ಮೋದಿ ಸುಳ್ಳುಗಳು | ಪಂಜಾಬ್‌ ರೈತರ ಹೋರಾಟ ಹತ್ತಿಕ್ಕಿದ ಮೋದಿ; ಸಿಖ್‌ ವೋಟ್‌ಬ್ಯಾಂಕ್‌ ಕೈಗೂಡುತ್ತದೆಯೇ?

Date:

ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಪಟಿಯಾಲದ ಮತದಾರರನ್ನು ಕುರಿತು ಮಾತನಾಡಿ, “ಐದು ಹಂತಗಳ ಮತದಾನದ ನಂತರ, ಭಾರತದ ಜನರ ಸಂದೇಶವು ‘ಫಿರ್ ಏಕ್ ಬಾರ್, ಮೋದಿ ಸರ್ಕಾರ್’ ನೊಂದಿಗೆ ಅನುರಣಿಸುತ್ತದೆ. ʼವಿಕಸಿತ ಭಾರತʼಕ್ಕಾಗಿ ಬಿಜೆಪಿಗೆ ಮತ ಚಲಾಯಿಸಬೇಕು” ಎಂದು ಒತ್ತಾಯಿಸಿದರು.(20:48-22:2)

“ಈ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲು ಎನ್‌ಡಿಎ ಮತ್ತು ಭ್ರಷ್ಟ ಐಎನ್‌ಡಿಐಎ ಮೈತ್ರಿಕೂಟದ ನಡುವಿನ ಸ್ಪರ್ಧೆಯಾಗಿದೆ. ಒಂದೆಡೆ, ಭಾರತದಲ್ಲಿ ಫೈಟರ್ ಜೆಟ್‌ಗಳನ್ನು ತಯಾರಿಸುವ ಗುರಿಯನ್ನು ಹೊಂದಿರುವ ಮೋದಿ ಇದ್ದಾರೆ, ಮತ್ತೊಂದೆಡೆ, ಭಾರತದ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಗುರಿಯನ್ನು ಹೊಂದಿರುವ ಇಂಡಿ ಮೈತ್ರಿ ಇದೆ. ಎನ್‌ಡಿಎ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದೆ. ಆದರೆ ಇಂಡಿ ಮೈತ್ರಿ ಕೂಟವು ತಲೆಮಾರುಗಳ ಬಡತನವನ್ನು ಶಾಶ್ವತಗೊಳಿಸಿದ್ದು, ಭಾರತವನ್ನು ‘ಲೂಟಿ ಯಂತ್ರ’ವನ್ನಾಗಿ ಪರಿವರ್ತಿಸಿದೆ. ಇಂಡಿ ಮೈತ್ರಿಕೂಟದ ವಿಭಜಕ ರಾಜಕೀಯವು ಭಾರತದ ವಿಭಜನೆಗೆ ಕಾರಣವಾಯಿತು ಮತ್ತು ನಮ್ಮನ್ನು 70 ವರ್ಷಗಳ ಕಾಲ ಕರ್ತಾರ್‌ಪುರ್‌ ಸಾಹಿಬ್‌ನಿಂದ ದೂರವಿರಿಸಿತು” ಎಂದು ಸುಳ್ಳು ಭಾಷಣಗಳನ್ನು ಮಾಡುತ್ತಿದ್ದಾರೆ.(22:3-26:12)

ಸಟ್ಲೆಜ್-ಯಮುನಾ ಲಿಂಕ್ (ಎಸ್‌ವೈಎಲ್‌) ಕಾಲುವೆ, ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ರೈತರ ಸಾವುಗಳು ಮತ್ತು ಸಿಖ್ ಕೈದಿಗಳ ಬಿಡುಗಡೆಗೆ ಸಂಬಂಧಿಸಿದ ವಿಷಯ ಸೇರಿದಂತೆ ರಾಜ್ಯದಲ್ಲಿ ಹಲವು ಸಮಸ್ಯೆಗಳ ಪರಿಹಾರಕ್ಕೆ ಹತ್ತುವರ್ಷಗಳ ಕಾಲ ಮುಂದಾಗದ ಮೋದಿ, ಇದೀಗ ಸಿಖ್ ಮತ ಬ್ಯಾಂಕ್‌ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕ್ಯಾಬಿನೆಟ್ ಮಾಜಿ ಸಚಿವ ಮಹೇಶಿಂದರ್ ಸಿಂಗ್ ಗ್ರೆವಾಲ್ ಟೀಕಿಸಿದ್ದು, “ಪಂಜಾಬ್‌ನ ಸಮಸ್ಯೆಗಳನ್ನು ಪ್ರಧಾನಿ ನಿರ್ಲಕ್ಷಿಸಿದ್ದಾರೆ. ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ರೈತರ ಸಾವುಗಳನ್ನು ತಡೆಯದ ಮೋದಿ, ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರ ಏನೂ ಮಾಡಿಲ್ಲ” ಎಂದು ಆರೋಪಿಸಿದ್ದಾರೆ.

