ಮೇ 21ಕ್ಕೆ ‘ವಿಶ್ವ ದಿನದ ಅಂತ್ಯ’ | ಇಲ್ಲಿದೆ ಆಚರಣೆಯ ಹಿಂದಿರುವ ಅಸಲೀ ಕಾರಣ

Date:

Advertisements
  • 2011ರ ಮೇ 21ಕ್ಕೆ ವಿಶ್ವ ದಿನದ ಅಂತ್ಯ ಎಂದು ಬೈಬಲ್‌ನಲ್ಲಿ ಉಲ್ಲೇಖ
  • ಪ್ರಳಯದ ಮಾಹಿತಿ ನೀಡಿದ್ದ ರೇಡಿಯೊ ನಿರೂಪಕ ಹೆರಾಲ್ಡ್ ಕ್ಯಾಂಪಿಂಗ್

‘ವಿಶ್ವ ದಿನದ ಅಂತ್ಯ’ ಎಂದು ಮೇ 21 ಅನ್ನು ಆಚರಿಸಲಾಗುತ್ತದೆ. ಇಡೀ ಜಗತ್ತಿನಲ್ಲಿ ಜನರು ಇದನ್ನು ಸಂಭ್ರಮಿಸುತ್ತಾರೆ.

ಇಂತಹ ವಿಶ್ವದ ದಿನದ ಅಂತ್ಯವನ್ನು ಆಚರಿಸುತ್ತಾರೆಯೇ ಎಂದು ಹಲವರು ಹುಬ್ಬೇರಿಸುತ್ತಾರೆ. ಆದರೆ ವಿಚಿತ್ರವಾದರೂ ಇಂತಹ ಆಚರಣೆ ನಡೆಯುತ್ತದೆ ಎಂಬುದು ವಾಸ್ತವ.

ಈ ದಿನದ ಆಚರಣೆಯ ಹಿಂದೆ ಒಂದು ಕುತೂಹಲಕಾರಿ ಕಥನವಿದೆ. ಇದು ಚಾರಣಿಗರು, ಸಮಾನ ಮನಸ್ಕರ ಚಿತ್ತ ಸೆರೆಹಿಡಿಯುತ್ತದೆ.

Advertisements

ಈ ದಿನವನ್ನು ಪ್ರಳಯದ ದಿನ ಅಥವಾ ವಿಶ್ವದ ಅಂತ್ಯದ ದಿನ ಎಂದು ಕರೆಯಲಾಗುತ್ತದೆ. 2011ರ ಮೇ 21 ರಂದು ಬಹಳ ನಿರ್ಣಾಯಕ ದಿನ ಎನಿಸಿದ್ದು ಅಂದು ವಿಶ್ವ ದಿನದ ಅಂತ್ಯ ಸೂಚಿಸುತ್ತದೆ ಎಂದು ಅನೇಕ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದರಿಂದ ಅನೇಕರು ಭೀತಿಗೊಂಡಿದ್ದ ಘಟನೆಗಳು ವರದಿಯಾದವು. ಅನೇಕರು ಮೇ 21ಕ್ಕೆ ಪ್ರಳಯ ಉಂಟಾಗಿ ತಾವು ಇಹಲೋಕ ತ್ಯಜಿಸುತ್ತೇವೆ ಎಂದು ತರಹೇವಾರಿ ತಯಾರಿ ನಡೆಸಿದ್ದರು.

ವಿಶ್ವದ ದಿನದ ಅಂತ್ಯ ವರದಿಯು ಅಂತಹ ಭ್ರಮಾಲೋಕವನ್ನು ಸೃಷ್ಟಿಸಿತ್ತು.

ಅಮೇರಿಕದ ರೇಡಿಯೊ ನಿರೂಪಕ ಮತ್ತು ನೆಟ್‌ವರ್ಕ್‌ನ ಮಾಜಿ ಅಧ್ಯಕ್ಷ ಹೆರಾಲ್ಡ್ ಕ್ಯಾಂಪಿಂಗ್ ಜಗತ್ತಿಗೆ ಬೈಬಲ್‌ನಲ್ಲಿ ಉಲ್ಲೇಖಿತ ಪ್ರಳಯದ ಎಚ್ಚರಿಕೆ ನೀಡಿದ್ದರು.

