- ಮೋದಿಜೀ ರಾಮನನ್ನು ಕರೆತಂದರು, ಚಿಕ್ಕ ಮನುಷ್ಯ ಇಷ್ಟೊಂದು ಶಕ್ತಿವಂತನೇ?
- ಒಂದು ಚಿಕ್ಕ ಕೆಲಸ… ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರಲಾಗಲಿಲ್ಲವಲ್ಲ?
ಇತ್ತೀಚೆಗೆ, ಲೋಕಸಭೆ ಒಂದು ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಗಿತ್ತು. ಅರ್ಥಪೂರ್ಣ ಮಾತುಗಳಿಗೆ ಸಾಕ್ಷಿಯಾಗಿತ್ತು. ನಿಜನುಡಿಗಳು ಸಂಸದರ ಕಣ್ಣು ತೆರೆಸಿತ್ತು. ಸತ್ಯ ಮಾತಾಡಲು ಪ್ರೇರೇಪಿಸಿತ್ತು. ಪ್ರಶಂಸೆಗೆ ಪಾತ್ರವಾಗಿತ್ತು. ಇದು ಕಳೆದ ಫೆಬ್ರವರಿಯಲ್ಲಿ ನಡೆದ ಚರ್ಚೆಯಾದರೂ, ವಿಡಿಯೋ ಈಗ ವೈರಲ್ ಆಗುತ್ತಿದೆ. ಆಡಿರುವ ಮಾತುಗಳು ಸತ್ಯವನ್ನೇ ಹೇಳುತ್ತಿರುವುದರಿಂದ, ಈಗಲೂ ಕೇಳುವಂತಿವೆ. ದೇಶವಾಸಿಗಳ ಕಣ್ಣು ತೆರೆಸುತ್ತಿವೆ.
ಪಶ್ಚಿಮ ಬಂಗಾಳದ ಬಿರ್ಭುಮ್ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದ ತೃಣಮೂಲ್ ಕಾಂಗ್ರೆಸ್ ಸಂಸದೆ ಶತಾಬ್ದಿ ರಾಯ್, ಮೊದಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರತ್ತ ತಿರುಗಿ ಕೈ ಮುಗಿದರು. ಎಲ್ಲರಿಗೂ ಆಶ್ಚರ್ಯ. ಆದರೂ ಆಕೆಯ ಮಾತುಗಳನ್ನು ಕೇಳುವ ಸಲುವಾಗಿ, ಸುಮ್ಮನಿದ್ದರು. ನಂತರ ಶುರುವಾಯಿತು ಶತಾಬ್ದಿ ರಾಯ್ ರ ಬತ್ತಳಿಕೆಯಲ್ಲಿದ್ದ ಬಾಣಗಳ ಪ್ರಯೋಗ. ಆಕೆಯ ದಿಟ್ಟ ಸ್ಪಷ್ಟ ನುಡಿಗಳು ನೇರವಾಗಿ ಪ್ರಧಾನಿ ಮೋದಿಯನ್ನೇ ಕೇಂದ್ರೀಕರಿಸಿದ್ದವು.
”ದೇಶದ ಮೂಲೆ ಮೂಲೆಯಲ್ಲಿ ರಾಮ-ಸೀತಾ ಉದ್ಗಾರ ಕೇಳಿಬರುತ್ತಿದೆ. ಇಡೀ ದೇಶವೇ ರಾಮರಾಜ್ಯವಾಗಿದೆ. ಬಿಜೆಪಿಗರು ದೊಡ್ಡ ಧ್ವನಿಯಲ್ಲಿ ಕೂಗಿ ಕೂಗಿ ಹೇಳುತ್ತಿದ್ದಾರೆ… ಮೋದಿಜೀ ರಾಮನನ್ನು ಕರೆತಂದರು, ಭಗವಂತನನ್ನು ಭೂಮಿಗೆ ಕರೆತಂದರು… ಬಹಳ ಒಳ್ಳೆಯ ಕೆಲಸ. ಮೆಚ್ಚಬೇಕಾದ್ದೆ. ಒಬ್ಬ ಚಿಕ್ಕ ಮನುಷ್ಯ ಇಷ್ಟೊಂದು ಶಕ್ತಿವಂತನೇ? ಚಿಕ್ಕ ಮನುಷ್ಯ ಭಗವಂತನನ್ನೇ ಭೂಮಿಗೆ ಕರೆತರುವಷ್ಟು ಶಕ್ತಿವಂತನೇ?
