ದಲಿತ ಸಚಿವರ ಮೇಲೆ ಕಳಂಕ ಹೊರಿಸಲು ಕಾಂಗ್ರೆಸ್‌ ಒಳಗೆ ಪಿತೂರಿ: ಛಲವಾದಿ ನಾರಾಯಣಸ್ವಾಮಿ

Date:

Advertisements

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಘಟನೆಯಲ್ಲಿ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದ ಆರೋಪಿಗಳನ್ನು ಬಿಡುಗಡೆ ಮಾಡಲು ದಲಿತ ಗೃಹ ಸಚಿವರ ಮೇಲೆ ಒತ್ತಡ ತರಲಾಗಿದೆ. ಡಾ. ಜಿ ಪರಮೇಶ್ವರ್‌ ಅವರ ಮೇಲೆ ಕಳಂಕ ಹೊರಿಸಲು ಕಾಂಗ್ರೆಸ್ ಒಳಗೆ ಪಿತೂರಿ ನಡೆದಿದೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ತನ್ವೀರ್ ಸೇಠ್ ಬರೆದ ಪತ್ರವನ್ನು ಸರ್ಕಾರಕ್ಕೆ ಕಳಿಸಿದ್ದು, ಪತ್ರ ವಾಪಸ್ ಪಡೆಯಲು ಆಗ್ರಹಿಸಿದರು. ಇದರಲ್ಲಿ ಗೃಹ ಸಚಿವರನ್ನು ಸಿಲುಕಿಸುವ ಯತ್ನ ನಡೆದಿದೆ. ತಪ್ಪಿತಸ್ಥರ ಬಿಡುಗಡೆಗೆ ಸೂಚಿಸಿದರೆ ಪಾಪ ಮಾಡಿದಂತಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

“ಘಟನೆ ನಡೆದಾಗ ಬಿಜೆಪಿ ನೇತೃತ್ವದ ಸರ್ಕಾರವು ಅರವಿಂದ ಲಿಂಬಾವಳಿ, ಗುತ್ತೇದಾರ್, ಶಂಕರಪ್ಪ, ನಾನು ಮತ್ತು ಕೆಲವರಿದ್ದ ಸತ್ಯಶೋಧನಾ ಸಮಿತಿ ಕಳಿಸಿತ್ತು. ನಾವು ಭಯಾನಕ ಘಟನೆ ಕುರಿತು ವರದಿ ನೀಡಿದ್ದೆವು. ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿಯ ಅಧ್ಯಕ್ಷತೆಯನ್ನು ಈಗಿನ ಗೃಹ ಸಚಿವ ಪರಮೇಶ್ವರ್‌ ಅವರೇ ವಹಿಸಿದ್ದರು. ಸ್ಪಷ್ಟ ಪ್ರಾಥಮಿಕ ಮಾಹಿತಿ ಅವರಿಗೂ ಇದೆ. ಆದರೆ, ಮರುಪರಿಶೀಲನೆಗೆ ಸೂಚಿಸುವ ಮೂಲಕ ದ್ರೋಹದ ಕೆಲಸವನ್ನು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

Advertisements

“ಕೇಸನ್ನು ರಾಜ್ಯ ಸರ್ಕಾರ ಹಿಂಪಡೆದರೆ ಕೇಂದ್ರ ಸರ್ಕಾರವು ಸ್ವಯಂಪ್ರೇರಣೆಯಿಂದ ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಒಪ್ಪಿಸಬೇಕು” ಎಂದು ಆಗ್ರಹಿಸಿದರು.

“ಗಲಭೆ ಕೇವಲ ಶಾಸಕರ ಮನೆಗೆ ಸೀಮಿತ ಆಗಿರಲಿಲ್ಲ. ಪೊಲೀಸ್ ಠಾಣೆಗೂ ಬೆಂಕಿ ಹಚ್ಚಲಾಗಿತ್ತು. ನಂತರ ಪೊಲೀಸ್ ವ್ಯಾನ್‍ಗಳು, 25 ರಿಂದ 30 ವಾಹನಗಳನ್ನು ಸುಟ್ಟು ಭಸ್ಮ ಮಾಡಲಾಗಿತ್ತು. ಅಂದಿನ ನಮ್ಮ ಸರ್ಕಾರದ ಕ್ರಮದಿಂದ ಎಫ್‍ಐಆರ್ ಆಗಿ, ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣ ದಾಖಲಾಗಿತ್ತು. ಅನೇಕರು ಇದೀಗ ಜಾಮೀನಿನಡಿ ಹೊರಕ್ಕೆ ಬಂದಿದ್ದಾರೆ” ಎಂದು ತಿಳಿಸಿದರು.