2011ರ ಮೇ 21 ರಂದು ಈ ಜಗತ್ತು ಅಂತ್ಯವಾಗಿ ಕ್ರೈಸ್ತರು ಸ್ವರ್ಗವನ್ನು ಪ್ರವೇಶಿಸುತ್ತಾರೆ. ಆ ದಿನವನ್ನು ತೀರ್ಪಿನ ದಿನ ಎಂದು ಗುರುತಿಸಲಾಗುತ್ತದೆ ಎಂದು ಹೆರಾಲ್ಡ್‌ ಹೇಳಿದ್ದರು.

ವಿಶ್ವದ ದಿನದ ಅಂತ್ಯ ಘೋಷಿತ ದಿನಾಂಕದಿಂದ ಐದು ತಿಂಗಳ ನಂತರ ಸಂಭವಿಸಬೇಕಿತ್ತು ಎಂದು ಹೆರಾಲ್ಡ್‌ ಹೇಳಿದ್ದರು.

ಹೆರಾಲ್ಡ್‌ ಕ್ಯಾಂಪಿಂಗ್‌ ತನ್ನ ಪುಸ್ತಕ, ಫ್ಯಾಮಿಲಿ ಸ್ಟೇಷನ್ಸ್‌ ಇಂಕ್‌ ಪ್ರಕಟಿತ ‘ವಿ ಆರ್‌ ಆಲ್‌ಮೋಸ್ಟ್‌ ದೇರ್‌’ ಪುಸ್ತಕದಲ್ಲಿ ಪ್ರಪಂಚದ ಅಂತ್ಯದ ಕುರಿತು ಉಲ್ಲೇಖಿಸಿದ್ದಾನೆ.

ಈ ಸುದ್ದಿ ಓದಿದ್ದೀರಾ? 2 ಸಾವಿರ ನೋಟು ಹಿಂತೆಗೆತ : ಮೋದಿಯ ತುಘಲಕ್ ದರ್ಬಾರ್ ಎಂದ ಜೈರಾಮ್‌ ರಮೇಶ್

“ಯಾವುದೇ ಹಿಂಜರಿಕೆಯಿಲ್ಲದೆ ಜಗತ್ತಿನ ವಿನಾಶದ ಬಗ್ಗೆ ಬೈಬಲ್‌ನಲ್ಲಿ ನೀಡಿರುವ ಪುರಾವೆಗಳ ಬಗ್ಗೆ ಸಾಧ್ಯವಾದಷ್ಟು ಜನರಿಗೆ ತಿಳಿಸುವುದು ಮಾತ್ರ ಈ ಪುಸ್ತಕದ ಉದ್ದೇಶವಾಗಿದೆ. ಆಡಮ್‌ ಮತ್ತು ಈವ್‌ ದೇವರಿಗೆ ಅವಿಧೇಯರಾಗಿ ನಡೆದುಕೊಂಡ ನಂತರ ಮನುಕುಲದ ಸರ್ವೋಚ್ಚ ನಾಯಕ ಏಸುಕ್ರಿಸ್ತನು ಈಡನ್‌ ಉದ್ಯಾನದಲ್ಲಿ ಪ್ರಾರಂಭವಾದ ತೀರ್ಪು ಪ್ರಕ್ರಿಯೆ ಪೂರ್ಣಗೊಂಡಾಗ ಉಂಟಾಗುವ ಪ್ರಪಂಚದ ವಿನಾಶ ಅದ್ಭುತ ಮತ್ತು ಭಯಾನಕ ಕ್ಷಣವಾಗಿರುತ್ತದೆ. ನಾವು ಈಗಾಗಲೇ ಆ ಕ್ಷಣ ತಲುಪಿದ್ದೇವೆ” ಎಂದು ಹೆರಾಲ್ಡ್‌ ಕ್ಯಾಂಪಿಂಗ್‌ ಪುಸ್ತಕದಲ್ಲಿ ಬರೆಯಲಾಗಿದೆ.

ವಿಶ್ವ ದಿನದ ಅಂತ್ಯ ಎಂದು ಮೇ 21 ಅನ್ನು ಆ ದಿನದ ಸ್ಮರಣಾರ್ಥ ಆಚರಿಸಲಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X