ಮೋದಿ ಸುಳ್ಳುಗಳು | ಯಾರನ್ನೂ ವಿಶೇಷ ಪ್ರಜೆಗಳೆಂದು ಒಪ್ಪಿಕೊಳ್ಳದೆ, ಎಲ್ಲರನ್ನೂ ಸಮಾನಾಗಿ ಕಾಣುತ್ತಾರೆಯೇ ಮೋದಿ?

Date:

Advertisements

ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಮೆಗಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಮಾತನಾಡಿ, “ಜನರು ಇನ್ನು ಮುಂದೆ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟಕ್ಕೆ ಮತ ಚಲಾಯಿಸಲು ಬಯಸುವುದಿಲ್ಲ, ಏಕೆಂದರೆ ಅದು ಅವರ ಮತಗಳನ್ನು ವ್ಯರ್ಥ ಮಾಡುತ್ತದೆಂದು ಅವರು ಗಮನಿಸಿದ್ದಾರೆ. ಪಂಜಾಬ್‌ನಲ್ಲಿ ಬಿಜೆಪಿಗೆ ಬಲವಾದ ಬೆಂಬಲವಿರುವುದು ಕಾಣುತ್ತಿದೆ. ‘ಫಿರ್ ಏಕ್ ಬಾರ್, ಮೋದಿ ಸರ್ಕಾರ್’ ಎಂಬ ಅನುರಣಿಸುವ ಕರೆಯೊಂದಿಗೆ ತಮ್ಮ ಸುಳ್ಳು ಭಾಷಣಗಳನ್ನು ಮುಂದುವರೆಸಿದರು.(3:32-5:0)

“ನಿಖರವಾದ ಐತಿಹಾಸಿಕ ನಿರೂಪಣೆಗಳ ವೆಚ್ಚದಲ್ಲಿ ಕಾಂಗ್ರೆಸ್‌ ತನ್ನ ತುಷ್ಟೀಕರಣದ ಮತ ಬ್ಯಾಂಕ್‌ಗೆ ಒಲವು ತೋರಿದೆ. ನಮ್ಮ ಸಿಖ್ ಗುರುಗಳ ತ್ಯಾಗವನ್ನು ನಿರ್ಲಕ್ಷಿಸಿ ಕಾಂಗ್ರೆಸ್ ತನ್ನ ಕುಟುಂಬ ಮತ್ತು ಮೊಘಲ್ ಕುಟುಂಬಗಳಿಗೆ ಇತಿಹಾಸದ ಪುಸ್ತಕಗಳಲ್ಲಿ ಒಲವು ತೋರಿದೆ. ಇತಿಹಾಸದ ಈ ತಿರುಚಿದ ಆವೃತ್ತಿಯು ಪಂಜಾಬ್‌ನಲ್ಲಿ ವಿಭಜನೆಯ ದುರಂತದಂತಹ ನಿಜವಾದ ಘಟನೆಗಳ ಬಗ್ಗೆ ತಲೆಮಾರುಗಳಿಗೆ ತಿಳಿದಿಲ್ಲ ಎಂದು ಪ್ರಧಾನಿ ಪ್ರತಿಪಾದಿಸಿದರು. ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಅನ್ನು ರಕ್ಷಿಸಲು ಮತ್ತು ತನ್ನ ದುಷ್ಕೃತ್ಯಗಳನ್ನು ಬಹಿರಂಗಪಡಿಸುವುದನ್ನು ತಪ್ಪಿಸಲು ಈ ಸತ್ಯಗಳನ್ನು ಮರೆಮಾಚಿದೆ ಎಂದು ಅವರು ಹೇಳಿದರು.(10:56-12:35)

ನಮ್ಮ ಮೋದಿಜಿ ಮುಖ್ಯಮಂತ್ರಿ ಪದವಿಯಿಂದ ಪ್ರಧಾನಿ ಪಟ್ಟದವರೆಗೂ ಹೆಚ್ಚೂ ಕಡಿಮೆ ಕಾಲು ಶತಮಾನದ ಅವರ ಪ್ರಚಂಡ ಅಧಿಕಾರ ಸೌಧದ ಅಡಿಪಾಯವೇ ಅಸಲಿ ಕೋಮುದ್ವೇಷ ಮತ್ತು ನಕಲಿ ವಿಕಾಸ. ಹಿಂದುತ್ವದ ಲೋಹಪುರುಷರೆಂಬ ಬಿರುದು ಹಾಗೆಯೇ ಅವರನ್ನು ಅಲಂಕರಿಸಿಬಿಡಲಿಲ್ಲ.

