ಮುಂಗಾರು ಮೇಲೆ ಎಲ್‌ನಿನೊ ಪರಿಣಾಮ ಬೀರದು: ಐಎಂಡಿ

Date:

ಫೆಸಿಫಿಕ್ ಸಾಗರದಲ್ಲಿ ಏಳುವ ಶಾಖದ ಅಲೆಗಳು ಅಥವಾ ಎಲ್‌ನಿನೊ ಪರಿಣಾಮ ಈ ಬಾರಿ ಭಾರತದಲ್ಲಿ ಕಂಡುಬರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ

ಎಲ್‌ನಿನೊ ಅಥವಾ ಶಾಖದ ಅಲೆಗಳು ಹೊರತಾಗಿಯೂ ದೇಶದಲ್ಲಿ ಸಾಮಾನ್ಯ ಮುಂಗಾರು ಇರಲಿದ್ದು, ಸರಾಸರಿ 87 ಸೆಂಮೀನಂತೆ ಶೇ 96ರಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಇಲಾಖೆ ಪ್ರಕಾರ, ಜೂನ್ ಮತ್ತು ಸೆಪ್ಟೆಂಬರ್ ನಡುವೆ ಈ ವರ್ಷ 83.5 ಸೆಂಮೀನಷ್ಟು ಮಳೆಯಾಗಲಿದೆ.

2023ರ ನೈರುತ್ಯ ಮಾರುತದಿಂದ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ಹೇಳಿದ್ದರೂ, ಪ್ರಾಥಮಿಕ ಮಳೆ ಋತುವಿನ ಎರಡನೇ ಅವಧಿಯಲ್ಲಿ ಎಲ್‌ನಿನೊದ ಪರಿಣಾಮ ಭಾರತದಲ್ಲಿ ಕಾಣುವ ಸಾಧ್ಯತೆಯಿದೆ. ಫೆಸಿಫಿಕ್ ಸಾಗರದ ಸಮಭಾಜಕದಲ್ಲಿ ಎಲ್‌ನಿನೊ ಪರಿಣಾಮ ಭಾರತದಲ್ಲಿ ಕಂಡುಬರುವ ಕಾರಣ ನಿಧಾನವಾಗಿ ಮುಂಗಾರು ಮಳೆಯ ತೀವ್ರತೆ ಮಂದವಾಗಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

1971ರಿಂದ 2020ರ ನಡುವೆ ಭಾರತದಲ್ಲಿ ಧೀರ್ಘಾವಧಿಯ ಸಾಮಾನ್ಯ ಮಳೆ ಪ್ರಮಾಣ 87 ಸೆಂಮೀ ಇತ್ತು. ಹೀಗಾಗಿ ಈ ವರ್ಷದ 83.5 ಸೆಂಮೀ ಮಳೆ ಹೆಚ್ಚು ವ್ಯತ್ಯಾಸ ತರದು ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.

ಆದರೆ ಉತ್ತರಪ್ರದೇಶದ ನೋಯ್ಡಾದ ಖಾಸಗಿ ಹವಾಮಾನ ವಿಭಾಗವಾಗಿರುವ ಸ್ಕೈಮೆಟ್ ಏಪ್ರಿಲ್ 10ರ ನಂತರದ ಮುಂಗಾರು ಋತು ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ.

ಏನಿದು ಎಲ್‌ನಿನೊ ಪರಿಣಾಮ?

ಎಲ್‌ನಿನೊ ಪರಿಣಾಮದ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬೆಚ್ಚಗಿನ ವಾತಾವರಣವಿರುತ್ತದೆ. ಈ ಸಮಯದಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಸಾಮಾನ್ಯವಾಗಿ ಬೆಚ್ಚಗಿನ ತಾಪಮಾನವಿದ್ದು, ವಾಡಿಕೆಯಿಂದ ಕಡಿಮೆ ಮಳೆಯಾಗಲಿದೆ.

ಶಾಖದ ವಾತಾವರಣವಿರುವ ಸಮಯದಲ್ಲಿ ದಕ್ಷಿಣ ಅಮೆರಿಕದ ಉತ್ತರ ಕರಾವಳಿ ಸಮಭಾಜಕ ಫೆಸಿಫಿಕ್‌ ಸಾಗರಲ್ಲಿ ಸಮುದ್ರ ಮೇಲ್ಮೈ ತಾಪಮಾನದ (ಎಸ್‌ಎಸ್‌ಟಿ) ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆ ಪ್ರದೇಶದಲ್ಲಿ ಸರಾಸರಿಗಿಂತ ಹೆಚ್ಚು ಶಾಖದ ವಾತಾವರಣವಿರುತ್ತದೆ.

ಈ ಹವಾಮಾನ ಬದಲಾವಣೆಗಳು 2023ರ ಮೇನಲ್ಲಿಯೇ ಶಾಖದ ಅಲೆಗಳ ಸಂಭವ ಸಾಧ್ಯತೆಗಳನ್ನು ಸೂಚಿಸುತ್ತಿವೆ. ಈ ಬೆಳವಣಿಗೆಯು ಮೇ ಅಥವಾ ಜೂನ್‌ನಲ್ಲಿ ನೈಋತ್ಯ ಮುಂಗಾರು ದುರ್ಬಲಗೊಳ್ಳಲು ಕಾರಣವಾಗಬಹುದು. ನೈರುತ್ಯ ಮುಂಗಾರಿನಿಂದಲೇ ಶೇ.70ರಷ್ಟು ಮಳೆಯನ್ನು ಪಡೆಯುವ ಭಾರತದ ಮೇಲೆ ಇದರಿಂದ ಪರಿಣಾಮವಾಗಲಿದೆ.

