- ‘ಲೋಪದೋಷ ಬಗ್ಗೆ ಹೆಚ್ಚಿನ ತನಿಖೆ ಈಗಾಗಲೇ ನಡೆಯುತ್ತಿದೆ’
- ‘ಖಾಲಿ ಇರುವ ಹುದ್ದೆಗಳ ಕೂಡಲೇ ಭರ್ತಿಗೆ ಸೂಚಿಸಿದ್ದೇವೆ’
ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ಲೋಪದೋಷಗಳು ಕಂಡುಬಂದಿವೆ. ಈ ಕುರಿತಾಗಿ ಹೆಚ್ಚಿನ ತನಿಖೆ ಈಗಾಗಲೇ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ರಾಯಚೂರು, ವಿಜಯನಗರ, ಬಳ್ಳಾರಿ ವಿವಿಗಳಲ್ಲಿ ಅವ್ಯವಹಾರ ಆಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಕೆಯಲ್ಲಿ ಅಕ್ರಮ ನಡೆದಿದೆ. ಹದಿನೈದು ದಿನಗಳಲ್ಲಿ ಲೋಪದೋಷಗಳು ಸರಿ ಆಗಬೇಕು. ಕಾನೂನು ಮೀರಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ” ಎಂದರು.
“ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಹಿಂದಿನ ಸರ್ಕಾರ ನಿರ್ಲಕ್ಷ್ಯ ತೋರಿದೆ. ಮುಂಬಡ್ತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಮತ್ತು ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಗೆ ಸೂಚಿಸಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತಿನ ಯುದ್ಧದಲ್ಲಿ ಮಾನ ಕಳೆದುಕೊಳ್ಳುತ್ತಿರುವ ನಾಯಕರು
ಹೈಕಮಾಂಡ್ ನಿರ್ಧಾರ ಪ್ರಸ್ತುತ
ವರ್ಷಕ್ಕೆ ಹಿರಿಯ ಸಚಿವರು ಬಿಟ್ಟು ಕೊಡಬೇಕು ಅಂತ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, “ಹೈಕಮಾಂಡ್ ಹೇಳಿದರೆ ಎಲ್ಲರೂ ಬಿಟ್ಟು ಕೊಡಬೇಕು. ನಾವು ಈ ಹಿಂದೆ ಬಿಟ್ಟು ಕೊಟ್ಟಿದ್ದೇವೆ. ಪಕ್ಷಕ್ಕೆ ಸೇವೆ ಸಲ್ಲಿಸಿ ಅಂದರೆ ಎಲ್ಲರೂ ಸಿದ್ಧರಿರಬೇಕು. ಹೈಕಮಾಂಡ್ ನಿರ್ಧಾರ ಮಾತ್ರ ಪ್ರಸ್ತುತ. ಬೇರೆ ಯಾರ ಹೇಳಿಕೆಯೂ ಅಲ್ಲ” ಎಂದರು.