ಪ್ರಧಾನಿ ಕಾರ್ಯಕ್ರಮದಲ್ಲಿ ನನ್ನ ಭಾಷಣ ಕೈಬಿಡಲಾಗಿದೆ: ರಾಜಸ್ಥಾನ ಸಿಎಂ ಆರೋಪ

Date:

Advertisements

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜಸ್ಥಾನದ ಸಿಕಾರ್‌ ಜಿಲ್ಲೆಗೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು, ಮುಖ್ಯಮಂತ್ರಿಯವರ ಭಾಷಣವನ್ನು ಕೈಬಿಟ್ಟಿರುವುದಕ್ಕೆ ಅಶೋಕ್‌ ಗೆಹ್ಲೋಟ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಯವರ ಭಾಷಣವನ್ನು ಪ್ರಧಾನಿ ಕಾರ್ಯಾಲಯವು ರದ್ದುಗೊಳಿಸಿದ್ದರಿಂದ ನಾನು ಅವರನ್ನು ಟ್ವಿಟರ್‌ನಲ್ಲಿ ಮಾತ್ರ ಸ್ವಾಗತಿಸಬಹುದು ಎಂದು ಅಶೋಕ್‌ ಗೆಹ್ಲೋಟ್‌ ಪೋಸ್ಟ್ ಮಾಡಿದ್ದಾರೆ.

“ಇಂದು ನೀವು ರಾಜಸ್ಥಾನಕ್ಕೆ ಭೇಟಿ ನೀಡುತ್ತಿದ್ದೀರಿ. ನಿಮ್ಮ ಪ್ರಧಾನಮಂತ್ರಿ ಕಚೇರಿಯು ಕಾರ್ಯಕ್ರಮದಲ್ಲಿನ ನನ್ನ ಪೂರ್ವ ನಿಗದಿತ 3 ನಿಮಿಷಗಳ ಭಾಷಣವನ್ನು ತೆಗೆದುಹಾಕಿದೆ. ಆದ್ದರಿಂದ ನಾನು ನಿಮ್ಮನ್ನು ಭಾಷಣದ ಮೂಲಕ ಸ್ವಾಗತಿಸಲು ಸಾಧ್ಯವಾಗುವುದಿಲ್ಲ. ಆದ ಕಾರಣ ನಾನು ಈ ಟ್ವೀಟ್ ಮೂಲಕ ರಾಜಸ್ಥಾನಕ್ಕೆ ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ” ಎಂದು ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

Advertisements

“ಟ್ವೀಟ್‌ ಮೂಲಕವೇ ಕಾರ್ಯಕ್ರಮದ ನನ್ನ ಭಾಷಣದಲ್ಲಿ ಹೇಳಬೇಕಾದ ನನ್ನ ಬೇಡಿಕೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. 6 ತಿಂಗಳಲ್ಲಿ 7 ಬಾರಿ ರಾಜಸ್ಥಾನ ಭೇಟಿಯನ್ನು ಪೂರ್ಣಗೊಳಿಸಿದ್ದೀರಿ. ನಿಮ್ಮ ಭೇಟಿಯಲ್ಲಿ ನಮ್ಮ ಬೇಡಿಕೆಗಳನ್ನು ಪೂರ್ಣಗೊಳಿಸುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಮುಖ್ಯಮಂತ್ರಿ ಬರೆದಿದ್ದಾರೆ.

ಪ್ರಧಾನಿ ಕಾರ್ಯಾಲಯವು ಸ್ವಲ್ಪ ಸಮಯದ ನಂತರ ಗೆಹ್ಲೋಟ್ ಅವರ ಆರೋಪವನ್ನು ತಳ್ಳಿಹಾಕಿದೆ. “ಶಿಷ್ಟಾಚಾರದ ಪ್ರಕಾರ ನಿಮ್ಮನ್ನು ಆಹ್ವಾನಿಸಲಾಗಿದೆ ಮತ್ತು ಭಾಷಣಕ್ಕೆ ಸಮಯವನ್ನೂ ಕೂಡ ನೀಡಲಾಗಿತ್ತು. ಆದರೆ ಅದಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ನಿಮ್ಮ ಕಚೇರಿಯೇ ಹೇಳಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಹಳೆಯ ಭೇಟಿಗಳ ಸಂದರ್ಭದಲ್ಲಿ ನಿಮ್ಮನ್ನು ಪ್ರತಿ ಬಾರಿ ಆಹ್ವಾನಿಸಲಾಗುತ್ತಿತ್ತು, ನೀವು ಪ್ರತಿ ಬಾರಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಈ ಕಾರ್ಯಕ್ರಮದಲ್ಲೂ ಭಾಗವಹಿಸಲು ಅಶೋಕ್‌ ಗೆಹ್ಲೋಟ್‌ ಅವರಿಗೆ ಹೃತ್ಪೂರ್ವಕ ಸ್ವಾಗತವಿದೆ” ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಅಮೆರಿಕದಲ್ಲಿ ಊಟಕ್ಕಾಗಿ ಪರದಾಡುತ್ತಿರುವ ಭಾರತೀಯ ಮಹಿಳೆ; ಕರೆತರುವಂತೆ ತಾಯಿ ಮನವಿ

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನಕ್ಕೆ ಇದು ಪ್ರಧಾನಿ ಮೋದಿಯವರ ಏಳನೇ ಭೇಟಿಯಾಗಿದ್ದು, ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ.

ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಅಮಾನುಷ ಮಣಿಪುರದ ವಿಡಿಯೋದ ಬಗ್ಗೆ ಪ್ರಧಾನಿ ಮಾತನಾಡುವಾಗ ರಾಜಸ್ಥಾನ ಉಲ್ಲೇಖಿಸಿದ್ದಕ್ಕಾಗಿ ಅಶೋಕ್‌ ಗೆಹ್ಲೋಟ್‌ ಪ್ರಧಾನಿ ಮೋದಿಯನ್ನು ಟೀಕಿಸಿದ್ದರು.

ಪ್ರಧಾನಿಯವರು ಈ ವರ್ಷ ಹಲವಾರು ಬಾರಿ ರಾಜಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಿಕಾರ್‌ ಜಿಲ್ಲೆಯ ಎಂಟು ವಿಧಾನಸಭಾ ಸ್ಥಾನಗಳಲ್ಲಿ ಒಬ್ಬನೇ ಒಬ್ಬ ಬಿಜೆಪಿ ಶಾಸಕನಿಲ್ಲ. ಕಾಂಗ್ರೆಸ್ ಏಳು ಶಾಸಕರನ್ನು ಹೊಂದಿದೆ ಮತ್ತು ಮತ್ತೊಬ್ಬರು ಪಕ್ಷೇತರ ಸದಸ್ಯರಾಗಿದ್ದಾರೆ. ಬಿಜೆಪಿ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ.

ಸಿಕಾರ್‌ನ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು ಪ್ರಧಾನಿ ಮೋದಿ ಸರ್ಕಾರಿ ಸಮಾರಂಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X