ಜಾತಿ ಗಣತಿಯು ಅಲ್ಪಸಂಖ್ಯಾತರ ‘ಎಕ್ಸ್-ರೇ’: ರಾಹುಲ್ ಗಾಂಧಿ

Date:

Advertisements

ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳ ಸತ್ಯಾಸತ್ಯತೆ ಅರಿಯಲು ದೇಶದಲ್ಲಿ ಜಾತಿ ಗಣತಿಯ ‘ಎಕ್ಸ್ ರೇ’ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಮಧ್ಯ ಪ್ರದೇಶದ ಶಾಹದೋಲ್‌ನ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಾತಿ ಗಣತಿ ನಡೆಯಬೇಕಿದೆ. ಇದು ಅಲ್ಪಸಂಖ್ಯಾತರ ಸತ್ಯದ ‘ಎಕ್ಸ್-ರೇ’ ಕೂಡ ಆಗಲಿದೆ ಎಂದರು.

“ಏನೇ ಬಂದರೂ ಜಾತಿ ಗಣತಿ ನಡೆಸುವಂತೆ ಕೇಂದ್ರಕ್ಕೆ ಒತ್ತಾಯಿಸುತ್ತೇವೆ. ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳ ಸತ್ಯಾಸತ್ಯತೆ ಅರಿಯಲು ಜಾತಿ ಗಣತಿ ‘ಎಕ್ಸ್ ರೇ’ ಆಗಿದೆ. ಇಂದು ಆದಿವಾಸಿಗಳಿಗೆ ಯಾವ ಹಕ್ಕುಗಳನ್ನು ನೀಡಬೇಕು, ಒಬಿಸಿ ಮತ್ತು ಎಸ್‌ಟಿ ವರ್ಗಗಳಿಗೆ ಯಾವ ಸ್ಥಾನಮಾನವನ್ನು ನೀಡಬೇಕು ಎಂಬುದನ್ನು ಇದು ನಿರ್ಧರಿಸುತ್ತದೆ. ಜಾತಿ ಗಣತಿ ದೇಶದ ಮುಂದಿರುವ ಪ್ರಶ್ನೆ. ನಾವು ಜಾತಿ ಗಣತಿಯ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂದರೆ ನಾವು ಅದನ್ನು ಖಂಡಿತಾ ಜಾರಿಗೊಳಿಸುತ್ತೇವೆ” ಎಂದರು.

Advertisements

ಈ ಸುದ್ದಿ ಓದಿದ್ದೀರಾ? ಇಸ್ರೇಲ್‌ ದಾಳಿ ಖಂಡಿಸಿ ಪ್ಯಾಲೆಸ್ತೀನಿಯರ ಹಕ್ಕುಗಳಿಗೆ ಕಾಂಗ್ರೆಸ್ ಬೆಂಬಲ

“ಲಾಲ್ ಕೃಷ್ಣ ಅಡ್ವಾಣಿ ಅವರು ಬಿಜೆಪಿ – ಆರ್‌ಎಸ್‌ಎಸ್‌ ಮೂಲ ಪ್ರಯೋಗಾಲಯವು ಗುಜರಾತ್‌ನಲ್ಲಿಲ್ಲ. ಆದರೆ ಅದು ಮಧ್ಯ ಪ್ರದೇಶದಲ್ಲಿದೆ ಎಂದು ತಮ್ಮ ಪುಸ್ತಕರಲ್ಲಿ ಬರೆದಿದ್ದಾರೆ. ಮಧ್ಯಪ್ರದೇಶದ ಬಿಜೆಪಿಯ ಪ್ರಯೋಗಾಲಯದಲ್ಲಿ ಸತ್ತವರಿಗೆ ಚಿಕಿತ್ಸೆ ನೀಡಿ ಅವರ ಹಣವನ್ನು ದೋಚಲಾಗುತ್ತಿದೆ. ಬಿಜೆಪಿಯ ಪ್ರಯೋಗಾಲಯದಲ್ಲಿ ಅಲ್ಲಿನ ನಾಯಕರು ಆದಿವಾಸಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾರೆ” ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

“2013 ರಲ್ಲಿ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದ ಬೃಹತ್ ನೇಮಕಾತಿ ಹಗರಣವಾದ ವ್ಯಾಪಂನಿಂದ 1 ಕೋಟಿ ಯುವಕರ ಭವಿಷ್ಯ ಹಾಳಾಗುತ್ತಿದೆ. ಇಲ್ಲಿಯವರೆಗೆ ನಾಲ್ವರ ಹತ್ಯೆಯಾಗಿದೆ. ದೊಡ್ಡ ಹುದ್ದೆಗಳಿಗೆ ನೇಮಕವಾಗಲು ಲಕ್ಷ ಲಕ್ಷ ರೂ. ಲಂಚ ನೀಡಬೇಕು. ಅಲ್ಲದೆ ಇಲ್ಲಿಯವರೆಗೂ 18 ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ 18 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ರಾಹುಲ್ ತಿಳಿಸಿದರು.

ನವೆಂಬರ್ 7 ರಿಂದ 30 ರ ನಡುವೆ ಛತ್ತೀಸ್‌ಗಢ , ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದ ಒಂದು ದಿನದ ನಂತರ ರಾಹುಲ್ ಗಾಂಧಿಯವರ ಚುನಾವಣಾ ರ‍್ಯಾಲಿ ಹಮ್ಮಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X