“ಪುಲ್ವಾಮಾ ದಾಳಿ, ಸರ್ಜಿಕಲ್ ಸ್ಟ್ರೈಕ್ ಅಥವಾ ಕರ್ತಾರ್ಪುರ ಕಾರಿಡಾರ್ ಬಗ್ಗೆ ಚರ್ಚಿಸುವ ಮೂಲಕ ನೀವು(ಮೋದಿ) ಪಂಜಾಬಿಗಳ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ನಿಮ್ಮ 2019ರ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ನೀವು ಯಾವ ಪ್ರಯತ್ನಗಳನ್ನು ಮಾಡಿದ್ದೀರಿ ಎಂಬುದನ್ನು ನೀವು ವಿವರಿಸಿ ಮತ ಪಡೆಯಿರಿ” ಎಂದು ಕ್ಯಾಬಿನೆಟ್‌ನ ಮಾಜಿ ಸಚಿವ ಮಹೇಶಿಂದರ್ ಸಿಂಗ್ ಗ್ರೆವಾಲ್ ಪ್ರತಿಪಾದಿಸಿದರು.

“ಕಾಂಗ್ರೆಸ್-ಎಎಪಿ ಪಂಜಾಬ್‌ನ ನೆಮ್ಮದಿಯನ್ನು ತುಳಿದಿದೆ. ಮಿತಿಮೀರಿದ ಭ್ರಷ್ಟಾಚಾರ ಮತ್ತು ಕೈಗಾರಿಕಾ ಅವಕಾಶಗಳು ಪಂಜಾಬ್ ರಾಜ್ಯವನ್ನು ನಾಶಪಡಿಸಿವೆ. ಇಂದು, ಸಂಪನ್ಮೂಲ ಮಾಫಿಯಾ, ಡ್ರಗ್ಸ್ ಮಾಫಿಯಾ ಮತ್ತು ಶೂಟರ್ ಗ್ಯಾಂಗ್‌ಗಳು ಪಂಜಾಬ್‌ನಲ್ಲಿ ಆಳುತ್ತಿವೆ. ಪಂಜಾಬ್ ರಾಜ್ಯ ಸರ್ಕಾರವು ಸಾಲದಿಂದ ಬಳಲುತ್ತಿದೆ, ಅದರ ಮುಖ್ಯಮಂತ್ರಿ ಕೇವಲ ಕಾಗಜಿ(ಕಾಗದದ ಮೇಲಷ್ಟೇ) ಸಿಎಂ ಆಗಿದ್ದಾರೆ. ಭ್ರಷ್ಟ ಕಾಂಗ್ರೆಸ್ ಮತ್ತು ಎಎಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪಂಜಾಬ್ ಅಭಿವೃದ್ಧಿಯನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿದ್ದು, ಲೂಟಿ ಮಾಡುತ್ತಿದ್ದಾರೆ” ಎಂದು ಸುಳ್ಳಿನ ಸುರಿಮಳೆಯನ್ನೇ ಸುರಿಸಿದ್ದಾರೆ ಮೋದಿ.(26:15-28:35)

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು “ಕಾಗಾಜಿ ಮುಖ್ಯಮಂತ್ರಿ” (ಕಾಗದದ ಮೇಲಿನ ಸಿಎಂ) ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಆಮ್ ಆದ್ಮಿ ಪಕ್ಷವು ತಿರುಗೇಟು ನೀಡಿದ್ದು, “ಪ್ರತಿಯೊಂದು ರಾಜಕೀಯ ಪಕ್ಷವೂ ಬಿಜೆಪಿಯಷ್ಟು ಸರ್ವಾಧಿಕಾರವಲ್ಲದ ಕಾರಣ ಮೋದಿ ತಮ್ಮದೇ ಪಕ್ಷದತ್ತ ನೋಡಬೇಕಾಗಿದೆ. ‘ಕಾಗಾಜಿ’ ಸಿಎಂಗಳನ್ನು ನೇಮಿಸುವುದು ಬಿಜೆಪಿಯ ಶೈಲಿಯಾಗಿದೆ” ಎಂದು ಎಎಪಿ ವಕ್ತಾರ ನೀಲ್ ಗಾರ್ಗ್ ಕಿಡಿಕಾರಿದ್ದಾರೆ.