Advertisements

ಗೋದಿ ಮೀಡಿಯಾದ ಸಂದರ್ಶಕಿಯೊಬ್ಬರು, “ನುಸುಳುಕೋರರು, ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಅಂತ ಭಾಷಣ ಮಾಡುವ ಅಗತ್ಯವೇನು ಬಿತ್ತು ನಿಮಗೆ” ಎಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ನಮ್ಮ ಪ್ರಧಾನಿ, “ಈ ಆಪಾದನೆ ಕೇಳಿ ಹೈರಾಣಾಗಿ ಹೋಗಿದ್ದೀನ್ರೀ.. ನಾನು ಹಿಂದೂ ಹೆಸರನ್ನೂ ಹೇಳಿಲ್ಲ, ಮುಸಲ್ಮಾನರನ್ನೂ ಹೆಸರಿಸಿಲ್ಲ. ಯಾವೊತ್ತಿಂದ ನಾನು ಹಿಂದೂ-ಮುಸ್ಲಿಮ್ ರಾಜಕಾರಣ ಮಾಡಲು ತೊಡಗುತ್ತೇನೆಯೋ ಅಂದಿನಿಂದ ನಾನು ಸಾರ್ವಜನಿಕ ಬದುಕಿನಲ್ಲಿರುವ ಅರ್ಹತೆಯೇ ನನಗಿಲ್ಲ” ಎಂದು ಸತ್ಯದ ತಲೆಯ ಮೇಲೆ ಸುತ್ತಿಗೆಯಿಂದ ಹೊಡೆದಂತೆ ಹೇಳಿದ್ದರು.

ಹೀಗಿದ್ದರೂ ಕೂಡಾ ಮತ್ತದೇ ಕಾಂಗ್ರೆಸ್‌ನ ತುಷ್ಟೀಕರಣ, ವೋಟ್‌ ಬ್ಯಾಂಕ್‌ ಎಂದೆಲ್ಲ ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ ನಮ್ಮ ಪ್ರಧಾನಿ.

ವಿಭಜನೆಯ ಸಮಯದಲ್ಲಿ ಬಿಟ್ಟುಹೋದ ಹಿಂದೂ ಮತ್ತು ಸಿಖ್ ಕುಟುಂಬಗಳಿಗೆ ಬಿಜೆಪಿ-ಎನ್‌ಡಿಎ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, “ಸಿಎಎ ಕಾನೂನು ಅವರಿಗೆ ಭಾರತೀಯ ಪೌರತ್ವ ನೀಡುವ ಮಹತ್ವದ ಹೆಜ್ಜೆಯಾಗಿದೆ. ಸಿಎಎಯನ್ನು ವಿರೋಧಿಸಿದ್ದಕ್ಕಾಗಿ ಸಿಖ್‌ ಸಮುದಾಯ ಕಾಂಗ್ರೆಸ್ ಅನ್ನು ತೀವ್ರವಾಗಿ ನಿರ್ಲಕ್ಷಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿಎಎ ಕಾನೂನನ್ನು ರದ್ದುಗೊಳಿಸಲು ಉದ್ದೇಶಿಸಿದೆ. ಈ ಸಮುದಾಯಗಳಿಗೆ ಅವರ ಸರಿಯಾದ ಪೌರತ್ವವನ್ನು ನಿರಾಕರಿಸುತ್ತದೆ” ಎಂದು ಸುಳ್ಳುಗಳ ಬಂಡಿಯನ್ನೇ ಹರಿಸಿದ್ದಾರೆ.(13:10-14:20)

“ನಾನು ಸಂತೃಪ್ತಿಯ ಪಥವನ್ನು ಅನುಸರಿಸುತ್ತೇನೆ. ಕಾಂಗ್ರೆಸ್ ಅವರದ್ದು ಓಲೈಕೆಯ ಪಥ. ನನ್ನದು ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ರಾಜಕಾರಣ. ನಾನು ‘ಸರ್ವ ಧರ್ಮ ಸಮಭಾವ’ದಲ್ಲಿ ನಂಬಿಕೆ ಹೊಂದಿದ್ದೇನೆ. ನಾವು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುತ್ತೇವೆ. ನಾವು ಯಾರನ್ನೂ ವಿಶೇಷ ಪ್ರಜೆಗಳೆಂದು ಒಪ್ಪಿಕೊಳ್ಳದೇ ಎಲ್ಲರೂ ಸಮಾನರು ಎಂದು ಪರಿಗಣಿಸುತ್ತೇವೆ’ ಎಂದು ಪ್ರತಿ‍ಪಾದಿಸಿರುವ ಮೋದೀಜಿ, ಇದೀಗ ಸಿಎಎ ಕಾನೂನು ಮಧ್ಯಕ್ಕೆ ತಂದು ಇದನ್ನು ಕಾಂಗ್ರೆಸ್‌ ವಿರೋಧಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವುದಾದರೆ ಸಿಎಎ ಕಾನೂನಿನ ಅಗತ್ಯವಾದರೂ ಯಾಕೆ?