”ನೇಷನ್ ವಾಂಟ್ಸ್ ಟು ನೋ- ದೇಶಕ್ಕೆ ಗೊತ್ತಾಗಬೇಕಿದೆ- ಒಬ್ಬ ಚಿಕ್ಕ ಮನುಷ್ಯ ಭಗವಂತನನ್ನೇ ಭೂಮಿಗೆ ಕರೆತರುವಷ್ಟು ಶಕ್ತಿವಂತನಾಗಿದ್ದರೆ, ಒಬ್ಬ ನೀರವ್ ಮೋದಿಯನ್ನು ಕರೆತರಲಾಗಲಿಲ್ಲವೇ? ಒಬ್ಬ ಮೆಹುಲ್ ಚೊಕ್ಸಿಯನ್ನು ಕರೆತರಲಾಗಲಿಲ್ಲವೇ? ಒಬ್ಬ ವಿಜಯ್ ಮಲ್ಯನನ್ನು ಕರೆತರಲಾಗಲಿಲ್ಲವೇ? ಚಿಕ್ಕ ಮನುಷ್ಯ ಶ್ರೀರಾಮಚಂದ್ರನನ್ನೇ ಕರೆತರುವಷ್ಟು ಶಕ್ತಿವಂತ, ಒಂದು ಚಿಕ್ಕ ಕೆಲಸ… ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರಲಾಗಲಿಲ್ಲವಲ್ಲ?”
ದೇವರನ್ನೇ ಕರೆತಂದವರಿಗೆ ಮನುಷ್ಯರನ್ನು ಕರೆತರಲಾಗಲಿಲ್ಲವಲ್ಲ? ಕಪ್ಪು ಹಣವನ್ನು ವಾಪಸ್ ತರಲಾಗಲಿಲ್ಲವಲ್ಲ ಎಂದ ಶತಾಬ್ದಿ ರಾಯ್, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಬಾಣಗಳಂತೆ ಪ್ರಯೋಗಿಸಿ ಮೋದಿ ಮತ್ತವರ ಪರಿವಾರವನ್ನು ಪಲ್ಟಿ ಹೊಡಿಸಿಬಿಟ್ಟರು. ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಇದನ್ನು ಓದಿದ್ದೀರಾ?: ಮಹಾ ಡಿಸಿಎಂ ಅಜಿತ್ ಪವಾರ್‌ಗೆ ಲಾಟರಿ; ತೆರಿಗೆ ಇಲಾಖೆ ಜಪ್ತಿ ಮಾಡಿದ್ದ 1,000 ಕೋಟಿ ರೂ. ಆಸ್ತಿ ವಾಪಸ್!
ಆಕೆಯ ಕಟುಸತ್ಯದ ಮಾತುಗಳಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಗುಳು ನುಂಗುತ್ತಿದ್ದರು, ತುಟಿಬಿಚ್ಚದೆ ಕೂತಿದ್ದರು. ಇಡೀ ಸದನ ಆಕೆಯ ಕೆಂಡದುಂಡೆಯಂತಹ ಮಾತುಗಳನ್ನು ಕೇಳಿಸಿಕೊಳ್ಳುತ್ತಿತ್ತು. ವಿರೋಧ ಪಕ್ಷಗಳ ಸಂಸದರು ಮೇಜು ಕುಟ್ಟಿ ಪ್ರೋತ್ಸಾಹಿಸುತ್ತಿದ್ದರು. ಮಹಿಳೆಯರು ಹೆಮ್ಮೆಯಿಂದ ಬೀಗುತ್ತಿದ್ದರು.
ಶತಾಬ್ದಿ ರಾಯ್ ಅವರ ಈ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಕ್ಷಾಂತರ ಜನ ನೋಡಿ, ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವೈರಲ್ ಮಾಡುತ್ತಿದ್ದಾರೆ.
ಇದು ಡಿಜಿಟಲ್ ಜಗತ್ತು. ಮೋದಿ ಮತ್ತು ಪರಿವಾರದ ಆಟವನ್ನು ಹತ್ತು ವರ್ಷಗಳ ಕಾಲ ಸಹಿಸಿದ ದೇಶ, ಈಗ ತಿರುಗಿ ಕೊಡುತ್ತಿದೆ. ಕಳ್ಳರನ್ನು, ಕಪ್ಪು ಹಣವನ್ನು ವಾಪಸ್ ತರದಿದ್ದರೂ, ಸತ್ಯದ ಕಿಡಿನುಡಿಗಳನ್ನು ವಾಪಸ್ ತೆಗೆದುಕೊಳ್ಳಲೇಬೇಕಾಗಿದೆ.
Shatabdi Roy, TMC MP’s speech has gone viral. It’s a must listen 😜
— sanjoy ghose (@advsanjoy) December 6, 2024
pic.twitter.com/VCB4uVduL1