‘ಎಎಲ್‌ಎಚ್‌ ಧ್ರುವ’ ಕಾರ್ಯಾಚರಣೆ ಸ್ಥಗಿತ: ಭಾರತೀಯ ಸೇನೆ

Date:

Advertisements
  • ಭಾರತೀಯ ಸೇನೆಯಲ್ಲಿ ಧ್ರುವ ಹೆಲಿಕಾಪ್ಟರ್‌ ಸೇವೆ
  • ಸೇನಾ ಹೆಲಿಕಾಪ್ಟರ್‌ ಪತನದ ನಂತರ ಸೇನೆ ಕ್ರಮ

ಸ್ವದೇಶಿ ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ಧ್ರುವ ಸರಣಿಯ ಹಾರಾಟವನ್ನು ಸ್ಥಗಿತಗೊಳಿಸಲು ಸೇನೆ ನಿರ್ಧರಿಸಿದೆ.

ಭಾರತೀಯ ಸೇನೆಯು ತನ್ನ ಸ್ವದೇಶಿ ನಿರ್ಮಿತ ಧ್ರುವ ಹೆಲಿಕಾಪ್ಟರ್ ಕಾರ್ಯಾಚರಣೆ ನಿಲ್ಲಿಸಿದೆ ಎಂದು ಶನಿವಾರ (ಮೇ 6) ಮಾಧ್ಯಮಗಳು ವರದಿ ಮಾಡಿವೆ.

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ ಬಳಿ ಸೇನಾ ಹೆಲಿಕಾಪ್ಟರ್‌ವೊಂದು ಪತನವಾದ ಎರಡು ದಿನಗಳ ನಂತರ ಎಎಲ್‌ಎಚ್‌ ಧ್ರುವ ಕಾರ್ಯಾಚರಣೆ ನಿಲ್ಲಿಸಲು ಸೇನೆ ತೀರ್ಮಾನ ಕೈಗೊಂಡಿದೆ ಎಂದು ವರದಿಯಾಗಿದೆ.

Advertisements

ಸೇನಾ ಹೆಲಿಕಾಪ್ಟರ್‌ ಪತನಗೊಂಡು ಒಬ್ಬ ತಾಂತ್ರಿಕ ಸಿಬ್ಬಂದಿ ಮೃತಪಟ್ಟು, ಇಬ್ಬರು ಪೈಲಟ್‌ ಗಾಯಗೊಂಡಿದ್ದರು.

ಮಾರ್ಚ್‌ನಲ್ಲಿ ಹೆಲಿಕಾಪ್ಟರ್‌ ಅಪಘಾತದ ಎರಡು ಘಟನೆಗಳ ನಂತರ ನೌಕಾದಳ ಮತ್ತು ಕರಾವಳಿ ಕಾವಲು ಪಡೆ ಇತ್ತೀಚೆಗೆ ಒಂದು ತಿಂಗಳಿಗೂ ಹೆಚ್ಚು ಅವಧಿಯವರೆಗೆ ಹೆಲಿಕಾಪ್ಟರ್‌ ಹಾರಾಟ ಸ್ಥಗಿತಗೊಳಿಸಿದ್ದವು.

ಆದರೆ ಕಾರ್ಯಾಚರಣೆಯ ಅಗತ್ಯದ ದೃಷ್ಟಿಯಿಂದ ಸೇನೆಯು ಕೆಲವು ಹೆಲಿಕಾಪ್ಟರ್‌ಗಳನ್ನು ಸಕ್ರಿಯಗೊಳಿಸಿತ್ತು.

ಧ್ರುವ ಹೆಲಿಕಾಪ್ಟರ್‌ ತನ್ನ ಕಾರ್ಯಾಚರಣೆಯನ್ನು ನೌಕಾದಳ ಮತ್ತು ಕರಾವಳಿ ಕಾವಲು ಪಡೆಯಲ್ಲಿ ಮತ್ತೆ ಕಾರ್ಯನಿರ್ವಹಿಸಲಿದೆಯೇ ಎಂಬುದನ್ನು ಸೇನೆ ಸ್ಪಷ್ಟಪಡಿಸಿಲ್ಲ.

ಧ್ರುವ ಹೆಲಿಕಾಪ್ಟರ್‌ ತನ್ನ ಕಾರ್ಯಾಚರಣೆ ಮತ್ತೆ ಆರಂಭಿಸಲು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಿಂದ (ಎಚ್‌ಎಎಲ್) ದೋಷರಹಿತ ಪ್ರಮಾಣಪತ್ರ ಪಡೆಯಬೇಕು.

ಧ್ರುವ ಹೆಲಿಕಾಪ್ಟರ್‌ ಅನ್ನು ಎಚ್‌ಎಎಲ್‌ ತಯಾರು ಮಾಡುತ್ತದೆ. ಎಎಲ್‌ಎಚ್‌ ಧ್ರುವ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿರುವುದು ಎರಡು ತಿಂಗಳಲ್ಲಿ ಇದು ಮೂರನೇ ಘಟನೆ.

ಭಾರತೀಯ ನೌಕಾಪಡೆಯ ಧ್ರುವ ಹೆಲಿಕಾಪ್ಟರ್‌ ಅನ್ನು ಅರಬ್ಬೀ ಸಮುದ್ರದಲ್ಲಿ ಪೂರ್ವ ಯೋಜಿತವಾಗಿ ಇಳಿಸಲಾಗಿತ್ತು.

ಕೊಚ್ಚಿಯಿಂದ ಹಾರಾಟ ಪ್ರಾರಂಭಿಸಿದ ನಂತರ ಕರಾವಳಿ ಕಾವಲು ಪಡೆಯ ಧ್ರುವ ಹೆಲಿಕಾಪ್ಟರ್‌ ಅನ್ನು ಕೆಲವು ಕ್ಷಣಗಳ ನಂತರ ಬಲವಂತದ ಭೂಸ್ಪರ್ಶ ಮಾಡಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಮೂವರು ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಮಂದಿಯ ಹತ್ಯೆ

ಎಎಲ್‌ಎಚ್‌ ಧ್ರುವ, ಭಾರತೀಯ ಸಶಸ್ತ್ರ ಪಡೆಗಳಿಗೆ ಒಂದು ಬಹುಪಯೋಗಿ ಯುದ್ಧ ಹೆಲಿಕಾಪ್ಟರ್‌. ಇದು ಸಿಯಾಚಿನ್‌ ಮತ್ತು ಲಡಾಖ್‌ನಂತಹ ಎತ್ತರದ ಪ್ರದೇಶಗಳಲ್ಲಿ ಹಾರುವ ಮೂಲಕ ಸೈನಿಕರಿಗೆ ನೆರವಾಗುತ್ತದೆ.

ಇತ್ತೀಚೆಗೆ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷಗಳು ಕಂಡು ಬರುತ್ತಿವೆ ಎನ್ನಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X