ಇವಿಎಂಗಳಿಂದ ಕೇಸರಿ ಪಕ್ಷವು ಚುನಾವಣೆಯಲ್ಲಿ ಗೆಲ್ಲುತ್ತದೆ. ಇವಿಎಂ ಇಟ್ಟುಕೊಂಡು ಬಿಜೆಪಿ ಹೇಗೆ ಚುನಾವಣೆ ಗೆಲ್ಲಬಹುದು ಎಂಬುದನ್ನು ತೋರಿಸಲು ಪಕ್ಷದ ನಾಯಕರು ಚುನಾವಣಾ ಆಯೋಗಕ್ಕೆ ಹೋಗಿದ್ದರು. ಆದರೆ, ಆಯೋಗವು ಇವಿಎಂ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ನಿರಾಕರಿಸಿತು. ಯಾಕೆ? ಮತದಾರರು ತಮ್ಮ ಮತವನ್ನು ಯಾರಿಗೆ ಹಾಕಿದ್ದಾರೀಓಈ ಅವರಿಗೆ ಹೋಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾನುವಾರ, ಮುಂಬೈನಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. “ಜನರು ನರೇಂದ್ರ ಮೋದಿಯವರ ಭರವಸೆಗಳಿಗಿಂತ ಕಾಂಗ್ರೆಸ್ನ ಐದು ಭರವಸೆಗಳನ್ನು ನಂಬುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕುತ್ತಾರೆ” ಎಂದು ಹೇಳಿದರು.
“ರೈತರಿಗಾಗಿ ಕೃಷಿ ಬೆಳೆಗಳಿಗೆ ಎಂಎಸ್ಪಿಯನ್ನು ಕಾನೂನುಬದ್ಧಗೊಳಿಸುವ ಮತ್ತು ಕೃಷಿ ವಸ್ತುಗಳ ಮೇಲಿನ ಜಿಎಸ್ಟಿ ತೆಗೆದುಹಾಕಲು ಕೂಲಂಕಷವಾಗಿ ಪರಿಶೀಲಿಸುತ್ತೇವೆ” ಎಂಧು ಅವರು ತಿಳಿಸಿದರು.
“ವಿರೋಧ ಪಕ್ಷದ ನಾಯಕರನ್ನು ಬೇಟೆಯಾಡಲು ಬಿಜೆಪಿ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರು ತಾವು ಒತ್ತಾಯದ ಮೇರೆಗೆ ಬಿಜೆಪಿ ಸೇರಿದ್ದಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ಸೇರದಿದ್ದರೆ ಜೈಲಿಗೆ ಹಾಕುವ ಬೆದರಿಕೆ ಬಂದಿದ್ದಾಗಿ ಅವರು ತಿಳಿಸಿದ್ದಾರೆ” ಎಂದು ರಾಹುಲ್ ಹೇಳಿದರು.
ಬೃಹತ್ ಸಮಾವೇಶದಲ್ಲಿ ‘ಇಂಡಿಯಾ’ ಒಕ್ಕೂಟದ ಎಲ್ಲ ಮಿತ್ರಪಕ್ಷಗಳ ನಾಯಕರು ಭಾಗಿಯಾಗಿದ್ದರು. ಆದರೆ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಎಡಪಕ್ಷಗಳ ನಾಯಕರು ಭಾಗಿಯಾಗಿರಲಿಲ್ಲ.