ಸತ್ಯ ಹೇಳಿದ್ದಕ್ಕೆ ಸಿಕ್ಕ ಬೆಲೆ; ತುಘಲಕ್ ಲೇನ್ ನಿವಾಸ ತೊರೆದ ರಾಹುಲ್ ಗಾಂಧಿ

Date:

  • ಏಪ್ರಿಲ್ 22ರಂದು ಮನೆ ತೊರೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
  • ಸೋನಿಯಾ ಗಾಂಧಿ ಮನೆಗೆ ತಾತ್ಕಾಲಿಕವಾಗಿ ನಿವಾಸ ಬದಲಾವಣೆ

ಮೋದಿ ಸರ್‌ನೇಮ್‌ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ನೀಡಿದ ಶಿಕ್ಷೆಗೆ ಸೆಷನ್ಸ್ ನ್ಯಾಯಾಲಯದಿಂದ ತಡೆಯಾಜ್ಞೆ ಸಿಗದ ಎರಡು ದಿನಗಳಲ್ಲಿ ಲೋಕಸಭೆಯ ಆದೇಶದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದಿಂದ ದೊರೆತ 12 ಸಂಖ್ಯೆಯ ತುಘಲಕ್ ಲೇನ್‌ ನಿವಾಸ ತೊರೆದಿದ್ದಾರೆ.

ಶನಿವಾರ (ಏಪ್ರಿಲ್ 22) ತಮ್ಮ ಮನೆ ಖಾಲಿ ಮಾಡಿದ ನಂತರ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, “ಸತ್ಯ ಹೇಳಿದ್ದಕ್ಕೆ ಸಿಕ್ಕ ಬೆಲೆ” ಎಂದು ಪ್ರತಿಕ್ರಿಯಿಸಿದ್ದಾರೆ.

“ದೇಶದ ಜನರು 19 ವರ್ಷಗಳ ಕಾಲ ಈ ಮನೆಯಲ್ಲಿರುವ ಅವಕಾಶ ನೀಡಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಆದರೆ ಈ ಮನೆಯನ್ನು ನನ್ನಿಂದ ಕಿತ್ತುಕೊಳ್ಳಲಾಗಿದೆ. ಇತ್ತೀಚೆಗೆ ಸತ್ಯ ಹೇಳಿದರೆ ಬೆಲೆ ತೆರಬೇಕಾಗುತ್ತದೆ. ಆದರೆ, ನಾನು ಸತ್ಯ ಹೇಳಿದ್ದಕ್ಕಾಗಿ ಯಾವುದೇ ಬೆಲೆ ತೆರಲು ಸಿದ್ಧನಿದ್ದೇನೆ” ಎಂದು ರಾಹುಲ್ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಿವಾಸವನ್ನು ಎಲ್ಲಿಗೆ ಬದಲಿಸುತ್ತಿದ್ದೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ, “ಕೆಲ ಸಮಯದವರೆಗೆ ನಾನು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 10 ಜನಪಥ್ ನಿವಾಸದಲ್ಲಿ ತಂಗುತ್ತೇನೆ. ನಂತರ ನಾವು ಏನಾದರೂ ನಿರ್ಧರಿಸುತ್ತೇವೆ” ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಮೋದಿ ಸರ್‌ನೇಮ್‌ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷಗಳ ಶಿಕ್ಷೆಯ ನಂತರ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸಂಸದರ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಎರಡು ದಿನಗಳಲ್ಲೇ ಅವರಿಗೆ ತಮ್ಮ 12 ತುಘಲಕ್ ಲೇನ್ ಮನೆಯನ್ನು ಖಾಲಿ ಮಾಡುವಂತೆ ಆದೇಶಿಸಲಾಗಿತ್ತು.

