- ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್; ಸೂಕ್ತ ಕ್ರಮಕ್ಕೆ ಆಗ್ರಹ
- ಅವಹೇಳನ ಮಾಡುತ್ತಿದ್ದಾಗ ನಗುತ್ತಿದ್ದ ಬಿಜೆಪಿಯ ರವಿಶಂಕರ್ ಪ್ರಸಾದ್ ಮತ್ತು ಹರ್ಷವರ್ಧನ್
ನೂತನ ಸಂಸತ್ ಭವನದಲ್ಲಿ ಗುರುವಾರ ರಾತ್ರಿ ಮುಕ್ತಾಯಗೊಂಡ ವಿಶೇಷ ಅಧಿವೇಶನದಲ್ಲಿ ಬಿಎಸ್‌ಪಿಯ ಮುಸ್ಲಿಂ ಸಂಸದ ದಾನಿಶ್ ಅಲಿಯನ್ನು ಬಿಜೆಪಿಯ ಸಂಸದ ರಮೇಶ್ ಬಿಧುರಿ ‘ಭಯೋತ್ಪಾದಕ’ ಎಂದು ಕರೆದು, ಹೀಯಾಳಿಸಿರುವ ಆಘಾತಕಾರಿ ಬೆಳವಣಿಗೆ ನಡೆದಿದೆ.
ಬಿಜೆಪಿಯ ದೆಹಲಿ ಸಂಸದನಾಗಿರುವ ರಮೇಶ್ ಬಿಧುರಿ ಅವರು ಲೋಕಸಭೆಯಲ್ಲಿ ತಮ್ಮ ಮಾತಿನ ವೇಳೆ ಸಂಸತ್ತಿನ ಸಹೋದ್ಯೋಗಿ ಬಹುಜನ ಸಮಾಜ ಪಕ್ಷದ ದಾನಿಶ್ ಅಲಿ ಅವರನ್ನು “ಯೇ ಉಗ್ರವಾದಿ, ಯೇ ಆತಂಕ್ವಾದಿ, ಮುಲ್ಲಾ ಆತಂಕವಾದಿ, ಭರ್ವಾ (ವೇಶ್ಯಾವಾಟಿಕೆ ದಂಧೆ ನಡೆಸುವವ) ಮತ್ತು ಕತ್ವಾ (ಮುಂಜಿ ಮಾಡಿಸಿದವ)” ಎಂದು ಹಿಂದಿಯಲ್ಲಿ ಉಲ್ಲೇಖಿಸಿ, ಅವಮಾನಗೈದಿದ್ದಾರೆ. ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗಿರುವ ವಿಡಿಯೋ, ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ವೈರಲಾಗಿದೆ.
A BJP MP @rameshbidhuri can be heard calling MP Danish Ali a "Bharwa (pimp), "Katwa" (circumcised), "Mullah" "Atankwadi" (Terrorist) & "Ugrawadi" (militant) ON RECORD in Lok Sabha while RaviShankar Prasad & Harsh Vardhan sitting next to him are laughing.pic.twitter.com/yMfWgtcUhU
— Mohammed Zubair (@zoo_bear) September 22, 2023
ಬಿಜೆಪಿ ಸಂಸದ ರಮೇಶ್ ಬಿಧುರಿ ಮುಸ್ಲಿಂ ವಿರೋಧಿ ನಿಂದನೆಗಳನ್ನು ಬಳಸಿರುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಂಸದ ಸ್ಥಾನದಲ್ಲಿರುವ ಅರ್ಹತೆ ಈ ವ್ಯಕ್ತಿಗಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಹೇಳಿಕೆಯ ವೇಳೆ ಅಧ್ಯಕ್ಷ ಪೀಠದಲ್ಲಿ ಕಾಂಗ್ರೆಸ್ ಮುಖಂಡ ಕೆ. ಸುರೇಶ್ ಸಂಸದರಿಗೆ ಕುಳಿತುಕೊಳ್ಳುವಂತೆ ಹೇಳುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಚಂದ್ರಯಾನ-3 ಚರ್ಚೆಯ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸಂಸದ ರಮೇಶ್ ಬಿಧುರಿ, ಬಿಎಸ್‌ಪಿ ಸಂಸದ ದಾನಿಶ್ ಅಲಿ
ಅಲ್ಲದೇ, ಸಂಸದ ದಾನಿಶ್ ಅಲಿಯನ್ನು ಸಂಸದ ರಮೇಶ್ ಬಿಧುರಿ ನಿಂದಿಸುವಾಗ ಬಿಜೆಪಿಯ ಸಂಸದರಾದ ರವಿಶಂಕರ್ ಪ್ರಸಾದ್ ಮತ್ತು ಹರ್ಷವರ್ಧನ್ ನಗುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.
ಬಿಎಸ್‌ಪಿಯ ದಾನಿಶ್ ಅಲಿ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ, ರಮೇಶ್ ಬಿಧುರಿ ದಕ್ಷಿಣ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ.
BJP MP @rameshbidhuri calling MP Danish Ali a “Bharwa” (pimp), “Katwa” (circumcised), “Mullah Atankwadi” & “Mullah Ugrawadi” ON RECORD in Lok Sabha last night.
— Mahua Moitra (@MahuaMoitra) September 22, 2023
Keeper of Maryada @ombirlakota Vishwaguru @narendramodi & BJP Prez @JPNadda along with GodiMedia- any action please? pic.twitter.com/sMHJqaGdUc
ವಿಡಿಯೋ ವೈರಲಾದ ಬಳಿಕ ಮಾಹಿತಿ ನೀಡಿರುವ ಅಧ್ಯಕ್ಷ ಪೀಠದಲ್ಲಿದ್ದ ಕೆ. ಸುರೇಶ್, ಬಿಧುರಿ ಅವರ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದು ಹಾಕಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬೆಳವಣಿಗೆಯನ್ನು ಟ್ವೀಟ್ ಮೂಲಕ ಖಂಡಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹಾಗೂ ಕಾಂಗ್ರೆಸ್, ಮುಸ್ಲಿಂ ಸಂಸದನನ್ನು ನಿಂದನೆಗೈದಿರುವ ಬಿಜೆಪಿ ಸಂಸದನ ವಿರುದ್ಧ ಪ್ರಧಾನಿ ಮೋದಿಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸಂಸತ್ತಿನಲ್ಲಿ ಬಿಧುರಿ ಅವರ ದ್ವೇಷದ ಭಾಷಣದ ಹೊರತಾಗಿಯೂ ಬಿಜೆಪಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
That's BJP MPs @drharshvardhan & @rsprasad laughing while their colleague @rameshbidhuri was abusing while referring to aa Muslim MP Danish Ali as "Terrorist" "Katwa" "Bhadwa" "Mulla" & "Militant". pic.twitter.com/zyldP6ZBTa
— Mohammed Zubair (@zoo_bear) September 22, 2023
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮತ್ತು ಲೋಕಸಭೆಯ ಉಪ ನಾಯಕ ರಾಜನಾಥ್ ಸಿಂಗ್ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, “ಸದಸ್ಯರು ಮಾಡಿದ ಟೀಕೆಗಳಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ.