2008 ರಲ್ಲಿ ನಡೆದ ದೆಹಲಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆಯ ಎಲ್ಲ ಐವರು ಆರೋಪಿಗಳನ್ನು ದೆಹಲಿ ಹೈಕೋರ್ಟ್ ದೋಷಿಗಳು ಎಂದು ತೀರ್ಪು ನೀಡಿದೆ.
ಹೆಡ್‌ಲೈನ್ಸ್ ಟುಡೆ ಸುದ್ದಿ ವಾಹಿನಿಯಲ್ಲಿ ಪತ್ರಕರ್ತರಾಗಿದ್ದ ಸೌಮ್ಯಾ ವಿಶ್ವನಾಥನ್ ಅವರು 2008 ರ ಸೆಪ್ಟೆಂಬರ್‌ನಲ್ಲಿ ಕಚೇರಿಯಿಂದ ಮನೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಹಂತಕರು ಗುಂಡು ಹಾರಿಸಿ ಕೊಂದಿದ್ದರು.
2008ರಲ್ಲಿ 25 ವರ್ಷದ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್, ಬಲ್ಜೀತ್ ಮಲಿಕ್ ಮತ್ತು ಅಜಯ್ ಸೇಥಿ ಅವರನ್ನು ದೆಹಲಿಯ ಸಾಕೇತ್ ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿದೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸೌಮ್ಯ ವಿಶ್ವನಾಥನ್ ಅವರ ತಾಯಿ, “ನಮ್ಮ ಮಗಳು ಮೃತಪಟ್ಟಿದ್ದಾಳೆ. ಈ ತೀರ್ಪಿನಿಂದ ಇತರರಿಗೆ ಪಾಠವಾಗುತ್ತದೆ. ಇಲ್ಲದಿದ್ದರೆ ಅಪರಾಧಿಗಳಿಗೆ ಬೆಂಬಲ ಸಿಕ್ಕಂತಾಗುತ್ತದೆ. ಈ ರೀತಿಯ ತೀರ್ಪಿನಿಂದ ಅಪರಾಧಿಗಳ ಒಂದು ಸಮೂಹವಾದರೂ ಕ್ರೌರ್ಯ ನಡೆಸಲು ಹಿಂಜರಿಯುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅನ್‌ವೆರಿಫೈಡ್ ಟ್ವಿಟರ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಪೋಸ್ಟ್, ಲೈಕ್, ರೀಟ್ವಿಟ್ಗೂ ಇನ್ಮುಂದೆ ಹಣ ಪಾವತಿಸಬೇಕು !
ಯುವ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರು ಸೆಪ್ಟೆಂಬರ್ 30, 2008 ರಂದು ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ತಮ್ಮ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಫೋರೆನ್ಸಿಕ್ ವರದಿಗಳು ತಲೆಗೆ ಗುಂಡೇಟಿನಿಂದ ಸಾವಿಗೆ ಕಾರಣವನ್ನು ಬಹಿರಂಗಪಡಿಸುವವರೆಗೂ ಕಾರು ಅಪಘಾತ ಎಂದು ನಂಬಲಾಗಿತ್ತು.
ಸಿಸಿಟಿವಿ ದೃಶ್ಯಗಳು ಸೌಮ್ಯ ವಿಶ್ವನಾಥನ್ ಅವರ ಹತ್ಯೆಯ ಬಗ್ಗೆ ಹೆಚ್ಚಿನ ಸುಳಿವು ನೀಡಿದವು. ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳಾದ ರವಿ ಕಪೂರ್ ಮತ್ತು ಅಮಿತ್ ಶುಕ್ಲಾ ಅವರು ಹೆಚ್ಚಿನ ವಿಚಾರಣೆಯ ಸಮಯದಲ್ಲಿ ಹತ್ಯೆಯನ್ನು ಒಪ್ಪಿಕೊಂಡಿದ್ದರು.
ಆರೋಪ ಪಟ್ಟಿಯನ್ನು ಜೂನ್ 2010 ರಲ್ಲಿ ಸಲ್ಲಿಸಲಾಯಿತು, ನಂತರ ನವೆಂಬರ್ 2010 ರಲ್ಲಿ ವಿಚಾರಣೆ ಪ್ರಾರಂಭವಾಯಿತು. ಜುಲೈ 2016 ರಲ್ಲಿ ವಿಚಾರಣೆ ಮುಕ್ತಾಯವಾಯಿತು.