ಪ್ರಧಾನಿ ಮೋದಿ ಅವರು ಮೇ 29ರಂದು ಬಿಹಾರಕ್ಕೆ ಭೇಟಿ ನೀಡಿದ್ದರು. ಪಟ್ನಾದಲ್ಲಿ ರೋಡ್ ಶೋ ನಡೆಸಿದ ಅವರು 45,000 ಕೋಟಿ ರೂ. ಮೌಲ್ಯದ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅವರು ಬಿಹಾರಕ್ಕೆ ಭೇಟಿ ಕೊಟ್ಟ ಹಿನ್ನೆಲೆ, ಸಾಮಾಜಿಕ ಜಾಲತಾಣದಲ್ಲಿ ಬಿಹಾರಿಗರು ‘#ModiFailsBihar’ನೊಂದಿಗೆ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಬಿಹಾರಕ್ಕೆ ಏನನ್ನೂ ಕೊಟ್ಟಿಲ್ಲ, ಬಿಹಾರ ಹಿಂದುಳಿಯಲು ಮೋದಿ ಆಡಳಿತ ಕಾರಣ. ಬಿಹಾರ ಜನರ ಒತ್ತಾಶೆಗಳನ್ನು ಪೂರೈಸುವಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ 11 ವರ್ಷಗಳು ಕಳೆದಿವೆ. ಈ 11 ವರ್ಷಗಳಲ್ಲಿ ಬಿಹಾರಕ್ಕೆ ಬರೀ ಖಾಲಿ ಭರವಸೆಗಳು ಮಾತ್ರವೇ ಸಿಕ್ಕಿವೆಯೇ ಹೊರತು, ಬೇರೇನು ಸಿಲ್ಲಕ್ಕಿ ಎಂದು ಬಿಹಾರದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಿಹಾರದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಬಿಹಾರಿಗರಿಗೆ ಉದ್ಯೋಗ ದೊರೆತಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಉತ್ತಮ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು ಇಲ್ಲ. ಜವಳಿ, ಐಟಿ ಪಾರ್ಕ್ ಕೂಡ ಇಲ್ಲ” ಎಂದು ಕಿಡಿಕಾರಿದ್ದಾರೆ.
आज X पर #ModiFailsBihar क्यों ट्रेंड हो रहा है ?
— Ashutosh Nandan (@BiharKaVoice) May 29, 2025
26 मई – गुजरात: मोदी जी ने ₹21,000 करोड़ की इलेक्ट्रिक लोकोमोटिव फैक्ट्री का उद्घाटन किया।
29 मई – बिहार: यहां कौन-सी फैक्ट्री का उद्घाटन करेंगे मोदी जी ?
जब मोदी जी गुजरात जाते हैं, तो वहां फैक्ट्री खुलवाकर आते हैं।
अब आज… pic.twitter.com/SysR7eo9Jo
“ಬಿಹಾರ ಮತ್ತು ಇತರ ಹಿಂದುಳಿದ ರಾಜ್ಯಗಳನ್ನು ಮೋದಿ ಕಡೆಗಣಿಸಿದ್ದಾರೆ. ಎಲ್ಲವನ್ನೂ ತಮ್ಮ ತವರು ರಾಜ್ಯ ಗುಜರಾತ್‌ಗೆ ಹೆಚ್ಚಾಗಿ ಕೊಡುತ್ತಿದ್ದಾರೆ. ಡಬಲ್ ಎಂಜಿನ್ ಸರ್ಕಾರ ರಾಜ್ಯವನ್ನು ಅಭಿವೃದ್ಧಿ ಮಾಡುತ್ತದೆಂದು ಭರವಸೆ ನೀಡಲಾಗಿತ್ತು. ಆದರೆ, ಯಾವ ಡಬಲ್ ಎಂಜಿನ್ ಸರ್ಕಾರವೂ ಏನೂ ಮಾಡಿಲ್ಲ. ರಾಜ್ಯ ಇನ್ನೂ ಹಿಂದುಳಿದಿದೆ” ಎಂದು ಆಕ್ರೋಶ ವ್ಯಕ್ತವಾಗಿದೆ.