ಲೋಕನೀತಿಯು ಸೆಂಟರ್ ಫಾರ್ ದ ಸ್ಟಡಿ ಆಫ್ ಡೆವೆಲ್ಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ಸಂಸ್ಥೆಯ ಯೋಜನೆಯಾಗಿದೆ. ಇದರಡಿಯಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಅರಿಯುವ ವೈಜ್ಞಾನಿಕ ಯತ್ನಗಳನ್ನು ನಡೆಸಲಾಗುತ್ತದೆ. 2024ರ ಲೋಕಸಭಾ ಚುನಾವಣೆಯ ಚುನಾವಣಾ-ಪೂರ್ವ ಸೂಚಕಗಳನ್ನು ಅರಿಯಲು ಮಾರ್ಚ್ 28-ಏಪ್ರಿಲ್ 8ರ ನಡುವೆ ನಡೆಸಿದ ಸಮೀಕ್ಷೆಯ ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ.
ಭಾರತದ 19 ರಾಜ್ಯಗಳಿಗೆ ಸೇರಿದ 100 ಲೋಕಸಭಾ ಕ್ಷೇತ್ರಗಳಲ್ಲಿನ 100 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 400 ಮತದಾನ ಕೇಂದ್ರಗಳಿಗೆ ಸೇರಿದ 10,019 ಮತದಾರರನ್ನು ಈ ಸಮೀಕ್ಷೆ ಒಳಗೊಂಡಿದೆ. ಇದರ ಕುರಿತು ಹೆಚ್ಚಿನ ವಿವರಗಳಿಗೆ ಸಿಎಸ್‌ಡಿಎಸ್ ಸಂಸ್ಥೆಯ ಜಾಲತಾಣಕ್ಕೆ (https://www.csds.in/) ಭೇಟಿ ನೀಡಬಹುದು. ಸದರಿ ವರದಿಯ ಆಯ್ದ ಭಾಗಗಳನ್ನು ‘ದ ಹಿಂದೂ’ ಪತ್ರಿಕೆ ಏಪ್ರಿಲ್ 11, 2024ರ ಸಂಚಿಕೆಯಲ್ಲಿ ಪ್ರಕಟಿಸಿದೆ.
ಸಮೀಕ್ಷೆಯಲ್ಲಿ ಕೇಳಲಾದ ಆರ್ಥಿಕ ಸಂಬಂಧಿ ಪ್ರಶ್ನೆಗಳಿಗೆ ದೊರೆತ ಉತ್ತರಗಳನ್ನು ಈ ಕೆಳಕಂಡ ಕೋಷ್ಟಕಗಳು ನೀಡುತ್ತವೆ.
ಕೋಷ್ಟಕ 01: ಇಂದಿನ ಪರಿಸ್ಥಿತಿಯನ್ನು ಐದು ವರ್ಷದ ಹಿಂದಿನ ಪರಿಸ್ಥಿತಿಗೆ ಹೋಲಿಸಿ ನೋಡಿದಾಗ, ಉದ್ಯೋಗ ಪಡೆದುಕೊಳ್ಳುವುದು ಸುಲಭವಾಗಿದೆಯೇ ಅಥವಾ ಕಷ್ಟಕರವಾಗಿದೆಯೇ?
ಉದ್ಯೋಗ ಪಡೆಯುವುದು… | % |
ಕಷ್ಟವಾಗಿದೆ | 62 |
ಬದಲಾವಣೆ ಆಗಿಲ್ಲ | 18 |
ಸುಲಭವಾಗಿದೆ | 12 |
ಗಮನಿಸಿ: ಉಳಿದವರು ಯಾವುದೇ ಉತ್ತರವನ್ನು ನೀಡಲಿಲ್ಲ |
ಕೋಷ್ಟಕ 02: ನಿರುದ್ಯೋಗ ಪ್ರಮಾಣಕ್ಕೂ ಮತ್ತು ವಾಸಸ್ಥಳಕ್ಕೂ ಇರುವ ಸಂಬಂಧ
ಉದ್ಯೋಗ ಪಡೆಯುವುದು ಕಷ್ಟಕರವಾಗಿದೆ | |
ಎಲ್ಲರ ಪ್ರಕಾರ | 62 |
ವಾಸಸ್ಥಳವನ್ನು ಆಧರಿಸಿ | |
ಹಳ್ಳಿಗಳು | 62 |
ಪಟ್ಟಣಗಳು | 59 |
ನಗರಗಳು | 65 |
ಲಿಂಗಾಧಾರಿತ ಪ್ರತಿಕ್ರಿಯೆ | |
ಗಂಡು | 65 |
ಹೆಣ್ಣು | 59 |
ಗಮನಿಸಿ: ಉಳಿದವರು ಉತ್ತರಿಸಲಿಲ್ಲ |
ಕೋಷ್ಟಕ 03: ಬೆಲೆ ಏರಿಕೆ ಕುರಿತು ನಿಮ್ಮ ಅಭಿಪ್ರಾಯವೇನು? ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗಿದೆಯೋ ಇಲ್ಲ ಇಳಿಕೆಯಾಗಿದೆಯೋ?
