ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಅಧಿಕಾರವನ್ನು ಕಳೆದುಕೊಳ್ಳುವ ಹಂತದಲ್ಲಿದೆ. ಮಹಾಘಟಬಂಧನ ನೇತೃತ್ವದ ಹೊಸ ಸರ್ಕಾರ ರಚನೆಯಾಗಲಿದೆ. ಸರ್ಕಾರ ರಚಿಸಿದ ನಂತರ ನರೇಂದ್ರ ಮೋದಿ ಸರ್ಕಾರ ತಂದ ವಕ್ಫ್ ಕಾಯ್ದೆಯನ್ನು ಕಸದಬುಟ್ಟಿಗೆ ನಮ್ಮ ಸರ್ಕಾರ ಎಸೆಯಲಿದೆ” ಎಂದು ಆರ್‌ಜೆಡಿ ನಾಯಕ, ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.
ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ‘ಸೇವ್ ವಕ್ಫ್, ಸೇವ್ ಕಾನ್ಸ್ಟಿಟ್ಯೂಷನ್’ ಮೆರವಣಿಗೆಯಲ್ಲಿ ಮಾತನಾಡಿದರು. ವಿವಿಧ ರಾಜಕೀಯ ಪಕ್ಷಗಳ ನಾಯಕರು ಪ್ರತಿಭಟನೆಯ ಸಂಕೇತವಾಗಿ ಕಪ್ಪು ಪಟ್ಟಿಗಳನ್ನು ಧರಿಸಿದ್ದರು.
ಇದನ್ನು ಓದಿದ್ದೀರಾ? ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ, ತೇಜಸ್ವಿ ಯಾದವ್ ಬಿಹಾರ ಮುಖ್ಯಮಂತ್ರಿ: ಕನ್ಹಯ್ಯಾ ಕುಮಾರ್
“ನಮ್ಮ ರಾಷ್ಟ್ರೀಯ ಅಧ್ಯಕ್ಷ ಲಾಲು ಪ್ರಸಾದ್ ಅವರು ಆರ್‌ಜೆಡಿ ಈ ಕಾನೂನನ್ನು ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಸಂಸದರು ಸಂಸತ್ತಿನ ಎರಡೂ ಸದನಗಳಲ್ಲಿ ಈ ಕಾನೂನನ್ನು ವಿರೋಧಿಸಿದ್ದಾರೆ. ನಾವು ಶಾಸನದ ವಿರುದ್ಧ ನ್ಯಾಯಾಲಯಕ್ಕೂ ಹೋಗಿದ್ದೇವೆ” ಎಂದು ಹೇಳಿದರು.
“ಬಿಹಾರದಲ್ಲಿರುವ ನನ್ನ ಮುಸ್ಲಿಂ ಸಹೋದರರು ಎನ್‌ಡಿಎ ಸರ್ಕಾರ ಅಧಿಕಾರದಿಂದ ಕೆಳಗಿಳಿಯುತ್ತಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನವೆಂಬರ್‌ನಲ್ಲಿ, ರಾಜ್ಯದಲ್ಲಿ ಹೊಸ ಬಡವರ ಪರವಾದ ಸರ್ಕಾರ ರಚನೆಯಾಗಲಿದೆ. ಆ ಸರ್ಕಾರ ವಕ್ಫ್ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯುತ್ತದೆ” ಎಂದು ಭರವಸೆ ನೀಡಿದರು.
“ಸ್ವಾತಂತ್ರ್ಯವು ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಮಾಡಿದ ತ್ಯಾಗದ ಫಲದಿಂದ ನಮಗೆ ಸಿಕ್ಕಿದೆ ಎಂದು ಕೇಂದ್ರವನ್ನು ಆಳುವ ಮತ್ತು ರಾಜ್ಯದಲ್ಲಿ ಅಧಿಕಾರವನ್ನು ಹಂಚಿಕೊಂಡಿರುವ ಬಿಜೆಪಿ ತಿಳಿದಿರಬೇಕು. ದೇಶವು ತನ್ನ ತಂದೆಯ ಆಸ್ತಿಯಂತೆ ಯಾರೂ ವರ್ತಿಸಬಾರದು” ಎಂದು ಹೇಳಿದರು.