ಈ ಬಾರಿ ಪೆಸಿಫಿಕ್ ಮಹಾಸಾಗರದಲ್ಲಿ ಎಲ್‌ನಿನೊ (ಶಾಖದ ಹೆಚ್ಚಳ) ಪರಿಣಾಮ ನಿರೀಕ್ಷೆಗಿಂತ ಮೊದಲೇ ಉಂಟಾಗುವ ಸಾಧ್ಯತೆ ಇದೆ ಎಂದು ಅನುಮಾನ ಪಡಲಾಗಿದೆ.

ಅವಧಿಗೂ ಮುನ್ನವೇ ಎದುರಾಗುವ ಎಲ್‌ನಿನೊದಿಂದಾಗಿ ಭಾರತ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ಇಂಡೋನೇಷ್ಯಾ ಮತ್ತು ಫೆಸಿಫಿಕ್‌ ಸಾಗರದ ಹಲವಾರು ಪ್ರದೇಶಗಳಲ್ಲಿ ಶಾಖವನ್ನು ಹೆಚ್ಚಿಸುತ್ತದೆ ಮತ್ತು ಆ ಪ್ರದೇಶಗಳು ತೀವ್ರ ಬರದ ಸ್ಥಿತಿ ಎದುರಿಸಬೇಕಾಗುತ್ತದೆ.

ಇದೇ ವೇಳೆ, ಎಲ್‌ನಿನೊ ಕಾರಣದಿಂದಲೇ ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಇತರ ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು ಮತ್ತು ಪ್ರವಾಹದಿಂದಾಗಿ ಅಪಾರ ಸಾವುಗಳೂ ಸಂಭವಿಸಬಹುದು ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿ ಸರ್ಕಾರ ಕೆಎಂಎಫ್ ಅನ್ನು ಮುಗಿಸುತ್ತಿದೆಯೇ? ವಾಸ್ತವವೇನು?

ಎಲ್‌ನಿನೊ ಇದ್ದರೂ ಉತ್ತಮ ಮುಂಗಾರು

ಎಲ್‌ನಿನೊ ಇದ್ದ ವರ್ಷಗಳಲ್ಲೂ ಮುಂಗಾರು ಅತ್ಯುತ್ತಮವಾಗಿರುವ ಉದಾಹರಣೆಗಳೂ ಇವೆ. 1951ರಿಂದ 2022ರ ನಡುವೆ ಶೇ 40ರಷ್ಟು ವರ್ಷಗಳಲ್ಲಿ ಶಾಖದ ಹೊರತಾಗಿಯೂ ಭಾರತ ಸಾಮಾನ್ಯ ಮುಂಗಾರು ಕಂಡಿದೆ ಎಂದು ಐಎಂಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ.

ಪಾಶ್ಚಾತ್ಯ ಭಾಗ ಶಾಖದಿಂದ ಬೆಚ್ಚಗಿರುವಾಗ ಅದರ ಧನಾತ್ಮಕ ಪ್ರಭಾವದಿಂದ ಭಾರತದಾದ್ಯಂತ ಮುಂಗಾರು ಸಮೃದ್ಧವಾಗಿದ್ದೂ ಇದೆ. ಪೂರ್ವ ಭಾಗ ಬೆಚ್ಚಗಿದ್ದಾಗ ಅದರ ಋಣಾತ್ಮಕ ಪ್ರಮಾಣವಾಗಿ ಭಾರತದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು.

ಈಗ ತಟಸ್ಥ ಶಾಖದ ಅಲೆಗಳು ಇರುವುದರಿಂದ ಈ ಮಳೆ ಋತುವಿನಲ್ಲಿ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಶಾಖದ ಸಮಸ್ಯೆ ಸೆಪ್ಟೆಂಬರ್‌- ನವೆಂಬರ್‌ನಲ್ಲಿ ಭಾರತದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮುಂಗಾರು ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಐಎಂಡಿ ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತಗಳು ಬಂದರೆ ಏನು ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ...

ಬಿಹಾರ| ಹೊತ್ತಿ ಉರಿದ ಮದುವೆಯ ಮಂಟಪ; ಆರು ಮಂದಿ ಸಜೀವ ದಹನ

ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ...

ನಿಜವಾದ ಬದಲಾವಣೆ ಮಾಡುವವರು ನೀವು: ಮೊದಲ ಬಾರಿ ಮತದಾನ ಮಾಡುವವರಿಗೆ ಖರ್ಗೆ ಸಂದೇಶ

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು ಈ ನಡುವೆ ಮೊದಲ...

ವಿವಿಪ್ಯಾಟ್ ಪರಿಶೀಲನಾ ಗುರುತಿನ ಚೀಟಿ, ಮತಪತ್ರ ಚುನಾವಣಾ ಪ್ರಕ್ರಿಯೆಗೆ ಸುಪ್ರೀಂ ತಿರಸ್ಕಾರ

ಇವಿಎಂನಲ್ಲಿ ಮತ ಚಲಾಯಿಸಿದ ನಂತರ ಮತದಾರರಿಗೆ ವಿವಿಪ್ಯಾಟ್ ಮೂಲಕ ಪರಿಶೀಲನಾ ಚೀಟಿ...