ಬೆಲೆಗಳು… | % |
ಏರಿಕೆಯಾಗಿವೆ | 71 |
ಬದಲಾವಣೆ ಆಗಿಲ್ಲ | 13 |
ಇಳಿದಿವೆ | 13 |
ಗಮನಿಸಿ: ಉಳಿದವರು ಯಾವುದೇ ಉತ್ತರವನ್ನು ನೀಡಲಿಲ್ಲ |
ಕೋಷ್ಟಕ 04: ಬೆಲೆ ಏರಿಕೆ – ವಾಸಸ್ಥಳ ಮತ್ತು ವರ್ಗಗಳೊಂದಿಗೆ ಸಹಸಂಬಂಧ
ಬೆಲೆಗಳು… | ಏರಿವೆ |
ಎಲ್ಲರ ಪ್ರಕಾರ | 71 |
ವಾಸಸ್ಥಳವನ್ನು ಆಧರಿಸಿ | |
ಹಳ್ಳಿಗಳು | 72 |
ಪಟ್ಟಣಗಳು | 69 |
ನಗರಗಳು | 66 |
ವರ್ಗಾವಾರು ಪ್ರತಿಕ್ರಿಯೆ | |
ಬಡವರು | 76 |
ಕೆಳವರ್ಗ | 70 |
ಮಧ್ಯಮ ವರ್ಗ | 66 |
ಮೇಲು ವರ್ಗ | 68 |
ಕೋಷ್ಟಕ 05: ನಿರುದ್ಯೋಗ ಮತ್ತು ಸಾಮಾಜಿಕ ಅಸ್ಮಿತೆಯ ಸಹಸಂಬಂಧ
ಉದ್ಯೋಗ ಗಳಿಸಿಕೊಳ್ಳುವುದು… | |||
ಸುಲಭ | ಕಷ್ಟಕರ | ಹಾಗೇ ಇದೆ | |
ಹಿಂದು ಮೇಲು ಜಾತಿ | 17 | 57 | 19 |
ಹಿಂದು ಓಬಿಸಿ | 12 | 63 | 17 |
ಹಿಂದು ಎಸ್‌ಸಿ | 12 | 63 | 17 |
ಹಿಂದು ಎಸ್‌ಟಿ | 9 | 59 | 25 |
ಮುಸ್ಲಿಂ | 6 | 67 | 18 |
ಇತರೆ | 9 | 62 | 20 |
ಗಮನಿಸಿ: ಉಳಿದವರು ಯಾವುದೇ ಉತ್ತರ ನೀಡಲಿಲ್ಲ |
ಕೋಷ್ಟಕ 06: ಬೆಲೆ ಏರಿಕೆ ಮತ್ತು ಸಾಮಾಜಿಕ ಅಸ್ಮಿತೆ ಸಹಸಂಬಂಧ
ಬೆಲೆಗಳು… | |||
ಏರಿವೆ | ಇಳಿದಿವೆ | ಹಾಗೇ ಇದೆ | |
ಹಿಂದು ಮೇಲು ಜಾತಿ | 68 | 16 | 14 |
ಹಿಂದು ಓಬಿಸಿ | 69 | 16 | 13 |
ಹಿಂದು ಎಸ್‌ಸಿ | 75 | 10 | 13 |
ಹಿಂದು ಎಸ್‌ಟಿ | 66 | 11 | 20 |
ಮುಸ್ಲಿಂ | 76 | 11 | 9 |
ಇತರೆ | 71 | 9 | 15 |
ಗಮನಿಸಿ: ಉಳಿದವರು ಯಾವುದೇ ಉತ್ತರ ನೀಡಲಿಲ್ಲ |
ಕೋಷ್ಟಕ 07: ಇಳಿಮುಖವಾಗುತ್ತಿರುವ ಉದ್ಯೋಗದ ಅವಕಾಶಗಳಿಗೆ ಹೊಣೆ ಯಾರು?
ಉದ್ಯೋಗದ ಅವಕಾಶಗಳು ಇಳಿಮುಖವಾಗಲು ಸರ್ಕಾರಗಳು ಕಾರಣ | |||
ಕೇಂದ್ರ ಸರ್ಕಾರ | ರಾಜ್ಯ ಸರ್ಕಾರ | ಎರಡೂ | |
21 | 17 | 57 | |
ಗಮನಿಸಿ: ಉಳಿದವರು ಯಾವುದೇ ಉತ್ತರವನ್ನು ನೀಡಲಿಲ್ಲ |
ಕೋಷ್ಟಕ 08: ಭಾರತದಲ್ಲಿ ಪ್ರಸ್ತುತ ಆಗುತ್ತಿರುವ ಬೆಲೆ ಏರಿಕೆಗೆ ಯಾರು ಕಾರಣ?
ಬೆಲೆ ಏರಿಕೆಗೆ ಸರ್ಕಾರಗಳು ಕಾರಣ | |||
ಕೇಂದ್ರ ಸರ್ಕಾರ | ರಾಜ್ಯ ಸರ್ಕಾರ | ಎರಡೂ | |
26 | 12 | 56 | |
ಗಮನಿಸಿ: ಉಳಿದವರು ಯಾವುದೇ ಉತ್ತರವನ್ನು ನೀಡಲಿಲ್ಲ |