ಭಾರತದಲ್ಲಿ 500 ಉದ್ಯೋಗಿಗಳನ್ನು ಮನೆಗೆ ಕಳಿಸಿದ ಅಮೆಜಾನ್

Date:

  • ಕೇರಳದ ಕೊಚ್ಚಿ, ಉತ್ತರ ಪ್ರದೇಶದ ಲಖನೌ ನಗರಗಳಲ್ಲಿ ಹಲವು ವಿಭಾಗಗಳು ಬಂದ್
  • ಬೆಳವಣಿಗೆಯಲ್ಲಿ ಕುಸಿತವನ್ನು ಅನುಭವಿಸಿರುವ ಭಾರತದ ಅಮೆಜಾನ್‌ ವಿಭಾಗ ಸಂಸ್ಥೆ

ಅಮೆಜಾನ್ ಸಂಸ್ಥೆಯು ಭಾರತದಲ್ಲಿ ವಿವಿಧ ಹಂತಗಳಲ್ಲಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ವರ್ಷದ ಜನವರಿಯಲ್ಲಿ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡುವುದಾಗಿ ಅಮೆಜಾನ್ ಘೋಷಿಸಿತ್ತು. ಅದರ ಪ್ರಕಾರವಾಗಿ ವಜಾಗೊಳಿಸಲಾಗಿದೆ. ಅಮೆಜಾನ್‌ನ ಉದ್ಯೋಗ ಕಡಿತಮಾಡುವ ನಿರ್ಧಾರದಿಂದಾಗಿ ಜಾಗತಿಕವಾಗಿ 9,000 ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಆತಂಕವಿದೆ.

ಕೇರಳದ ಕೊಚ್ಚಿ ಹಾಗೂ ಉತ್ತರ ಪ್ರದೇಶದ ಲಖನೌದಂತಹ ನಗರಗಳಲ್ಲಿ ಅಮೆಜಾನ್‌ನ ಹಲವು ವಿಭಾಗಗಳನ್ನು ಮುಚ್ಚಲಾಗಿದೆ. ಹಲವೆಡೆ ಡಿಜಿಟಲ್‌ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜಗತ್ತಿನಾದ್ಯಂತ ಟೆಕ್ ಷೇರುಗಳು ಕುಸಿತದ ನಂತರ ಸುಮಾರು 18,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಕಂಪನಿಯು ಜನವರಿಯಲ್ಲಿ ಮೊದಲು ಘೋಷಿಸಿತ್ತು.

ಈ ಸುದ್ದಿ ಓದಿದ್ದೀರಾ? 15 ತಿಂಗಳಲ್ಲಿ 3 ಲಕ್ಷ ಮಂದಿ ಉದ್ಯೋಗ ವಂಚಿತ; ಕಂಪನಿಗಳ ತೀವ್ರಗತಿಯ ಉದ್ಯೋಗ ಕಡಿತಕ್ಕೆ ಕಾರಣವೇನು?

ಭಾರತದಲ್ಲಿ ಅಮೆಜಾನ್‌ನ ಇ-ಕಾಮರ್ಸ್ ವ್ಯವಹಾರವು ಬೆಳವಣಿಗೆಯಲ್ಲಿ ಕುಸಿತ ಅನುಭವಿಸಿದೆ ಎಂದು ಮೂಲಗಳು ಹೇಳುತ್ತವೆ, ಇದು ದೇಶದ ಮಾರುಕಟ್ಟೆಯ ಗಂಭೀರ ಪರಿಸ್ಥಿತಿಗಳನ್ನು ಎತ್ತಿ ತೋರಿಸುತ್ತದೆ.

ವಾರ್ಷಿಕ ವಹಿವಾಟು ನಿರ್ವಹಣೆ ಯೋಜನೆ ಪರಾಮರ್ಶೆ ಭಾಗವಾಗಿ ಪ್ರತಿ ವಹಿವಾಟನ್ನು ವಿಮರ್ಶಿಸುತ್ತೇವೆ ಮತ್ತು ಅಗತ್ಯವೆನಿಸಿದ ಸಂದರ್ಭದಲ್ಲಿ ಬದಲಾವಣೆ ಮಾಡುವುದಾಗಿ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ವೆಚ್ಚ ಕಡಿತ ನೆಪದಲ್ಲಿ ಮೆಟಾ ಮತ್ತು ಗೂಗಲ್ ಸೇರಿದಂತೆ ಹಲವು ಜಾಗತಿಕ ಮಟ್ಟದ ದೈತ್ಯ ಸಂಸ್ಥೆಗಳು ಉದ್ಯೋಗ ಕಡಿತಗೊಳಿಸುತ್ತಿವೆ. ಈ ಸಾಲಿನಲ್ಲಿ ವಿಶ್ವದ ನಂಬರ್‌ ಒನ್‌ ಇ-ಕಾಮರ್ಸ್‌ ಕಂಪನಿ ಅಮೆಜಾನ್ ಕೂಡ ಸೇರಿದೆ.

ಭಾರತದಲ್ಲಿ ಅಮೆಜಾನ್‌ನ ಇ-ಕಾಮರ್ಸ್ ವ್ಯವಹಾರವು ಬೆಳವಣಿಗೆಯಲ್ಲಿ ಕುಸಿತ ಅನುಭವಿಸಿದೆ ಎಂದು ಮೂಲಗಳು ಹೇಳುತ್ತವೆ, ಇದು ದೇಶದ ಮಾರುಕಟ್ಟೆ ಸವಾಲಿನ ಕ್ಲಿಷ್ಟ ಪರಿಸ್ಥಿತಿಗಳನ್ನು ಎತ್ತಿ ತೋರಿಸುತ್ತದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತಗಳು ಬಂದರೆ ಏನು ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ...

ಬಿಹಾರ| ಹೊತ್ತಿ ಉರಿದ ಮದುವೆಯ ಮಂಟಪ; ಆರು ಮಂದಿ ಸಜೀವ ದಹನ

ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ...

ನಿಜವಾದ ಬದಲಾವಣೆ ಮಾಡುವವರು ನೀವು: ಮೊದಲ ಬಾರಿ ಮತದಾನ ಮಾಡುವವರಿಗೆ ಖರ್ಗೆ ಸಂದೇಶ

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು ಈ ನಡುವೆ ಮೊದಲ...

ವಿವಿಪ್ಯಾಟ್ ಪರಿಶೀಲನಾ ಗುರುತಿನ ಚೀಟಿ, ಮತಪತ್ರ ಚುನಾವಣಾ ಪ್ರಕ್ರಿಯೆಗೆ ಸುಪ್ರೀಂ ತಿರಸ್ಕಾರ

ಇವಿಎಂನಲ್ಲಿ ಮತ ಚಲಾಯಿಸಿದ ನಂತರ ಮತದಾರರಿಗೆ ವಿವಿಪ್ಯಾಟ್ ಮೂಲಕ ಪರಿಶೀಲನಾ ಚೀಟಿ...