ಮೋದಿ ಸುಳ್ಳುಗಳು | 2017ಕ್ಕಿಂತ ಮೊದಲು ಯುಪಿಯಲ್ಲಿ ʼಗೂಂಡಾರಾಜ್ʼ; ಸತ್ಯ ತಿರುಚಿದ ಮೋದಿ

Date:

Advertisements

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ(ಯುಪಿ) ಲಾಲ್‌ಗಂಜ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, “ಸಿಎಎ ಮೋದಿಯವರ ಭರವಸೆಗೆ ಸಾಕ್ಷಿಯಾಗಿದೆ. ಭಾರತದ ವಿಭಜನೆಯ ಕಠಿಣ ಪರಿಣಾಮಗಳನ್ನು ಎದುರಿಸಿದ ಆರು ಅಲ್ಪಸಂಖ್ಯಾತರಿಗೆ ಸೇರಿದ ಸಿಎಎ ಅಡಿಯಲ್ಲಿ ಅನೇಕ ಜನರು ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಅವರು ತಮ್ಮ ಮತ ಬ್ಯಾಂಕಿನ ಭಾಗವಾಗದ ಕಾರಣ ಮತ್ತು ಸಿಎಎ ವಿರುದ್ಧ ಸುಳ್ಳುಗಳ ಜಾಲವನ್ನು ಸೃಷ್ಟಿಸಿದ್ದರಿಂದ ಇಂಡಿಯಾ ಮೈತ್ರಿಕೂಟವು ಅವರ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ. ಸಿಎಎ ಉಳಿಯುತ್ತದೆ ಮತ್ತು ಭಾರತಕ್ಕೆ ಸಂಯೋಜಿತವಾಗಿರುವ ಎಲ್ಲರಿಗೂ ಪೌರತ್ವವನ್ನು ನೀಡುತ್ತದೆ” ಎಂದು ಸುಳ್ಳು ಭಾಷಣಗಳನ್ನೇ ಮಾಡುತ್ತಿದ್ದಾರೆ.(22-25:2)

ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಕೇರಳದ ಉತ್ತರ ಭಾಗದಲ್ಲಿ ಸಿಪಿಐ (ಎಂ) ಹಿರಿಯ ನಾಯಕ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತ್ತೀಚೆಗೆ ಆಯೋಜಿಸಿದ್ದ ಸತತ ನಾಲ್ಕು ರಾಲಿಗಳನ್ನುದ್ದೇಶಿಸಿ ಮಾತನಾಡಿ, ಸಿಎಎ ಅನುಷ್ಠಾನದ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸಿದ್ದರು. ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದ್ದರು.

“ಮುಸ್ಲಿಂ ಆಡಳಿತಗಾರರು, ಅಧಿಕಾರಿಗಳು ಸಾಂಸ್ಕೃತಿಕ ಪ್ರತಿಬಿಂಬ ಮತ್ತು ದೇಶದ ಇತಿಹಾಸ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಮರೂ ಸಹ ನಿರ್ಣಾಯಕ ಮಹತ್ವದ ಪಾತ್ರ ವಹಿಸಿದ್ದಾರೆ. ಅಲ್ಲದೆ “ಭಾರತ್ ಮಾತಾ ಕಿ ಜೈ” ಮತ್ತು “ಜೈ ಹಿಂದ್”ನಂತಹ ಘೋಷಣೆಗಳನ್ನು ಮೊದಲು ಎಬ್ಬಿಸಿದ್ದು, ಇಬ್ಬರು ಮುಸ್ಲಿಮರು ಎಂಬುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ತಿಳಿದಿಲ್ಲದಿರಬಹುದು. ಹಾಗಾಗಿ ಮುಸ್ಲಿಮರನ್ನು ಭಾರತದಿಂದ ಪಾಕಿಸ್ತಾನಕ್ಕೆ ಹಸ್ತಾಂತರಿಸಬೇಕೆಂದು ಪ್ರತಿಪಾದಿಸುವ ಸಂಘ ಪರಿವಾರದ ನಾಯಕರು ಮತ್ತು ಕಾರ್ಯಕರ್ತರು ಈ ಐತಿಹಾಸಿಕ ಸಂದರ್ಭವನ್ನು ತಿಳಿದುಕೊಳ್ಳಬೇಕು” ಎಂದು ಪಿಣರಾಯಿ ಹೇಳಿದ್ದರು.