“ಸುಮಾರು 200 ಜನರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗವಹಿಸದೆ ಇರುವ ಅನೇಕರನ್ನು ಅಂದೇ ಬಿಡುಗಡೆ ಮಾಡಲಾಗಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿತ್ತು. ಈಗ ಗೃಹ ಸಚಿವ ಡಾ. ಪರಮೇಶ್ವರ್‌ ಮೇಲೆ ಒತ್ತಡ ಇರುವುದು ಸ್ಪಷ್ಟ. ಈ ಒತ್ತಡಕ್ಕೆ ಅವರು ಮಣಿಯಬಾರದಿತ್ತು. ಬೆಂಕಿ ಹಾಕಿದವರು ಅಮಾಯಕರಾಗಿದ್ದರೆ ಇದು ಹಾಸ್ಯಾಸ್ಪದ” ಎಂದು ಕಿಡಿ ಕಾರಿದರು.

ಈ ಸುದ್ದಿ ಓದಿದ್ದೀರಾ? ಡಿಜೆ ಹಳ್ಳಿ, ಕೆಜಿ ಹಳ್ಳಿ ಸೇರಿ ಇತರೆ ಹಿಂಸಾಚಾರ ಪ್ರಕರಣ ಪರಿಶೀಲಿಸಿ, ಹಿಂಪಡೆಯಲು ಗೃಹ ಸಚಿವ ಪರಮೇಶ್ವರ್‌ ಸೂಚನೆ

ತನ್ವೀರ್ ಸೇಠ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ: ಎಸ್ ಮುನಿಸ್ವಾಮಿ ಆರೋಪ

ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಗಲಭೆ ಸೇರಿದಂತೆ ಇತರೆ ಕೋಮು ಗಲಭೆ ಕೇಸ್‌ಗಳಲ್ಲಿ ಬಂಧಿತರಾಗಿರುವವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರಿಗೆ ಪತ್ರ ಬರೆದಿರುವ ಶಾಸಕ ತನ್ವೀರ್ ಸೇಠ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಎಂದು ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ, “ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟ ಮಾಡಿದವರ ಮೇಲೆ ಕೇಸ್‌ಗಳನ್ನು ಹಾಕಿದ್ದಾರೆ. ಸುಮಾರು 70 ರಿಂದ 80 ವರ್ಷಗಳಿಂದ ಇರುವವರ ಮೇಲಿನ ಪ್ರಕರಣಗಳನ್ನೇ ಇದುವರೆಗೂ ವಾಪಸ್ ತಗೊಂಡಿಲ್ಲ. ಇಂಥ ಸಂದರ್ಭದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಇದ್ದು, ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿ, ಪೊಲೀಸರ ಜೀಪುಗಳಿಗೆ ಬೆಂಕಿ ಹಚ್ಚಿರುವವರ ಮೇಲಿನ ಕೇಸುಗಳನ್ನು ವಾಪಸ್ ತೆಗದುಕೊಳ್ಳಲು ಮುಂದಾಗಿದ್ದಾರೆ” ಎಂದು ಕಿಡಿ ಕಾರಿದರು.

“ಅವರದೇ ಸಂಘಟನೆ ಮುಖಂಡರು ಅವರನ್ನು ಕೊಲೆ ಮಾಡುವುದಕ್ಕೂ ಪ್ರಯತ್ನ ಪಟ್ಟಿದ್ದರು. ಅದನ್ನು ಸರಿ ಮಾಡಿಕೊಳ್ಳಲು, ಹೊಂದಾಣಿಕೆ ಮಾಡಿಕೊಳ್ಳಲು ಇವರ ಕೇಸುಗಳನ್ನು ವಾಪಸ್ ತೆಗೆಸಿದರೆ ನನ್ನನ್ನು ಬಿಟ್ಟು ಬಿಡ್ತಾರೆ ಎಂದುಕೊಂಡಿದ್ದಾರೆ. ತನ್ವೀರ್ ಸೇಠ್ ಅವರೇ, ನೀವು ಜೀವನ ಮಾಡುತ್ತಿರುವುದು ಭಾರತ ದೇಶದಲ್ಲಿ. ದೇಶವಿರೋಧಿಗಳು ಯಾರೇ ಇದ್ದರೂ ಅಂತಹವರ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆಸಿ ಎಂದು ಹೇಳುತ್ತಿರುವ ನಿಮಗೆ ನಾಚಿಕೆ ಆಗುವುದಿಲ್ಲವೆ? ನಿಮಗೆ ಜನ ಸತ್ಕಾರ ಮಾಡುವುದಿಲ್ಲ, ತಿರಸ್ಕಾರ ಮಾಡ್ತಾರೆ” ಎಂದು ತನ್ವೀರ್ ಸೇಠ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X