ಜಾಡು ಪಕ್ಷವನ್ನು(ಎಎಪಿ) ಕಾಂಗ್ರೆಸ್‌ಗೆ ಸ್ಪಷ್ಟವಾಗಿ ಹೋಲಿಸಿದ ಪ್ರಧಾನಿ, ಕಾಂಗ್ರೆಸ್‌ನ ದಮನಕಾರಿ ತಂತ್ರಗಳನ್ನು ಅಳವಡಿಸಿಕೊಂಡಿರುವ “ಫೋಟೋಕಾಪಿ ಪಕ್ಷ” ಎಂದು ಕರೆದರು. ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ವಿನಾಶಕಾರಿ ಮೈತ್ರಿ ಏರ್ಪಟ್ಟಿದೆ. ಎರಡೂ ಪಕ್ಷಗಳಿಗೆ ಮತ ಚಲಾಯಿಸುವುದು ಪಂಜಾಬ್‌ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ” ಎಂದು ಮೋದಿ ತಮ್ಮ ಕಪಟ ಸುಳ್ಳುಗಳನ್ನು ಒತ್ತಿ ಹೇಳಿದರು.(14:22-17:30)

“2024ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಚುನಾವಣೆಯೇ ಇರುವುದಿಲ್ಲ. ನರೇಂದ್ರ ಮೋದಿ, ನರೇಂದ್ರ ಪುಟಿನ್ ಆಗುತ್ತಾರೆ” ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಟೀಕಿಸಿದ್ದಾರೆ.

“ಬಿಜೆಪಿ ನಾಯಕರು ಈಗಾಗಲೇ ಮೋದಿಯನ್ನು ಭಾರತದ ‘ಮಲಿಕ್’ ಎಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ. 140 ಕೋಟಿ ಮಂದಿ ಭಾರತೀಯರು ಭಾರತವನ್ನು ಉಳಿಸಲು ನಿರ್ಧರಿಸಿದರೆ, ದೇಶವನ್ನು ಉಳಿಸಲಾಗುತ್ತದೆ” ಎಂದು ದೆಹಲಿಯಲ್ಲಿ ಕರೆ ನೀಡಿದ್ದಾರೆ.

“ಭಾರತದ ಬಗ್ಗೆ ಕಾಂಗ್ರೆಸ್‌ಗೆ ನಂಬಿಕೆಯ ಕೊರತೆ ಇದ್ದು, ರಾಷ್ಟ್ರದ ಗುರುತನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ನಡೆಸುತ್ತಿವೆ. ಇಂತಹ ವಿಭಜಕ ರಾಜಕೀಯವನ್ನು ಮತದಾರರು ತಿರಸ್ಕರಿಸಬೇಕು. ಮೂಲಸೌಕರ್ಯಗಳನ್ನು ಸುಧಾರಿಸಲು, ರೈತರಿಗೆ ಬೆಂಬಲ ನೀಡಲು ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳನ್ನು ಉತ್ತೇಜಿಸುವಂತಹ ಯೋಜನೆಗಳ ಜಾರಿಗೆ ಬಿಜೆಪಿ ಬದ್ಧವಾಗಿದೆ. ಪಂಜಾಬ್ ಅಭಿವೃದ್ಧಿಗೆ ಶ್ರಮಿಸುತ್ತದೆ. ಹಾಗಾಗಿ ಪಂಜಾಬ್ ಮತ್ತು ರಾಷ್ಟ್ರದ ಉಜ್ವಲ ಭವಿಷ್ಯವನ್ನು ಭದ್ರಪಡಿಸಲು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು” ಎಂದು‌ ಮೋದಿ ಮತದಾರರಲ್ಲಿ ಕೇಳಿಕೊಂಡರು.(17:30-20:45)

ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ವರ್ಷಾನುಗಟ್ಟಲೆ ಕೇಂದ್ರದ ವಿರುದ್ಧ ಹೋರಾಟ ನಡೆಸಿದ್ದರು. ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳನ್ನು 2020ರ ಸೆಪ್ಟೆಂಬರ್ 17ರಂದು ಜಾರಿಗೊಳಿಸಿತ್ತು. ಈ ಕಾಯ್ದೆಗಳೇ ರೈತರ ವಿರೋಧಕ್ಕೆ ಮೂಲ ಕಾರಣವಾಗಿದ್ದವು.

