ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್ ನಿವಾಸಕ್ಕೆ ತನ್ನ ಕಾರಿನಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ಕೋಲ್ಕತ್ತಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿಯನ್ನು ಶೇಖ್ ನೂರ್ ಆಲಂ ಎಂದು ಗುರುತಿಸಲಾಗಿದೆ. ಆತನ ಬಳಿ ಬಂದೂಕು, ಚಾಕು ಮತ್ತು ಕೆಲವು ಅಕ್ರಮ ವಸ್ತುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿಯ ನಿವಾಸಕ್ಕೆ ಪ್ರವೇಶಿಸಲು ಬಳಸಿದ ಆರೋಪಿಯ ಕಾರಿನ ಮೇಲೆ ‘ಪೊಲೀಸ್’ ಸ್ಟಿಕ್ಕರ್ ಇತ್ತು ಎಂದು ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಹೇಳಿದ್ದಾರೆ. ಘಟನೆ ನಡೆದಾಗ ಮಮತಾ ಬ್ಯಾನರ್ಜಿ ಅವರ ಮನೆಯಲ್ಲಿದ್ದರು.
ಆ ವ್ಯಕ್ತಿಯ ಕಾರಿನಲ್ಲಿ ಬಂದೂಕು, ಒಂದು ಚಾಕು, ಗಾಂಜಾ ಮತ್ತು ಬಿಎಸ್‌ಎಫ್‌ನಂತಹ ವಿವಿಧ ಏಜೆನ್ಸಿಗಳ ಹಲವಾರು ಗುರುತಿನ ಚೀಟಿಗಳನ್ನು ಹೊಂದಿದ್ದನು. ಆತ ಸಿಎಂ ಅವರನ್ನು ಭೇಟಿಯಾಗಲು ಬಯಸಿದ್ದರು. ಆರೋಪಿಯು ಹರೀಶ್ ಚಟರ್ಜಿ ಸ್ಟ್ರೀಟ್‌ಗೆ ಪ್ರವೇಶಿಸಲು ಪ್ರಯತ್ನಿಸಿದಾಗ ನಮ್ಮ ಅಧಿಕಾರಿಗಳು ಅವರನ್ನು ತಡೆದರು. ಮುಖ್ಯಮಂತ್ರಿಯವರ ಝಡ್-ಕೆಟಗರಿ ಭದ್ರತೆಯನ್ನು ಪರಿಗಣಿಸಿದರೆ ಇದೊಂದು ಗಂಭೀರವಾದ ವಿಷಯವಾಗಿದೆ. ಆರೋಪಿಯ ಉದ್ದೇಶವೇನೆಂಬುದನ್ನು ನಾವು ಪತ್ತೆ ಹಚ್ಚುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇಶವನ್ನು ರಕ್ಷಿಸಿದರೂ ಹೆಂಡತಿ, ಗ್ರಾಮವನ್ನು ಕಾಪಾಡಲಾಗಲಿಲ್ಲ: ಬೆತ್ತಲಾದ ಮಹಿಳೆಯ ಪತಿಯ ದುಃಖ
“ಆರೋಪಿಯಿಂದ ವಿವಿಧ ಏಜೆನ್ಸಿಗಳಿಗೆ ಸೇರಿದ ಹಲವು ಗುರುತಿನ ಚೀಟಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾನು ಆನಂದಪುರದವನು ಎಂದು ಹೇಳುತ್ತಿದ್ದಾನೆ, ನಂತರ ನಾನು ಪಶ್ಚಿಮ ಮೇದಿನಿಪುರದವನು ಎಂದು ಹೇಳಿಕೊಳ್ಳುತ್ತಿದ್ದಾನೆ. ನಾವು ಸತ್ಯ ಏನೆಂದು ಪರಿಶೀಲಿಸುತ್ತಿದ್ದೇವೆ” ಎಂದು ಆಯುಕ್ತರು ಹೇಳಿದರು.
ವ್ಯಕ್ತಿ ಪ್ರಸ್ತುತ ಪೊಲೀಸ್ ವಶದಲ್ಲಿದ್ದು, ಕೋಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ವಿಶೇಷ ಶಾಖೆ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಕಾಳಿಘಾಟ್ ಪೊಲೀಸ್ ಠಾಣೆಯಲ್ಲಿ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಇನ್ನೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ. ಅವರ ಕಪ್ಪು ಹ್ಯಾಚ್‌ಬ್ಯಾಕ್ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಮುಖ್ಯಮಂತ್ರಿಯವರು ತಮ್ಮ ಕಾಲಿಘಾಟ್ ನಿವಾಸದಿಂದ ಸೆಂಟ್ರಲ್ ಕೋಲ್ಕತ್ತಾದ ‘ಹುತಾತ್ಮರ ದಿನಾಚರಣೆ’ ರ್‍ಯಾಲಿ ಸ್ಥಳಕ್ಕೆ ತೆರಳುವ ಕೆಲವು ಗಂಟೆಗಳ ಮೊದಲು ಈ ಘಟನೆ ನಡೆದಿದೆ.
ಬಿಜೆಪಿಯ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಬ್ಯಾನರ್ಜಿಯ ಭದ್ರತಾ ವ್ಯವಸ್ಥೆಗಳನ್ನು ಪ್ರಶ್ನಿಸಿದ್ದಾರೆ ಮತ್ತು ಘಟನೆಗೆ ಪ್ರತಿಕ್ರಿಯೆಯಾಗಿ ಕಾಳಿಘಾಟ್ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಮತ್ತು ನಗರ ಪೊಲೀಸ್ ಕಮಿಷನರ್ ಗೋಯಲ್ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.