“ಸಿಎಂ ಭಗವಂತ್ ಮಾನ್ ಅವರನ್ನು ಮೂರು ಕೋಟಿ ಪಂಜಾಬಿಗಳು ಆಯ್ಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಮತ್ತು ಐತಿಹಾಸಿಕ ಜನಾದೇಶವನ್ನು ಹೊಂದಿರುವ ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು 92 ಶಾಸಕರೊಂದಿಗೆ ಪಂಜಾಬ್ ವಿಧಾನಸಭೆಗೆ
ಜನರು ಆರಿಸಿ ಕಳುಹಿಸಿದ್ದಾರೆ” ಎಂದು ಹೇಳಿದ್ದಾರೆ.

“ರಾಜ್ಯದಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಿಸುತ್ತಿದ್ದಾರೆ. ಎಮಿನೆನ್ಸ್ ಶಾಲೆಗಳನ್ನು ನಿರ್ಮಿಸುತ್ತಿದ್ದಾರೆ, ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸುತ್ತಿದ್ದಾರೆ, ಜನರಿಗೆ ಉಚಿತ ವಿದ್ಯುತ್ ನೀಡಲು ಥರ್ಮಲ್ ಪವರ್ ಪ್ಲಾಂಟ್‌ಗಳನ್ನು ಖರೀದಿಸುತ್ತಿದ್ದಾರೆ. ರೈತರಿಗೆ ಹಗಲು ಹೊತ್ತಿನಲ್ಲಿ ಕಾಲುವೆ ನೀರು, ವಿದ್ಯುತ್ ಸಹ ನೀಡುತ್ತಿದ್ದಾರೆ. ಭಗವಂತ್ ಮಾನ್ ಅವರು ‘ಕಗಾಜಿ’ ಸಿಎಂ ಅಲ್ಲ, ಅವರು ಮೂರು ಕೋಟಿ ಪಂಜಾಬಿಗಳ ಪ್ರೀತಿಯ ಸಿಎಂ” ಎಂದು ಎಎಪಿ ನಾಯಕ, ಪ್ರಧಾನಿ ಮೋದಿಯವರಿಗೆ ತಿರುಗೇಟು ನೀಡಿದ್ದಾರೆ.

“ಐಎನ್‌ಡಿಐ ಮೈತ್ರಿಕೂಟವು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದು, ಸಿಎಎಯನ್ನು ವಿರೋಧಿಸುತ್ತದೆ. ಮತ ಬ್ಯಾಂಕ್‌ಗಾಗಿ, ವಿಭಜನೆಯ ಭೀಕರತೆಯನ್ನು ಎದುರಿಸಿದ ನಂತರ ನಮ್ಮ ಸಿಖ್ ಸಹೋದರ ಸಹೋದರಿಯರು ಭಾರತಕ್ಕೆ ಬರುವುದನ್ನು ತಡೆಯುವ ಗುರಿಯನ್ನು ಅವರು ಹೊಂದಿದ್ದರು.(39:30-41:00) ನಮ್ಮ ಸರ್ಕಾರವು ರೈತರಿಗೆ ಆದ್ಯತೆ ನೀಡುತ್ತದೆ. ಕಳೆದ ದಶಕದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ 2.5 ಪಟ್ಟು ಹೆಚ್ಚಳಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಮುಂದಿನ 5 ವರ್ಷಗಳಲ್ಲಿ, ಪಂಜಾಬ್‌ನ ಕೊಡುಗೆಗಳೊಂದಿಗೆ ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ಅಲ್ಲದೆ, ಪಟಿಯಾಲ ಶಿಕ್ಷಣದ ಕೇಂದ್ರವಾಗಿ ಹೊರಹೊಮ್ಮಲಿದೆ” ಎಂದು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ.(44:00-45:50)

ಕೇಂದ್ರವು ರೈತರ ಬೆಳೆಗಳಿಗೆ ಎಂಎಸ್‌ಪಿ ನೀಡುವ ಬಗ್ಗೆ ಕಾನೂನು ಖಾತರಿ ನೀಡಬೇಕೆಂದು ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸಿದಾಗ, ರೈತರು ದೆಹಲಿ ಪ್ರವೇಶಿಸದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪೊಲೀಸರನ್ನು ಬಳಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಹತ್ತಿಕ್ಕುವ ಕಾರ್ಯ ನಡೆಸಿತ್ತು.