ಇದನ್ನೂ ಓದಿದ್ದೀರಾ? ಮೋದಿ ಸುಳ್ಳುಗಳು | ಪಂಜಾಬ್‌ ರೈತರ ಹೋರಾಟ ಹತ್ತಿಕ್ಕಿದ ಮೋದಿ; ಸಿಖ್‌ ವೋಟ್‌ಬ್ಯಾಂಕ್‌ ಕೈಗೂಡುತ್ತದೆಯೇ?

ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಸುದೀರ್ಘ ಹೋರಾಟ, ರೈತರ ಕಿಸಾನ್ ಮಹಾ ಪಂಚಾಯತ್‌ಗಳು ಕೇಂದ್ರ ಸರ್ಕಾರದ ನಿದ್ದೆಗೆಡಿಸಿದ್ದವು. ಇವುಗಳ ಜೊತೆಗೆ ಕಿಸಾನ್‌ ರ್‍ಯಾಲಿಗಳು ಆರಂಭವಾಗಿದ್ದು, ಲಕ್ಷಾಂತರ ರೈತರು ಪ್ರತಿಭಟನೆಯಲ್ಲಿ ಭಾಗಿದ್ದರು. 600ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದರು. ರೈತರ ʼದೆಹಲಿ ಚಲೋʼ ವೇಳೆಯೂ ಮೋದಿ ರೈತರ ವಿರುದ್ಧ ಲಾಠಿ ಚಾರ್ಜ್‌ ಸೇರಿದಂತೆ ಹಲವು ತಡೆಗಳನ್ನು ಮಾಡಿಸಿದರು. ಇದೀಗ ಪಂಜಾಬ್‌ ರೈತರ ಕಂಗಣ್ಣಿಗೆ ಗುರಿಯಾಗಿರುವ ಮೋದಿ, ರೈತರಿಗೆ ಸುಳು ಭರವಸೆಗಳನ್ನು ಮತ ಗಿಟ್ಟಿಸಲು ಸಾಧ್ಯವೇ?

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಬಾನಿಯ ವಂತಾರ ಮೃಗಾಲಯದ ಕಾರ್ಯಾಚರಣೆ ತನಿಖೆಗೆ ಎಸ್‌ಐಟಿ ರಚನೆ

ಕಳೆದ ಕೆಲವು ತಿಂಗಳುಗಳಿಂದ ಅಂಬಾನಿ ಅವರ ರಿಲಯನ್ಸ್‌ ಸಂಸ್ಥೆಗೆ ಸೇರಿದ, ಮುಕೇಶ್...

ಮದುವೆಯಾಗಲು ನಿರಾಕರಿಸಿದ ಯುವತಿಗೆ ಗುಂಡಿಕ್ಕಿ ಕೊಲೆ: ತಾನೂ ಆತ್ಮಹತ್ಯೆಗೆ ಶರಣಾದ ಯುವಕ

ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಯುವಕನೋರ್ವ ಯುವತಿಗೆ ಗುಂಡಿಕ್ಕಿ ಕೊಲೆ ಮಾಡಿ, ಬಳಿಕ...

ಅಣ್ಣಾಮಲೈ ಕೈಯಿಂದ ಪ್ರಶಸ್ತಿ ಪಡೆಯಲು ವಿದ್ಯಾರ್ಥಿ ನಕಾರ

ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದ ವಿದ್ಯಾರ್ಥಿಯೊಬ್ಬ ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರಿಂದ...

ಆಸ್ಪತ್ರೆ ನಿರ್ಮಾಣ ಹಗರಣ: ಎಎಪಿಯ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ

ದೆಹಲಿ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಆಸ್ಪತ್ರೆಗಳ ನಿರ್ಮಾಣದಲ್ಲಿ ಹಗರಣ ನಡೆದಿದೆ ಎಂಬ...

Download Eedina App Android / iOS

X