ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಮೊದಲ ಬಾರಿಗೆ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆಯಾಗುತ್ತಿದೆ. ಇಂದು(ಜೂನ್ 9)ರ ಸಂಜೆ 7:15ಕ್ಕೆ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಈ ನಡುವೆ ಸಚಿವ ಸ್ಥಾನಕ್ಕೆ ಮೈತ್ರಿಕೂಟದ ಪಕ್ಷಗಳಲ್ಲಿ ಲಾಭಿ ನಡೆಯುತ್ತಿದೆ. ಈ ಮಧ್ಯೆ ಮಹಾರಾಷ್ಟ್ರದ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಬಣಕ್ಕೆ ಕೊನೆಯ ಕ್ಷಣದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಕೈ ತಪ್ಪಿದೆ.
ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್, “ಎನ್‌ಸಿಪಿಯ ಪ್ರಫುಲ್ ಪಟೇಲ್ ಅವರು ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಸಚಿವರ ಆಫರ್ ಬಂದಿತ್ತಾದರೂ ಅದನ್ನು ವಹಿಸಿಕೊಳ್ಳುವುದು ನಮಗೆ ಸರಿ ಕಂಡಿಲ್ಲ. ಹಾಗಾಗಿ, ನಮಗೆ ಕ್ಯಾಬಿನೆಟ್ ಮಂತ್ರಿಗಿರಿ ಬೇಕು. ಇದನ್ನು ಸ್ಪಷ್ಟವಾಗಿ ಬಿಜೆಪಿಯವರಿಗೆ ತಿಳಿಸಿದ್ದೇವೆ” ಎಂದು ಹೇಳಿದ್ದಾರೆ.
#WATCH | Maharashtra Deputy CM and NCP chief Ajit Pawar says, “Praful Patel has served as a cabinet minister in the central government and we did not feel right in taking Minister of State with independent charge. So we told them (BJP) that we are ready to wait for a few days,… pic.twitter.com/POBpI0pS3L
— ANI (@ANI) June 9, 2024
“ಕೆಲವು ದಿನ ಕಾಯುತ್ತೇವೆ ಎಂದು ನಾವು ಅವರಿಗೆ (ಬಿಜೆಪಿ) ತಿಳಿಸಿದ್ದೇವೆ. ಆದರೆ ನಮಗೆ ಕ್ಯಾಬಿನೆಟ್ ಮಂತ್ರಿಗಿರಿ ಬೇಕು. ನಾವು ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೇವೆ. ನಮಗೆ ಇಂದು ಒಬ್ಬ ಲೋಕಸಭೆ ಮತ್ತು ಒಬ್ಬ ರಾಜ್ಯಸಭಾ ಸಂಸದರಿದ್ದಾರೆ. ಆದರೆ ಮುಂದಿನ ಎರಡು ಮೂರು ತಿಂಗಳಲ್ಲಿ ನಾವು ರಾಜ್ಯಸಭೆಯಲ್ಲಿ ಒಟ್ಟು 3 ಸದಸ್ಯರನ್ನು ಹೊಂದಿಲಿದ್ದೇವೆ ಮತ್ತು ಸಂಸತ್ತಿನಲ್ಲಿ ನಮ್ಮ ಸಂಸದರ ಸಂಖ್ಯೆ 4 ಆಗಿರಲಿತ್ತದೆ. ಹಾಗಾಗಿ ನಮಗೆ ಒಂದು ಕ್ಯಾಬಿನೆಟ್ ದರ್ಜೆಯ ಸ್ಥಾನವನ್ನು ನೀಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದೇವೆ” ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? UFC ಫೈನಲ್ : ಚೊಚ್ಚಲ ಪ್ರಯತ್ನದಲ್ಲೇ ಫೈನಲ್‌ನಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪೂಜಾ ತೋಮರ್
ಇದೇ ವಿಚಾರವಾಗಿ ಮಾತನಾಡಿರುವ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ “ನಮ್ಮ ಪಕ್ಷಕ್ಕೆ ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವ ಸ್ಥಾನ ಸಿಗಲಿದೆ ಎಂದು ನಿನ್ನೆ ರಾತ್ರಿ ನಮಗೆ ತಿಳಿಸಲಾಗಿತ್ತು. ನಾನು ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವನಾಗಿದ್ದೆ. ಆದ್ದರಿಂದ ಇದು ನನಗೆ ಸ್ವಲ್ಪ ಹಿನ್ನಡೆಯಾಗಿದೆ. ನಾವು ಬಿಜೆಪಿ ನಾಯಕತ್ವಕ್ಕೆ ತಿಳಿಸಿದ್ದೇವೆ ಮತ್ತು ಅವರು ಈಗಾಗಲೇ ನಮಗೆ ಕೆಲವು ದಿನ ಕಾಯುವಂತೆ ಹೇಳಿದ್ದಾರೆ. ಇದು ಮೈತ್ರಿ ಸರ್ಕಾರವಾಗಿರುವುದರಿಂದ ಅವರು ಸೂಕ್ತ ನಿರ್ಧಾರ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ” ಎಂದು ಹೇಳಿಕೆ ನೀಡಿದ್ದಾರೆ.
#WATCH | NCP leader Praful Patel says, “…Last night we were informed that our party will get a Minister of State with independent charge…I was earlier a Cabinet Minister in the Union Government, so this will be a demotion for me. We have informed the BJP leadership and they… pic.twitter.com/RlfigNH2ar
— ANI (@ANI) June 9, 2024
