- ವಾಣಿಜ್ಯ ಸಿಲಿಂಡರ್ ಬೆಲೆ ಏಪ್ರಿಲ್ 1ರಂದು ₹91.5 ಇಳಿಕೆ
- ಬೆಂಗಳೂರಿನಲ್ಲಿ ₹2,019ಕ್ಕೆ ಮಾರಾಟವಾಗಲಿರುವ ಸಿಲಿಂಡರ್
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಪ್ರತಿ ಕಿಲೋ ಗ್ರಾಂಗೆ ₹171.5 ಕಡಿತವಾಗಿದೆ. ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಕಡಿಮೆಯಾಗಿಲ್ಲ.
ಭಾರತ ಸರ್ಕಾರದ ಅಧೀನದಲ್ಲಿರುವ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ತೈಲ ಮಾರಾಟ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಸಿವೆ.
ಪರಿಷ್ಕೃತ ದರ ಸೋಮವಾರದಿಂದಲೇ (ಮೇ 1) ಜಾರಿಯಾಗಲಿದ್ದು, 19 ಕೆಜಿ ತೂಗುವ ವಾಣಿಜ್ಯ ಸಿಲಿಂಡರ್ ಬೆಲೆ ₹171.50 ಕಡಿಮೆಯಾಗಲಿದೆ.
ಬೆಂಗಳೂರಿನಲ್ಲಿ ಈವರೆಗೆ ಕೆ.ಜಿಗೆ ₹2,190.50 ಮಾರಾಟವಾಗುತ್ತಿದ್ದ 19 ಕೆಜಿಯ ವಾಣಿಜ್ಯ ಸಿಲಿಂಡರ್ ಇನ್ನು ಮುಂದೆ ₹2,019ಕ್ಕೆ ಮಾರಾಟವಾಗಲಿದೆ. ಗೃಹಬಳಕೆ ಎಲ್‌ಪಿಜಿಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ₹1856.50 ದರಕ್ಕೆ ಮಾರಾಟವಾಗಲಿದೆ. ಮುಂಬೈನಲ್ಲಿ ₹1,808 (ಹಿಂದಿನ ದರ ₹1,980), ಚೆನ್ನೈನಲ್ಲಿ ₹2,021 (₹2,192) ಸಿಲಿಂಡರ್ ಮಾರಾಟವಾಗಲಿದೆ.
ಕಳೆದ ಮಾರ್ಚ್ 1ರಂದು ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ₹350.50 ಹೆಚ್ಚಿಸಿತ್ತು. ಗೃಹಬಳಕೆ ಸಿಲಿಂಡರ್‌ಗಳ ಬೆಲೆ 50 ರೂಪಾಯಿ ಹೆಚ್ಚಾಗಿತ್ತು.
ಈ ಸುದ್ದಿ ಓದಿದ್ದೀರಾ? ಪಂಜಾಬ್ | ಲುಧಿಯಾನ ಕಾರ್ಖಾನೆಯಲ್ಲಿ ಅನಿಲ ಸೋರಿಕೆ ; 11 ಮಂದಿ ಸಾವು
ಸತತ ಎರಡನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆಯಾಗಿದೆ. ಏಪ್ರಿಲ್ 1 ರಂದು 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ₹91.5 ಕಡಿತಗೊಂಡಿತ್ತು.