Advertisements

“ಕೇಂದ್ರದಲ್ಲಿನ ಆರ್‌ಎಸ್‌ಎಸ್‌ ನೇತೃತ್ವದ ಬಿಜೆಪಿ ಸರ್ಕಾರವು ಸಿಎಎ ಅನುಷ್ಠಾನದ ಮೂಲಕ ಮುಸ್ಲಿಮರನ್ನು ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ವಲಸೆ ಬಂದ ಮುಸ್ಲಿಂ ನಿರಾಶ್ರಿತರ ಪೌರತ್ವವನ್ನು ಕಾನೂನುಬಾಹಿರಗೊಳಿಸುವುದು ಸಿಎಎಯ ನಿಜವಾದ ಉದ್ದೇಶವಾಗಿದೆ” ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಆರೋಪಿಸಿದ್ದರು. ಆದರೆ, ನಮ್ಮ ಪ್ರಧಾನಿ ಸಿಎಎ ಮೂಲಕ ಮತ್ತೊಮ್ಮೆ ದೇಶ ವಿಭಜಿಸುವತ್ತ ಮುಂದಾದರೇ?

“ಬಿಜೆಪಿ ಸರ್ಕಾರವು ಯುಪಿಯ ತ್ವರಿತ ಅಭಿವೃದ್ಧಿಗೆ ಚಾಲನೆ ನೀಡುತ್ತಿದೆ. ಮಂಡೂರಿ ವಿಮಾನ ನಿಲ್ದಾಣ, ಮಹಾರಾಜ ಸುಹೇಲ್ ದೇವ್ ವಿಶ್ವವಿದ್ಯಾಲಯ ಮತ್ತು ರೈತರ ಕಲ್ಯಾಣ ಯುಪಿಯಲ್ಲಿ ಅಭಿವೃದ್ಧಿ ಉತ್ತೇಜನ ಪಡೆದ ವಿವಿಧ ಯೋಜನೆಗಳಲ್ಲಿ ಸೇರಿವೆ. 2017ಕ್ಕಿಂತ ಮೊದಲು ಯುಪಿ ʼಗೂಂಡಾರಾಜ್ʼ ಮತ್ತು ಮಾಫಿಯಾ ಆಡಳಿತಕ್ಕೆ ಮಾತ್ರ ಸಾಕ್ಷಿಯಾಗಿದೆ” ಎಂದು ಸುಳ್ಳುಗಳನ್ನೇ ಬಿತ್ತರಿಸಿದ್ದಾರೆ.(38-39:7)

ಉತ್ತರ ಪ್ರದೇಶದಲ್ಲಿ ನಾಲ್ಕು ವರ್ಷಗಳ ಹಿಂದೆ ಎಂಟು ಮಂದಿ ಪೊಲೀಸರನ್ನು ಗುಂಡಿಕ್ಕಿ ಕೊಂದ ದಿನವೇ, ಅಷ್ಟೇ ಭಯಾನಕ ಎರಡು ಘಟನೆಗಳು ಗಮನಕ್ಕೆ ಬರಲಿಲ್ಲ. ಮೊದಲಿಗೆ, ಅಲಹಾಬಾದ್‌ನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲಾಯಿತು. ನಂತರ, 19 ವರ್ಷದ ದಲಿತ ಯುವತಿ ಮತ್ತು ಆಕೆಯ ತಂದೆಯನ್ನು ಠಾಕೂರ್ ಜಾತಿಗೆ ಸೇರಿದವನು ಹುಡುಗಿಯ ಮದುವೆಗೆ ಕೆಲವು ದಿನಗಳ ಮೊದಲು ಕೊಲೆ ಮಾಡಿದ್ದನು.

ʼಗೂಂಡಾರಾಜ್’ ಎಂದು ಹಣೆಪಟ್ಟಿ ಕಟ್ಟಿ 2017ಕ್ಕಿಂತ ಮೊದಲು ಎಂದು ಮೋದಿ ಹೇಳುತ್ತಿದ್ದಾರೆ. ಇವು ಪ್ರತ್ಯೇಕ ಘಟನೆಗಳಲ್ಲ. ತಮ್ಮ ಆಪ್ತ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿಯೇ ನಡೆದಿರುವಂತಹ ಪ್ರಕರಣಗಳು.

ಮುಸ್ಲಿಂ ಅಥವಾ ಹಿಂದುಳಿದ ಜಾತಿಗಳಿಗೆ ಸೇರಿದ ಸಣ್ಣ ಅಪರಾಧಿಗಳ ವಿರುದ್ಧ ಹೆಚ್ಚಾಗಿ ಬಳಸಲಾಗುವ ಎನ್‌ಕೌಂಟರ್‌ಗಳ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರದ ನಾಚಿಕೆಗೇಡಿನ ಹೇಳಿಕೆಗಳು ಜನಪ್ರಿಯ ಮೆಚ್ಚುಗೆ ಗಳಿಸಿದ್ದರೆ, ತನ್ನದೇ ನೆಲದಲ್ಲಿನ ಅಪರಾಧಗಳನ್ನು ನಿಗ್ರಹಿಸುವಲ್ಲಿ ಬಹುದೊಡ್ಡ  ವಿಫಲತೆಯನ್ನು ಕಂಡಿದ್ದಾರೆ.

