ಲೋಕಸಭೆ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಆಡಳಿತಾರೂಢ ಮಿತ್ರ ಪಕ್ಷವಾದ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ಬೆಂಬಲವನ್ನು ನೀಡಲು ವಿರೋಧ ಪಕ್ಷದ ಇಂಡಿಯಾ ಒಕ್ಕೂಟದ ಎಲ್ಲರೂ ಪ್ರಯತ್ನಿಸುವುದಾಗಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ.
ಮುಂಬೈನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರಾವತ್, “ಲೋಕಸಭೆಯ ಸ್ಪೀಕರ್ ಆಯ್ಕೆಯು ಅತೀ ನಿರ್ಣಾಯಕವಾಗಿದೆ. ಬಿಜೆಪಿಗೆ ಸ್ಪೀಕರ್ ಸ್ಥಾನ ಲಭ್ಯವಾದರೆ ಅದು ಟಿಡಿಪಿ, ಜೆಡಿಯು ಮುಂತಾದ ಸರ್ಕಾರಿ ಬೆಂಬಲಿತ ಪಕ್ಷಗಳನ್ನು, ಚಿರಾಗ್ ಪಾಸ್ವಾನ್ ಮತ್ತು ಜಯಂತ್ ಚೌಧರಿ ಅವರ ರಾಜಕೀಯ ಸಂಘಟನೆಗಳನ್ನು ಒಡೆಯುತ್ತದೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ದೇಶ ಮುನ್ನಡೆಸಬೇಕು ಎಂಬುವುದು ರಾಷ್ಟ್ರದ ಆಶಯ: ಸಂಜಯ್ ರಾವತ್
“ಬಿಜೆಪಿಯು ತನಗೆ ಬೆಂಬಲ ನೀಡುವವರಿಗೆ ದ್ರೋಹ ಮಾಡುತ್ತದೆ. ಅದರ ಅನುಭವ ನಮಗಿದೆ. ಟಿಡಿಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಇಚ್ಛಿಸಿದೆ ಎಂಬ ಮಾತು ನಮಗೆ ಕೇಳಿ ಬಂದಿದೆ. ಟಿಡಿಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಇಂಡಿಯಾ ಒಕ್ಕೂಟವು ಚರ್ಚೆ ನಡೆಸಿ ಟಿಡಿಪಿಗೆ ಬೆಂಬಲ ನೀಡುವ ಪ್ರಯತ್ನ ಮಾಡುತ್ತದೆ” ಎಂದು ತಿಳಿಸಿದರು.
#WATCH | Mumbai, Maharashtra: Shiv Sena (UBT) leader Sanjay Raut says, “This fight of Lok Sabha Speaker is important. This time, the situation is not similar to 2014 and 2019. The government is not stable… We have heard that Chandrababu Naidu has asked for the Lok Sabha Speaker… pic.twitter.com/lovUT2JHZE
— ANI (@ANI) June 16, 2024
“ನಿಯಮದ ಪ್ರಕಾರ ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳು ಪಡೆಯಬೇಕು” ಎಂದು ಹೇಳಿದ ರಾವತ್, “ಎನ್ಡಿಎ ಸರ್ಕಾರ ಸ್ಥಿರ ಆಡಳಿತವಲ್ಲ” ಎಂದೂ ಅಭಿಪ್ರಾಯಿಸಿದರು.