ಅಧಿವೇಶನದಲ್ಲೇ ಸಂಸದ ದಾನಿಶ್ ಅಲಿಯನ್ನು ‘ಭಯೋತ್ಪಾದಕ’ ಎಂದ ಬಿಜೆಪಿ ಸಂಸದ ರಮೇಶ್ ಬಿಧುರಿ!

Date:

  • ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್; ಸೂಕ್ತ ಕ್ರಮಕ್ಕೆ ಆಗ್ರಹ
  • ಅವಹೇಳನ ಮಾಡುತ್ತಿದ್ದಾಗ ನಗುತ್ತಿದ್ದ ಬಿಜೆಪಿಯ ರವಿಶಂಕರ್ ಪ್ರಸಾದ್ ಮತ್ತು ಹರ್ಷವರ್ಧನ್

ನೂತನ ಸಂಸತ್ ಭವನದಲ್ಲಿ ಗುರುವಾರ ರಾತ್ರಿ ಮುಕ್ತಾಯಗೊಂಡ ವಿಶೇಷ ಅಧಿವೇಶನದಲ್ಲಿ ಬಿಎಸ್‌ಪಿಯ ಮುಸ್ಲಿಂ ಸಂಸದ ದಾನಿಶ್ ಅಲಿಯನ್ನು ಬಿಜೆಪಿಯ ಸಂಸದ ರಮೇಶ್ ಬಿಧುರಿ ‘ಭಯೋತ್ಪಾದಕ’ ಎಂದು ಕರೆದು, ಹೀಯಾಳಿಸಿರುವ ಆಘಾತಕಾರಿ ಬೆಳವಣಿಗೆ ನಡೆದಿದೆ.

ಬಿಜೆಪಿಯ ದೆಹಲಿ ಸಂಸದನಾಗಿರುವ ರಮೇಶ್ ಬಿಧುರಿ ಅವರು ಲೋಕಸಭೆಯಲ್ಲಿ ತಮ್ಮ ಮಾತಿನ ವೇಳೆ ಸಂಸತ್ತಿನ ಸಹೋದ್ಯೋಗಿ ಬಹುಜನ ಸಮಾಜ ಪಕ್ಷದ ದಾನಿಶ್ ಅಲಿ ಅವರನ್ನು “ಯೇ ಉಗ್ರವಾದಿ, ಯೇ ಆತಂಕ್ವಾದಿ, ಮುಲ್ಲಾ ಆತಂಕವಾದಿ, ಭರ್ವಾ (ವೇಶ್ಯಾವಾಟಿಕೆ ದಂಧೆ ನಡೆಸುವವ) ಮತ್ತು ಕತ್ವಾ (ಮುಂಜಿ ಮಾಡಿಸಿದವ)” ಎಂದು ಹಿಂದಿಯಲ್ಲಿ ಉಲ್ಲೇಖಿಸಿ, ಅವಮಾನಗೈದಿದ್ದಾರೆ. ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗಿರುವ ವಿಡಿಯೋ, ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ವೈರಲಾಗಿದೆ.

ಬಿಜೆಪಿ ಸಂಸದ ರಮೇಶ್ ಬಿಧುರಿ ಮುಸ್ಲಿಂ ವಿರೋಧಿ ನಿಂದನೆಗಳನ್ನು ಬಳಸಿರುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಂಸದ ಸ್ಥಾನದಲ್ಲಿರುವ ಅರ್ಹತೆ ಈ ವ್ಯಕ್ತಿಗಿಲ್ಲ ಎಂದು ಕಿಡಿಕಾರಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಹೇಳಿಕೆಯ ವೇಳೆ ಅಧ್ಯಕ್ಷ ಪೀಠದಲ್ಲಿ ಕಾಂಗ್ರೆಸ್ ಮುಖಂಡ ಕೆ. ಸುರೇಶ್ ಸಂಸದರಿಗೆ ಕುಳಿತುಕೊಳ್ಳುವಂತೆ ಹೇಳುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಚಂದ್ರಯಾನ-3 ಚರ್ಚೆಯ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸಂಸದ ರಮೇಶ್ ಬಿಧುರಿ, ಬಿಎಸ್‌ಪಿ ಸಂಸದ ದಾನಿಶ್ ಅಲಿ