ನಾಲ್ಕು ವರ್ಷದ ಹಿಂದೆಯೇ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿ-ಅಂಶಗಳ ಪ್ರಕಾರ, 2018ರಲ್ಲಿ, ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ (59,445 ಅಪರಾಧಗಳು) ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. ಇದು 2017ಕ್ಕೆ ಹೋಲಿಸಿದರೆ ಶೇ.7ರಷ್ಟು ಹೆಚ್ಚಾಗಿದೆ. ಇದು ದೇಶದಲ್ಲಿ ಅತಿ ಹೆಚ್ಚು ಸಾಮೂಹಿಕ ಅತ್ಯಾಚಾರಗಳು ಮತ್ತು ಎರಡನೇ ಅತಿ ಹೆಚ್ಚು ಅತ್ಯಾಚಾರಗಳನ್ನು (4,323 ಪ್ರಕರಣಗಳು) ದಾಖಲಿಸಿದೆ” ಎಂದು ತಿಳಿಸಿತ್ತು.

ವರದಕ್ಷಿಣೆ ಸಾವುಗಳು, ಮಕ್ಕಳ ವಿರುದ್ಧದ ಅಪರಾಧಗಳು, ಹಿರಿಯ ನಾಗರಿಕರ ವಿರುದ್ಧದ ಅಪರಾಧಗಳು ಇವೆಲ್ಲವೂ 2017ರಿಂದ ಹೆಚ್ಚಳವನ್ನು ದಾಖಲಿಸಿವೆ. 2018ರಲ್ಲಿ 131 ವೃದ್ಧರು ಕೊಲೆಯಾಗಿದ್ದರೆ, 2017ರಲ್ಲಿ 129 ಮಂದಿ ಸಾವನ್ನಪ್ಪಿದ್ದಾರೆ. ವರದಿಯಾದ ಕೊಲೆಗಳಲ್ಲಿ ರಾಜ್ಯವು ಅತ್ಯಧಿಕ ಸ್ಥಾನದಲ್ಲಿದೆ, 2017ರಲ್ಲಿ 4,324 ಪ್ರಕರಣಗಳು ವರದಿಯಾಗಿರುವುದಾಗಿ ಎನ್‌ಸಿಆರ್‌ಬಿಯ ವಿಭಜಿತ ದತ್ತಾಂಶಗಳೇ ಲಭ್ಯವಾಗಿದ್ದವು.

“ಎಸ್‌ಪಿ-ಕಾಂಗ್ರೆಸ್ ಆಡಳಿತದಲ್ಲಿ ಸಾಮಾನ್ಯ ಜನರ ಅಸುರಕ್ಷತೆ ಹೆಚ್ಚಾಗಿತ್ತು. ಕಾಂಗ್ರೆಸ್-ಸಮಾಜವಾದಿ ಪಕ್ಷದವರು ಯಾವಾಗಲೂ ಭಯೋತ್ಪಾದಕರನ್ನು ಮುಕ್ತಗೊಳಿಸುತ್ತವೆ ಮತ್ತು ಅವರಿಗೆ ರಾಜಕೀಯದ ಬಣ್ಣ ನೀಡುತ್ತಾರೆ. ಕಾಂಗ್ರೆಸ್-ಎಸ್‌ಪಿಯ ನೀತಿಗಳಿಂದಾಗಿ ಯುಪಿ ಮತ್ತು ಭಾರತದಲ್ಲಿ ಭಯೋತ್ಪಾದನೆ ಪ್ರವರ್ಧಮಾನಕ್ಕೆ ಬಂದಿತು. ಗಡಿಗಳಲ್ಲಿ ಗುಂಡಿನ ದಾಳಿಗಳು ಆಗಾಗ್ಗೆ ನಡೆಯುತ್ತಿದ್ದವು. ಹಲವಾರು ರಾಜ್ಯಗಳಲ್ಲಿ ನಕ್ಸಲೀಯ ದಾಳಿಗಳು ಬಾಧಿಸುತ್ತಿದ್ದವು. ಕಾಂಗ್ರೆಸ್ ಸರ್ಕಾರ ಏನು ಮಾಡಿದೆ? ಅವರು ಶಾಂತಿಗಾಗಿ ಪಾಕಿಸ್ತಾನಕ್ಕೆ ಮನವಿ ಮಾಡಿದರು. ಇದು ಭಾರತದ ಪ್ರತಿಷ್ಠೆಗೆ ಹಾನಿ ಮಾಡಿತು. ಎಸ್‌ಪಿ-ಕಾಂಗ್ರೆಸ್ ಶಮನಗೊಳಿಸುವಿಕೆ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಸರಕುಗಳನ್ನು ಮಾರಾಟ ಮಾಡುವ ಅಂಗಡಿಯಾಗಿದೆ” ಎಂದು ಮೋದೀಜಿ ಸುಳ್ಳುಗಳನ್ನೇ ಹೇಳುತ್ತಿದ್ದಾರೆ.(33-34:3)

ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ಭಯೋತ್ಪಾದಕರ ಬೆದರಿಕೆಗಳು ವ್ಯಾಪಕವಾಗಿದ್ದವು, ಗಡಿಗಳಲ್ಲಿ ಗುಂಡಿನ ದಾಳಿಗಳು ಆಗಾಗ್ಗೆ ನಡೆಯುತ್ತಿದ್ದವು ಎಂದು ಭಾಷಣದಲ್ಲಿ ತಿಳಿಸಿದ್ದಾರೆ. ಆದರೆ ವಾಸ್ತವ ಏನೆಂದರೆ, ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೇಳುವ ರೈತರ ಮೇಲೆಯೇ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ. ದ್ವೇಷ ಭಾಷಣಗಳ ಮೂಲಕ ದೇಶದ ಯುವಜನರ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಸಣ್ಣ ಪುಟ್ಟ ಹಳ್ಳಿಗಳಲ್ಲಿಯೂ ಕೂಡ ಆಗಾಗ್ಗೆ ಭಯಾನಕ ಹತ್ಯೆಗಳು ನಡೆಯುತ್ತಿವೆ. ಇಷ್ಟೆಲ್ಲಾ ಆಗುತ್ತಿದ್ದರೂ ಕೂಡಾ ನಮ್ಮ ಪ್ರಧಾನಿ ದೇಶದ ಶಾಂತಿಗಾಗಿ ಯಾವ ಕ್ರಮ ಕೈಗೊಂಡಿದ್ದಾರೆ?. ದೇಶದ ಪ್ರತಿಷ್ಠೆ ಉಳಿಯುವಂತಹ ಯಾವ ಕೆಲಸಗಳನ್ನು ಮಾಡಿದ್ದಾರೆ? ಯಾವುದೂ ಇಲ್ಲ.

ಬದಲಾಗಿ ಕೇಂದ್ರ ಸರ್ಕಾರವನ್ನು ಪ್ರಧಾನಿಯನ್ನು ಯಾವುದೇ ಪ್ರಜ್ಞಾವಂತರು ಪ್ರಶ್ನಿಸದಂತೆ ಯುಎಪಿಎ ಕಾಯಿದೆ ಜಾರಿಗೆ ತಂದರು. ಇದರಿಂದ ಯಾರಾದರೂ ಅನ್ಯಾಯದ ವಿರುದ್ಧ ದನಿ ಎತ್ತಿದರೆ ಅವರಿಗೆ ದೇಶದ್ರೋಹ ಪಟ್ಟ ಕಟ್ಟಿ ನೇರ ಜೈಲಿಗೆ ಸಾಗಿಸಲಾಗುತ್ತೆ. ಮುಖ್ಯಮಂತ್ರಿಗಳನ್ನೇ ಜೈಲಿಗೆ ಕಳುಹಿಸಲಾಗುತ್ತೇ, ಇದು ಮೋದಿ ಕಂಡಿರುವ ದೇಶದ ಪ್ರತಿಷ್ಠೆ.

ಮಹಾರಾಷ್ಟ್ರದ ಕಲ್ಯಾಣ್‌ ನಗರದಲ್ಲಿ ನಡೆದ ರ್ಯಾಲಿಯಲ್ಲಿ, ಪ್ರಧಾನಿ ತಮ್ಮ ಆಡಳಿತದ ಬಗ್ಗೆ ಮಾತನಾಡಿದರು. “ಮೊದಲ ಬಾರಿಗೆ 25 ಕೋಟಿ ಮಂದಿ ಬಡವರು ಬಡತನದಿಂದ ಹೊರಬರುತ್ತಿದ್ದಾರೆ. ಮೊದಲ ಬಾರಿಗೆ, ಪ್ರತಿಯೊಬ್ಬ ಬಡ ವ್ಯಕ್ತಿಗೆ ಶಾಶ್ವತ ಮನೆ ಒದಗಿಸುವ ಬಗ್ಗೆ ಮಾತನಾಡಲಾಗುತ್ತಿದೆ. ಮೊದಲ ಬಾರಿಗೆ, ಪ್ರತಿ ಮನೆಗೂ ನಲ್ಲಿ ನೀರು ಲಭ್ಯವಾಗಲಿದೆ. ಮೊದಲ ಬಾರಿಗೆ, ಬಡವರು ಉಚಿತ ವೈದ್ಯಕೀಯ ಚಿಕಿತ್ಸೆಗೆ ಗ್ಯಾರಂಟಿ ಕಾರ್ಡ್ ಹೊಂದಿದ್ದಾರೆ. ಮತ್ತು ಬಡವರ ಮಗನ ನೇತೃತ್ವದ ಈ ಸರ್ಕಾರ ಬಡವರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಇಂದು, ಮೊದಲ ಬಾರಿಗೆ, ನಾವು ಭಾರತದಲ್ಲಿ ಹೊಸ ವಿಶ್ವಾಸವನ್ನು ನೋಡುತ್ತಿದ್ದೇವೆ” ಎಂದು ಪ್ರಧಾನಿ ಅಪ್ಪಟ ಸುಳ್ಳುಗಳನ್ನು ಹೇಳಿದ್ದಾರೆ.(16:36-19:35)

ಬಡತನ ಅಂದಾಜುಗಳ ಪಟ್ಟಿಯಲ್ಲಿ ಸುಮಾರು 456 ದಶಲಕ್ಷ ಜನಸಂಖ್ಯೆ ಹೊಂದಿರುವ ಭಾರತೀಯರು (ಒಟ್ಟು ಭಾರತದ ಜನಸಂಖ್ಯೆಯಲ್ಲಿ 42%)ಈಗ ದಿನಕ್ಕೆ $1.25(PPP) ಆದಾಯದೊಂದಿಗೆ ಜಾಗತಿಕ ಬಡತನ ರೇಖೆಯಡಿ ಜೀವಿಸುತ್ತಿದ್ದಾರೆಂದು ವಿಶ್ವಬ್ಯಾಂಕ್ ಅಂದಾಜು ಮಾಡಿತ್ತು. ಸೆಪ್ಟೆಂಬರ್ 2022ರ ಹೊತ್ತಿಗೆ, ವಿಶ್ವ ಬ್ಯಾಂಕಿನ ಅಂತಾರಾಷ್ಟ್ರೀಯ ಬಡತನ ರೇಖೆ (ಐಪಿಎಲ್) ಪ್ರತಿ ವ್ಯಕ್ತಿಗೆ ದಿನಕ್ಕೆ $2.5(PPP) ಆಗಿದೆ ಎಂದು ಹೇಳಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ನೋಡುವುದಾದರೆ, ದಿನಕ್ಕೆ ₹179.51 ಆದಾಯ ಇದೆ ಎಂದಿದೆ. ಆದರೆ, ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಪ್ರತಿ ವಸ್ತುವಿಗೂ ಕೇಂದ್ರ ಜಿಎಸ್‌ಟಿ ವಿಧಿಸುತ್ತಿದೆ. ಹೀಗಿರುವಾಗ ನಮ್ಮ ಜನ ಎಲ್ಲಿ ಬಡತನದಿಂದ ಹೊರಬಂದಿದ್ದಾರೆ?.

ಇದನ್ನೂ ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ಪೂರ್ವ ಲಡಾಖ್‌ನ ಸಂಘರ್ಷಕ್ಕೆ ಸ್ಪಂದಿಸದ ಮೋದಿ; ಕೊಡರಮಾವನ್ನು ನಕ್ಸಲಿಸಂ ಮುಕ್ತ ಮಾಡುತ್ತಾರೆಯೇ?

ಅಂಬಾನಿ, ಅದಾನಿಯಂತಹ ಉದ್ಯಮಿಗಳನ್ನು ನಂಬರ್‌ ವನ್‌ ಶ್ರೀಮಂತರನ್ನಾಗಿ ಮಾಡಿರುವ ಮೋದಿ ಅವರನ್ನು ಬಡವರು ಎಂದುಕೊಂಡು ಅವರನ್ನು ಮೇಲೆತ್ತಿದ್ದೇನೆಂದು ಮಾತನಾಡುತ್ತಿರಬಹುದು ಅಲ್ಲವೇ?.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X