ಇದನ್ನೂ ಓದಿದ್ದೀರಾ? ಮೋದಿ ಸುಳ್ಳುಗಳು | ಗೂಂಡಾ, ಅತ್ಯಾಚಾರಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಳಿಸಿದ್ದು ಕಾಂಗ್ರೆಸ್ಸೋ? ಅಥವಾ ಮೋದಿಯೋ?

ಲೋಕಸಭಾ ಚುನಾವಣೆ ವೇಳೆ ಪಂಜಾಬ್‌ನ ಗುರುದಾಸಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನೇಶ್ ಬಬ್ಬೂ ಸೇರಿದಂತೆ ಬಿಜೆಪಿಯ ಹಲವು ಅಭ್ಯರ್ಥಿಗಳ ವಿರುದ್ಧ ರೈತರು ಈಗಾಗಲೇ ಪ್ರತಿಭಟನೆ ನಡೆಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫರೀದ್‌ಕೋಟ್ ಅಭ್ಯರ್ಥಿ ಹನ್ಸ್ ರಾಜ್ ಹನ್ಸ್, ಅಮೃತಸರದ ತರಣ್‌ಜಿತ್ ಸಿಂಗ್ ಸಂಧು, ಪಟಿಯಾಲ ಅಭ್ಯರ್ಥಿ ಪ್ರಣೀತ್ ಕೌರ್ ಅವರು ರೈತರ ಕೋಪಕ್ಕೆ ಗುರಿಯಾಗಿದ್ದಾರೆ. ಹೀಗಿರುವಾಗ ರೈತರನ್ನು ಮುಂದಿಟ್ಟುಕೊಂಡು ಮಾಡುತ್ತಿರುವ ಮೋದಿ ವೋಟ್‌ ಬ್ಯಾಂಕ್‌ ರಾಜಕೀಯ ಕೈಗೂಡುತ್ತದೆಯೇ?

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷರು ವರದಿ ಒಪ್ಪಿಸುವುದು – ಅರ್ವೆಲ್ ಮಾತನ್ನು ನೆನಪಿಸುತ್ತದೆ

'ದ್ವಂದಾಲೋಚನೆ ಎಂದರೆ ಏಕಕಾಲದಲ್ಲಿ ಮನಸ್ಸಿನಲ್ಲಿ ಎರಡು ತದ್ವಿರುದ್ಧ ನಂಬಿಕೆಗಳನ್ನು ಇಟ್ಟುಕೊಳ್ಳುವುದು ಮತ್ತು...

ಬಹುತ್ವದ ಪರವಾಗಿ ಇರುವವರನ್ನು ನಾವು ಸದಾ ಸ್ಮರಿಸುತ್ತಿರಬೇಕು: ಸಿಎಂ ಸಿದ್ದರಾಮಯ್ಯ

"ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ" ಎಂದು...

ಅಡುಗೆಮನೆಯಲ್ಲಿ ಪುರುಷ, ಫುಟ್‌ಬಾಲ್ ಮೈದಾನದಲ್ಲಿ ಬಾಲಕಿ; ಪಿತೃಪ್ರಭುತ್ವವನ್ನು ಛಿದ್ರಗೊಳಿಸುವ ಕೇರಳದ ಶಾಲಾ ಪಠ್ಯಗಳು

ಒಬ್ಬ ಪುರುಷ ಅಡುಗೆಮನೆಯಲ್ಲಿ ತೆಂಗಿನಕಾಯಿ ತುರಿಯುತ್ತಾನೆ. ಆತನ ಪತ್ನಿ ಅಡುಗೆ ಮಾಡುತ್ತಾರೆ....

ಲೋಕಸಭೆ ಸ್ಪೀಕರ್ ಚುನಾವಣೆ| ಟಿಡಿಪಿ ಸ್ಪರ್ಧಿಸಿದರೆ ‘ಇಂಡಿಯಾ’ ಒಕ್ಕೂಟ ಬೆಂಬಲಿಸುತ್ತೆ: ಸಂಜಯ್ ರಾವತ್

ಲೋಕಸಭೆ ಸ್ಪೀಕರ್ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಆಡಳಿತಾರೂಢ ಮಿತ್ರ ಪಕ್ಷವಾದ ತೆಲುಗು...