ಭಾರತದ ಭೂಪ್ರದೇಶದ ಮೇಲೆ ಚೀನಾ ನಡೆಸಿದ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯಿದೆಯಡಿ (ಆರ್ಟಿಐ) ಮಾಹಿತಿ ಕೋರಿ ರಾಜ್ಯಸಭೆಯ ಮಾಜಿ ಸದಸ್ಯ, ಹಿರಿಯ ವಕೀಲ ಸುಬ್ರಹ್ಮಣ್ಯನ್ ಸ್ವಾಮಿ ಅವರು ಸಲ್ಲಿಸಿದ್ದ ಮನವಿಗೆ ಉತ್ತರ ನೀಡುವಂತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ಈ ಸಂಬಂಧ ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ ಹಾಗೂ ಕೇಂದ್ರ ಮಾಹಿತಿ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಮೂರ್ತಿ ಎಸ್. ಪ್ರಸಾದ್ ಅವರು ವಿಚಾರಣೆಗಾಗಿ ಮುಂದಿನ ವರ್ಷ ಜನವರಿ 8ಕ್ಕೆ ಪ್ರಕರಣ ಪಟ್ಟಿ ಮಾಡಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಆರ್ಟಿಐ ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದ ಸುಬ್ರಹ್ಮಣ್ಯನ್ ಸ್ವಾಮಿ ಅವರು ಚೀನಾಕ್ಕೆ ʼಬಿಟ್ಟುಕೊಟ್ಟʼ ಭೂಮಿಯ ವಿಸ್ತೀರ್ಣ ಮತ್ತು ಅದರ ನಕ್ಷೆಯ ವಿವರಗಳನ್ನು ಕೋರಿದ್ದರು.
ತಮ್ಮ ಆರ್ಟಿಐ ಅರ್ಜಿಯನ್ನು ವಿವಿಧ ಇಲಾಖೆಗಳಿಗೆ ವರ್ಗಾಯಿಸಲಾಗಿದ್ದು ಅದಕ್ಕೆ ಉತ್ತರಿಸುವ ಕಾಲಮಿತಿ ಮುಗಿದ ಬಳಿಕವೂ ಅರ್ಜಿ ವರ್ಗಾಯಿಸುವುದು ಮುಂದುವರೆದಿದೆ ತಾವು ಸಲ್ಲಿಸಿದ್ದ ಮೊದಲ ಮನವಿಗೂ ಇದೇ ಪರಿಸ್ಥಿತಿ ಒದಗಿತು. ಮಾರ್ಚ್ 2023 ರಲ್ಲಿ ಮುಖ್ಯ ಮಾಹಿತಿ ಆಯೋಗದ ಮುಂದೆ ಎರಡನೇ ಮನವಿಯನ್ನು ಸಲ್ಲಿಸಿದರೂ ಅಲ್ಲಿಂದ ಪ್ರತಿಕ್ರಿಯೆ ದೊರೆಯಲಿಲ್ಲ ಎಂದು ಅವರು ಅರ್ಜಿಯಲ್ಲಿ ದೂರಿದ್ದರು.
Today in Delhi High Court Justice S . Prasad issued Notice to the Modi Government to answer my RTI question on whether or not Chinese troops have captured undisputed Indian territory in Ladakh since April 2020. Six Govt Ministries have now to file counter affidavits.
— Subramanian Swamy (@Swamy39) October 9, 2023
ತಾವು ಕೇಳಿದ ಮಾಹಿತಿ ರಾಷ್ಟ್ರದ ಸಾರ್ವಭೌಮತೆ ಮತ್ತು ಏಕತೆಗೆ ಸಂಬಂಧಿಸಿದ ನಿರ್ಣಾಯಕ ಮಾಹಿತಿಯಾಗಿದ್ದು ವಿಳಂಬ ಧೋರಣೆಯಿಂದಾಗಿ ಮಾಹಿತಿಯ ಪ್ರಸ್ತುತತೆ ಮತ್ತು ಅಗತ್ಯಕ್ಕೆ ಸೋಲಾಗಿದೆ ಎಂದು ಸ್ವಾಮಿ ಹೇಳಿದ್ದರು.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಸುಬ್ರಹ್ಮಣ್ಯನ್ ಸ್ವಾಮಿ, ಇಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಪ್ರಸಾದ್ ಅವರು ಏಪ್ರಿಲ್ 2020 ರಿಂದ ಲಡಾಖ್ನಲ್ಲಿ ಚೀನಾದ ಸೈನಿಕರು ವಿವಾದಾಸ್ಪದ ಭಾರತೀಯ ಪ್ರದೇಶವನ್ನು ವಶಪಡಿಸಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬ ನನ್ನ ಆರ್ಟಿಐ ಪ್ರಶ್ನೆಗೆ ಉತ್ತರಿಸಲು ಮೋದಿ ಸರ್ಕಾರಕ್ಕೆ ನೋಟಿಸ್ ನೀಡಿದರು. ಸರ್ಕಾರದ ಆರು ಸಚಿವಾಲಯಗಳು ಈಗ ಪ್ರತಿ ಅಫಿಡವಿಟ್ಗಳನ್ನು ಸಲ್ಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದಿಂದ ಕಾವೇರಿ ನೀರು ಬಿಡುಗಡೆಗೆ ಆಗ್ರಹಿಸಿ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ
ಆರ್ಟಿಐ ಕಾಯ್ದೆಯಡಿಯಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ಕೇಳಿದ ಪ್ರಶ್ನೆಗಳು
1) 1996 ರ ಉದ್ದಕ್ಕೂ ಭಾರತವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಿಂದ ಭಾರತದ ಗಣರಾಜ್ಯದ ಸಾರ್ವಭೌಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ವಾಸ್ತವಿಕ ನಿಯಂತ್ರಣ ರೇಖೆಯ ಮೇಲೆ ಪರಸ್ಪರ ಒಪ್ಪಿಗೆ ನೀಡಲಾಗಿದೆಯೇ? ದಯವಿಟ್ಟು ಅದೇ ನಕ್ಷೆಯನ್ನು ಒದಗಿಸಿ.