ಶನಿವಾರ ರಜಾದಿನವಾಗಿದ್ದ ಕಾರಣ ರಾಹುಲ್ ಗಾಂಧಿ ಅವರು ಲೋಕಸಭೆಯ ಕಾರ್ಯಾಲಯಕ್ಕೆ ಮನೆಯ ಕೀಲಿ ಕೈಗಳನ್ನು ನೀಡಲಾಗಿಲ್ಲ. ಅವರಿಗೆ ಏಪ್ರಿಲ್ 22ರ ಒಳಗೆ ಮನೆ ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಶುಕ್ರವಾರವೇ ಅವರು ತಮ್ಮ ಮನೆಯ ವಸ್ತುಗಳನ್ನು ಅಮ್ಮ ಸೋನಿಯಾ ಗಾಂಧಿ ಮನೆಗೆ ಸ್ಥಳಾಂತರಿಸಿದ್ದರು. ಸದ್ಯ ಅವರು ಸೋನಿಯಾ ಗಾಂಧಿ ಜೊತೆಗೆ ನೆಲೆಸಿದ್ದು, ಹೊಸ ಮನೆಗಾಗಿ ಹುಡುಕುತ್ತಿದ್ದಾರೆ.

ರಾಹುಲ್ ಗಾಂಧಿ 12 ತುಘಲಕ್ ಲೇನ್‌ ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಅವರ ಜೊತೆಗಿದ್ದ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, “ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಸತ್ಯ ಹೇಳಿದ್ದಕ್ಕಾಗಿ ಇದೆಲ್ಲವನ್ನೂ ಅನುಭವಿಸುತ್ತಿದ್ದಾರೆ. ಆದರೆ, ರಾಹುಲ್‌ ಧೈರ್ಯವಂತರು, ಅವರು ಭಯಪಡುವುದಿಲ್ಲ, ಸೋಲುವುದಿಲ್ಲ ಹಾಗೂ ಹೋರಾಟ ಮುಂದುವರಿಸುತ್ತಾರೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಸುದ್ದಿ ನೋಟ | ರಾಬರ್ಟ್ ವಾದ್ರಾ ಕ್ಲೀನ್‌ಚಿಟ್‌; ವ್ಯರ್ಥ ವಿಚಾರಣೆಯಿಂದ ಬಿಜೆಪಿ ಚುನಾವಣಾ ಲಾಭ ಪಡೆಯಿತೆ?

ರಾಹುಲ್ ಗಾಂಧಿ ಅವರು ಮನೆ ತೊರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, “ಲೋಕಸಭೆ ಆದೇಶದ ಅನುಸಾರ ಇಂದು ರಾಹುಲ್ ಗಾಂಧಿ ತಮ್ಮ ಮನೆ ತೊರೆದಿದ್ದಾರೆ. ನ್ಯಾಯಾಲಯ ಅವರಿಗೆ ಅರ್ಜಿ ಸಲ್ಲಿಸಲು 30 ದಿನಗಳನ್ನು ನೀಡಿದೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಅವರ ಲೋಕಸಭಾ ಸಂಸದ ಸ್ಥಾನ ಮರಳಿ ನೀಡಬಹುದು. ಆದರೆ ಆದರ್ಶಪ್ರಾಯವಾಗಿ ಮನೆ ತೊರೆದಿರುವುದು ಅವರು ನಿಯಮಗಳಿಗೆ ತೋರಿಸುವ ಗೌರವಕ್ಕೆ ಸಾಕ್ಷಿ” ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ತಿಂಗಳೊಳಗೆ ಸರ್ಕಾರಿ ಬಂಗಲೆ ತೊರೆಯುವಂತೆ ಲೋಕಸಭಾ ವಸತಿ ಸಮಿತಿ ನೀಡಿದ ನೋಟಿಸ್‌ಗೆ ಉತ್ತರಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ನಿಮ್ಮ ಪತ್ರಕ್ಕೆ ಧನ್ಯವಾದ, ನಿಮ್ಮ ಆದೇಶ ಪಾಲಿಸುತ್ತೇನೆ” ಎಂದು ಹೇಳಿದ್ದರು.

