದಲ್ಲಿ ತಲಾ ಎಂಟು, ದೆಹಲಿಯಲ್ಲಿ ಏಳು, ಹರಿಯಾಣದಲ್ಲಿ 10, ಜಾರ್ಖಂಡ್‌ನಲ್ಲಿ 4, ಉತ್ತರ ಪ್ರದೇಶದಲ್ಲಿ 14 ಮತ್ತು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿಯಲ್ಲಿ ಮತದಾನ ನಡೆಯುತ್ತಿದೆ. ಒಡಿಶಾದಲ್ಲಿ 42 ವಿಧಾನಸಭಾ ಕ್ಷೇತ್ರಗಳು ಮತ್ತು ಆರು ಲೋಕಸಭಾ ಸ್ಥಾನಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ ಲೋಕಸಭೆ | ಕೇಂದ್ರದ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ವರವಾಗುವುದೇ?
ಇಂದು ಚುನಾವಣೆ ಮುಗಿದ ಬಳಿಕ 543 ಲೋಕಸಭಾ ಸ್ಥಾನಗಳ ಪೈಕಿ 486 ಕ್ಷೇತ್ರಗಳಲ್ಲಿ ಚುನಾವಣೆ ಪೂರ್ಣಗೊಳ್ಳಲಿದೆ. ಹರಿಯಾಣ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲೂ ಮತದಾನ ಪೂರ್ಣಗೊಳ್ಳಲಿದೆ.
2019ರಲ್ಲಿ ಬಿಜೆಪಿ ಎಲ್ಲಾ ಏಳು ಸ್ಥಾನಗಳನ್ನು ಗೆದ್ದುಕೊಂಡಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಬಾರಿ ಭಾರೀ ಸ್ಪರ್ಧೆಯಿದೆ. ಈ ಬಾರಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಪಕ್ಷವು ‘ಜೈಲ್ ಕಾ ಜವಾಬ್ ವೋಟ್ ಸೆ’ (ಜೈಲು ಶಿಕ್ಷೆ ನೀಡಿದ್ದಕ್ಕೆ ಉತ್ತರ ಮತದ ಮೂಲಕ) ಅಭಿಯಾನದ ಮೂಲಕ ಜನರನ್ನು ಸೆಳೆದಿದೆ. ಎಎಪಿ ರಾಷ್ಟ್ರ ರಾಜಧಾನಿಯಲ್ಲಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಅದರ ಮಿತ್ರಪಕ್ಷ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
2019ರಲ್ಲಿ, ಇಂದು ಚುನಾವಣೆ ನಡೆಯುತ್ತಿರುವ 58 ಕ್ಷೇತ್ರಗಳಲ್ಲಿ ಬಿಜೆಪಿ ಏಕಾಂಗಿಯಾಗಿ 40 ಕ್ಷೇತ್ರಗಳನ್ನು ಗೆದ್ದಿದೆ. ಅದರ ಎನ್‌ಡಿಎ ಮಿತ್ರಪಕ್ಷಗಳು ಐದು ಸ್ಥಾನಗಳನ್ನು ಗೆದಿದ್ದವು. ಹಾಗಿರುವಾ ಎನ್‌ಡಿಎಗೆ ಈ ಹಂತವು ನಿರ್ಣಾಯಕವಾಗಿದೆ.
ಇದನ್ನು ಓದಿದ್ದೀರಾ? 5ನೇ ಹಂತದ ಲೋಕಸಭೆ ಚುನಾವಣೆ: ಶೇ. 62.2 ರಷ್ಟು ಮತದಾನ
ತೃಣಮೂಲ ಕಾಂಗ್ರೆಸ್, ಇಂಡಿಯಾ ಒಕ್ಕೂಟ ಮೈತ್ರಿಯಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್, ಸಮಾಜವಾದಿ ಪಾರ್ಟಿ ಸೇರಿ ಐದು ಸ್ಥಾನಗಳನ್ನು ಗೆದ್ದಿದ್ದವು. ಆದರೆ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ.
ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 2019ರಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿದೆ. ಆದರೆ 2024ರ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸುತ್ತಿದೆ.
ಕಣದಲ್ಲಿರುವ ಪ್ರಮುಖ ನಾಯಕರು
ಸಂಬಲ್‌ಪುರದಿಂದ ಬಿಜೆಪಿಯ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಕರ್ನಾಲ್‌ನಿಂದ ಮನೋಹರ್ ಲಾಲ್ ಖಟ್ಟರ್, ಪುರಿಯಿಂದ ಸಂಬಿತ್ ಪಾತ್ರ, ಸುಲ್ತಾನ್‌ಪುರದಿಂದ ಮೇನಕಾ ಗಾಂಧಿ, ನವದೆಹಲಿ ಕ್ಷೇತ್ರದಿಂದ ದಿವಂಗತ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್, ಈಶಾನ್ಯ ದೆಹಲಿಯಿಂದ ಮನೋಜ್ ತಿವಾರಿ ಮತ್ತು ಕುರುಕ್ಷೇತ್ರದಿಂದ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಕಣದಲ್ಲಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ 6ನೇಹಂತ: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
ಇಂಡಿಯಾ ಒಕ್ಕೂಟದಿಂದ ಅನಂತನಾಗ್‌ನಿಂದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಗುರ್ಗಾಂವ್‌ನಿಂದ ನಟ-ರಾಜಕಾರಣಿ ರಾಜ್ ಬಬ್ಬರ್, ರೋಹ್ಟಕ್‌ನಿಂದ ದೀಪೇಂದರ್ ಸಿಂಗ್ ಹೂಡಾ, ಈಶಾನ್ಯ ದೆಹಲಿಯಿಂದ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಸ್ಪರ್ಧಿಸುತ್ತಿದ್ದಾರೆ.
ಜೂನ್ 1ರಂದು ಕೊನೆಯ ಮತ್ತು 7ನೇ ಹಂತದ ಚುನಾವಣೆ ಮುಗಿದ ನಂತರ ಜೂನ್ 4ರಂದು ಮತ ಎಣಿಕೆ ನಡೆಯಲಿದೆ.