ಅಲ್ಲದೇ, ಸಂಸದ ದಾನಿಶ್ ಅಲಿಯನ್ನು ಸಂಸದ ರಮೇಶ್ ಬಿಧುರಿ ನಿಂದಿಸುವಾಗ ಬಿಜೆಪಿಯ ಸಂಸದರಾದ ರವಿಶಂಕರ್ ಪ್ರಸಾದ್ ಮತ್ತು ಹರ್ಷವರ್ಧನ್ ನಗುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.

ಬಿಎಸ್‌ಪಿಯ ದಾನಿಶ್ ಅಲಿ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ, ರಮೇಶ್ ಬಿಧುರಿ ದಕ್ಷಿಣ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ.

ವಿಡಿಯೋ ವೈರಲಾದ ಬಳಿಕ ಮಾಹಿತಿ ನೀಡಿರುವ ಅಧ್ಯಕ್ಷ ಪೀಠದಲ್ಲಿದ್ದ ಕೆ. ಸುರೇಶ್, ಬಿಧುರಿ ಅವರ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದು ಹಾಕಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಯನ್ನು ಟ್ವೀಟ್ ಮೂಲಕ ಖಂಡಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹಾಗೂ ಕಾಂಗ್ರೆಸ್, ಮುಸ್ಲಿಂ ಸಂಸದನನ್ನು ನಿಂದನೆಗೈದಿರುವ ಬಿಜೆಪಿ ಸಂಸದನ ವಿರುದ್ಧ ಪ್ರಧಾನಿ ಮೋದಿಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸಂಸತ್ತಿನಲ್ಲಿ ಬಿಧುರಿ ಅವರ ದ್ವೇಷದ ಭಾಷಣದ ಹೊರತಾಗಿಯೂ ಬಿಜೆಪಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಮತ್ತು ಲೋಕಸಭೆಯ ಉಪ ನಾಯಕ ರಾಜನಾಥ್ ಸಿಂಗ್ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, “ಸದಸ್ಯರು ಮಾಡಿದ ಟೀಕೆಗಳಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂತ್ರಸ್ತೆ ಅಪಹರಣ ಪ್ರಕರಣ | ಮೇ 31ಕ್ಕೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ತೀರ್ಪು

ಕೆ ಆರ್‌ ನಗರ ಮಹಿಳೆ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ...

ದೆಹಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ; ಭಾರತದ ಸಾರ್ವಕಾಲಿಕ ದಾಖಲೆ

ದೆಹಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ದೇಶದಲ್ಲಿ ದಾಖಲಾದ...

‘ಯಾವುದು ಹಾಳಾಗಿಲ್ಲವೋ ಅದನ್ನು ಎಂದಿಗೂ ಸರಿಪಡಿಸಲು ಪ್ರಯತ್ನಿಸಬೇಡಿ’; ವಿದ್ಯಾರ್ಥಿನಿ ಪ್ರಾಚಿ ನಿಗಮ್

ಉತ್ತರಪ್ರದೇಶದ 10ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ 55 ಲಕ್ಷ ವಿದ್ಯಾರ್ಥಿಗಳಲ್ಲಿ ಪ್ರಾಚಿ...

ಕಾಂಗ್ರೆಸ್‌ನೊಂದಿಗಿನ ವಿವಾಹ ಶಾಶ್ವತವಲ್ಲ: ಅರವಿಂದ್ ಕೇಜ್ರಿವಾಲ್

ಕಾಂಗ್ರೆಸ್‌ನೊಂದಿಗಿನ ವಿವಾಹ ಶಾಶ್ವತವಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ತಿಳಿಸಿದ್ದು,ಲೋಕಸಭೆ...