“ಕಳೆದ ನಾಲ್ಕು ಅವಧಿಗೆ ಸಂಸತ್ತಿನ ಚುನಾಯಿತ ಪ್ರತಿನಿಧಿಯಾಗಿ ಇಲ್ಲಿ ಕಳೆದ ಸಂತಸದ ಕ್ಷಣಗಳಿಗೆ ನನ್ನ ಲೋಕಸಭಾ ಕ್ಷೇತ್ರದ ಜನರಿಗೆ ಆಬಾರಿಯಾಗಿದ್ದೇನೆ. ನನ್ನ ಹಕ್ಕುಗಳ ಬಗ್ಗೆ ಪೂರ್ವಗ್ರಹವಿಲ್ಲದೆಯೇ, ನಾನು ನಿಮ್ಮ ಪತ್ರದಲ್ಲಿ ಬರೆದಿರುವ ಆದೇಶವನ್ನು ಖಂಡಿತಾ ಪಾಲಿಸುತ್ತೇನೆ” ಎಂದು ಅವರು ವಸತಿ ಸಮಿತಿಗೆ ಬರೆದ ಪತ್ರದಲ್ಲಿ ಹೇಳಿದ್ದರು.

ಸಂಸದನ ಸ್ಥಾನದಿಂದ ಅನರ್ಹಗೊಂಡ ಮೂರು ದಿನದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಒಂದು ತಿಂಗಳೊಳಗೆ ಸರ್ಕಾರಿ ಬಂಗಲೆ ತೊರೆಯುವಂತೆ ಲೋಕಸಭಾ ವಸತಿ ಸಮಿತಿ ನೋಟಿಸ್ ನೀಡಿತ್ತು.

ಮೋದಿ ಸರ್‌ನೇಮ್‌ ವಿಚಾರದಲ್ಲಿ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ ಸೂರತ್ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿದ ನಂತರ ಲೋಕಸಭೆ ಸಚಿವಾಲಯ ರಾಹುಲ್ ಗಾಂಧಿ ಅವರನ್ನು ಸಂಸದನ ಸ್ಥಾನದಿಂದ ವಜಾಗೊಳಿಸಿತ್ತು. 2004ರಲ್ಲಿ ಅವರು ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದಾಗ ಅವರಿಗೆ ನವದೆಹಲಿಯ ಲುಧಿಯಾನ ಏರಿಯಾದ 12 ತುಘಲಕ್ ರಸ್ತೆಯಲ್ಲಿರುವ ಬಂಗಲೆಯನ್ನು ಸರ್ಕಾರದ ವತಿಯಿಂದ ನೀಡಲಾಗಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿಜವಾದ ಬದಲಾವಣೆ ಮಾಡುವವರು ನೀವು: ಮೊದಲ ಬಾರಿ ಮತದಾನ ಮಾಡುವವರಿಗೆ ಖರ್ಗೆ ಸಂದೇಶ

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು ಈ ನಡುವೆ ಮೊದಲ...

ವಿವಿಪ್ಯಾಟ್ ಪರಿಶೀಲನಾ ಗುರುತಿನ ಚೀಟಿ, ಮತಪತ್ರ ಚುನಾವಣಾ ಪ್ರಕ್ರಿಯೆಗೆ ಸುಪ್ರೀಂ ತಿರಸ್ಕಾರ

ಇವಿಎಂನಲ್ಲಿ ಮತ ಚಲಾಯಿಸಿದ ನಂತರ ಮತದಾರರಿಗೆ ವಿವಿಪ್ಯಾಟ್ ಮೂಲಕ ಪರಿಶೀಲನಾ ಚೀಟಿ...

₹4.8 ಕೋಟಿ ನಗದು ವಶ; ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಚಕ್ಷಣ ದಳದ (ಎಫ್‌ಎಸ್‌ಟಿ) ಅಧಿಕಾರಿಗಳು ₹4.8...

ಗೌಪ್ಯತೆಯ ಬದ್ದತೆ ಮುರಿಯಲು ಒತ್ತಾಯಿಸಿದರೆ ಭಾರತವನ್ನೇ ತೊರೆಯುತ್ತೇವೆ: ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಸಂದೇಶಗಳ ಖಾಸಗಿತನ/ಗೌಪ್ಯತೆ (ಎಂಡ್‌-ಟು-ಎಂಚ್‌ ಎನ್‌ಕ್ರಿಪ್ಶನ್‌) - ಸಂದೇಶ ಕಳಿಸಿದವರು, ಸ್ವೀಕರಿಸಿದವರಲ್ಲದೆ...