2) 1996 ರಲ್ಲಿ ಪರಸ್ಪರ ಒಪ್ಪಿದ ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ ಬಫರ್ ವಲಯಗಳು ಅಥವಾ ನಾಗರಿಕರು ವಾಸಿಸದ ಪ್ರದೇಶಗಳು ಮತ್ತಷ್ಟು ಸೃಷ್ಟಿಯಿಂದಾಗಿ ಭಾರತದ ಸಾರ್ವಭೌಮ ಭೂಮಿಯನ್ನು ಚೀನಾಕ್ಕೆ ಎಷ್ಟು ಪ್ರಮಾಣದಲ್ಲಿ ಬಿಟ್ಟುಕೊಡಲಾಗಿದೆ? ದಯವಿಟ್ಟು ಅದೇ ನಕ್ಷೆಯನ್ನು ಒದಗಿಸಿ.
3) 2014 ರಿಂದ ಭಾರತದ ಸಾರ್ವಭೌಮ ಭೂಮಿಯನ್ನು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾಕ್ಕೆ ಬಿಟ್ಟುಕೊಡಲಾಗಿದೆ? ದಯವಿಟ್ಟು ಪ್ರತಿ ವರ್ಷವಾರು ಅದೇ ನಕ್ಷೆಯನ್ನು ಒದಗಿಸಿ.
4) 2014 ರಿಂದ ಬಫರ್ ವಲಯಗಳು ಅಥವಾ ನಾಗರಿಕರು ವಾಸಿಸದ ಪ್ರದೇಶಗಳನ್ನು ಮತ್ತಷ್ಟು ರಚಿಸುವುದರಿಂದ ಭಾರತದ ಸಾರ್ವಭೌಮ ಭೂಮಿ ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ? ದಯವಿಟ್ಟು ಅದೇ ನಕ್ಷೆಯನ್ನು ಒದಗಿಸಿ.
5) ಯಾವ ಒಪ್ಪಂದದ ಅಡಿಯಲ್ಲಿ ಭಾರತವು ಅಕ್ಸಾಯ್ ಚಿನ್ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ? ಹಾಗಿದ್ದಲ್ಲಿ, ದಯಮಾಡಿ ಕೊಟ್ಟಿರುವ ಪ್ರದೇಶವನ್ನು ಒಳಗೊಂಡಂತೆ ಅದರ ದಾಖಲೆಗಳನ್ನು ಒದಗಿಸಿ.
6) 1996 ರಿಂದ ದೇಶಗಳ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯ ಮೇಲೆ ಪರಸ್ಪರ ಒಪ್ಪಿಕೊಂಡಿರುವ ಭಾರತೀಯ ಭೂಪ್ರದೇಶದ ಮೇಲೆ ಎಷ್ಟು ಬಾರಿ ಮತ್ತು ಯಾವ ದಿನಾಂಕಗಳಲ್ಲಿ ಚೀನಾ ಮಿಲಿಟರಿ ಅಕ್ರಮ ಆಕ್ರಮಣಗಳು ನಡೆದಿವೆ? ದಯವಿಟ್ಟು ಅದೇ ವಿವರಗಳನ್ನು ಒದಗಿಸಿ.
7) 1996 ರಿಂದ ದೇಶಗಳ ನಡುವೆ ಪರಸ್ಪರ ಒಪ್ಪಿಗೆಯಾದ ವಾಸ್ತವಿಕ ನಿಯಂತ್ರಣ ರೇಖೆಯ ರೇಖಾಚಿತ್ರದ ನಂತರ, ಬಫರ್ ವಲಯಗಳ ರಚನೆ ಅಥವಾ ನಾಗರಿಕರು ವಾಸಿಸದ ಭೂಮಿ ಅಥವಾ ಭಾರತದ ಭೂಪ್ರದೇಶವನ್ನು ಬಿಟ್ಟುಕೊಡುವುದರಿಂದ ಭಾರತದಲ್ಲಿ ಎಷ್ಟು ಜನರು ಸ್ಥಳಾಂತರಗೊಂಡಿದ್ದಾರೆ? ದಯವಿಟ್ಟು ಅದೇ ವಿವರಗಳನ್ನು ಒದಗಿಸಿ.