ಮಣಿಪುರ ಸರ್ಕಾರಕ್ಕೆ ಎದುರಾದ ಸರಣಿ ರಾಜೀನಾಮೆಯ ರಾಜಕೀಯ ಬಿಕ್ಕಟ್ಟು

Date:

Advertisements
ಈಗಾಗಲೇ ಬುಡಕಟ್ಟು ಜನಾಂಗದವರ ವಿರೋಧ ಕಟ್ಟಿಕೊಂಡು ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಈ ರಾಜೀನಾಮೆಯ ರಾಜಕೀಯ ಬಿಕ್ಕಟ್ಟು ನುಂಗಲಾರದ ತುತ್ತಾಗುತ್ತಿದೆ.

ಮಣಿಪುರದಲ್ಲಿ ಮತ್ತೊಬ್ಬ ಬಿಜೆಪಿ ಶಾಸಕರು ತಮ್ಮ ಅಧಿಕೃತ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಸರಣಿ ರಾಜೀನಾಮೆಗಳ ರಾಜಕೀಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಲೇ ಹೋಗುತ್ತಿದೆ.

ಕಳೆದ ವರ್ಷದ ಚುನಾವಣೆಯಲ್ಲಿ ಉರಿಪೋಕ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಖ್ವಾರಕ್ಪಂ ರಘುಮಣಿ ಏಪ್ರಿಲ್ 24ರಂದು ಮಣಿಪುರದ ನವೀಕೃತ ಇಂಧನ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಎರಡು ವಾರಗಳಲ್ಲಿ ಎನ್‌ ಬೀರೆನ್ ಸಿಂಗ್ ನೇತೃತ್ವದ ಬಿಜೆಪಿ ಬೆಂಬಲಿತ ಮಣಿಪುರ ಸರ್ಕಾರದಲ್ಲಿ ರಾಜೀನಾಮೆ ನೀಡಿದ ನಾಲ್ಕನೇ ಬಿಜೆಪಿ ಶಾಸಕ ರಘುಮಣಿ.

ಬಿಜೆಪಿ ಸರ್ಕಾರಕ್ಕೆ ತಕ್ಷಣಕ್ಕೆ ದೊಡ್ಡ ಸಮಸ್ಯೆ ಏರ್ಪಡುವ ಸಾಧ್ಯತೆ ಕಡಿಮೆಯಿದೆ ಎಂದು ಬಿಜೆಪಿಯ ಆಂತರಿಕ ಮೂಲಗಳು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿವೆ. ಆದರೆ ತಜ್ಞರ ಪ್ರಕಾರ ಒಬ್ಬರ ನಂತರ ಮತ್ತೊಬ್ಬರು ರಾಜೀನಾಮೆ ನೀಡಿರುವುದು ಸರ್ಕಾರದ ವಿರುದ್ಧ ಅಸಮಾಧಾನ ಮತ್ತು ಹತಾಶೆ ಹೆಚ್ಚಾಗುತ್ತಿರುವ ಸೂಚನೆ. ಈಗಾಗಲೇ ಬುಡಕಟ್ಟು ಜನಾಂಗದವರ ವಿರೋಧ ಕಟ್ಟಿಕೊಂಡು ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಈ ರಾಜೀನಾಮೆ ನುಂಗಲಾರದ ತುತ್ತಾಗುತ್ತಿದೆ.

Advertisements

ಶಾಸಕ ಥೋಕೋಮ್ ರಾದೇಶ್ಯಾಂ ಏಪ್ರಿಲ್ 13ರಂದು ಮುಖ್ಯಮಂತ್ರಿ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿಂದ ಬಿಕ್ಕಟ್ಟು ಆರಂಭವಾಗಿದೆ. ಹಿಂದಿನ ಅವಧಿಯಲ್ಲಿ ಸಚಿವ ಸಂಪುಟದ ಭಾಗವಾಗಿದ್ದ ರಾದೇಶ್ಯಾಂ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, “ಈವರೆಗೆ ಯಾವುದೇ ಜವಾಬ್ದಾರಿ ನೀಡದೆ ಇದ್ದುದಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಏಪ್ರಿಲ್ 20ರಂದು ಪಾವೋನಂ ಬ್ರೋಜನ್ ಮಣಿಪುರ ಅಭಿವೃದ್ಧಿ ಸಮಾಜದ ಅಧ್ಯಕ್ಷ ಸ್ಥಾನದಿಂದ ರಾಜೀನಾಮೆ ನೀಡುವಾಗ “ವೈಯಕ್ತಿಕ ಕಾರಣಗಳು” ಎಂದು ಬರೆದಿದ್ದರು.

ಈ ರಾಜೀನಾಮೆಗಳ ನಡುವೆಯೇ ಏಪ್ರಿಲ್ 21ರಂದು ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಬೀರೆನ್ ಸಿಂಗ್, “ಯಾವುದೇ ಬಿಕ್ಕಟ್ಟು ಆವರಿಸಿಲ್ಲ” ಎಂದು ಸಮಾಧಾನ ಹೇಳಿದ್ದರು. ಆದರೆ ಮರುದಿನವೇ ರಘುಮಣಿ ರಾಜೀನಾಮೆ ಎಸೆದಿದ್ದಾರೆ. “ಈ ಸಂದರ್ಭದಲ್ಲಿ ಇಂತಹ ಪಾತ್ರ ನಿಭಾಯಿಸುವುದು ಸಾಧ್ಯವಿಲ್ಲ” ಎಂದು ರಘುಮಣಿ ಬರೆದಿದ್ದಾರೆ.

ಮಣಿಪುರದ ಅನೇಕ ಬಿಜೆಪಿ ಶಾಸಕರು ದೆಹಲಿಯಲ್ಲಿ ಬಿಡಾರ ಹೂಡಿರುವುದರಿಂದ ಬಿಕ್ಕಟ್ಟು ಇಲ್ಲವೆನ್ನುವ ಮಾತು ನಂಬಲು ಅಸಾಧ್ಯವೆನಿಸುತ್ತಿದೆ. ಪಕ್ಷದ ಕೇಂದ್ರದ ನಾಯಕರು ತಮ್ಮ ಮಾತನ್ನು ಆಲಿಸುವ ನಿರೀಕ್ಷೆಯಲ್ಲಿ ಈ ಬಿಜೆಪಿ ಶಾಸಕರು ದೆಹಲಿಗೆ ಹೋಗಿದ್ದಾರೆ. ಬೀರೆನ್ ಸಿಂಗ್ ಸರ್ಕಾರದ ಬಗ್ಗೆ ತಮ್ಮ ಅಹವಾಲುಗಳನ್ನು ಕೇಂದ್ರದ ಗಮನಕ್ಕೆ ತರುವುದು ಈ ಶಾಸಕರ ಉದ್ದೇಶ. ತಮ್ಮ ಅಭಿಪ್ರಾಯಗಳನ್ನು ಪರಿಗಣಿಸದೆ ಅರ್ಹವಲ್ಲದ ಸ್ಥಾನಗಳಲ್ಲಿ ಕೆಲಸ ಮಾಡಲು ಸೂಚಿಸಲಾಗುತ್ತಿದೆ ಎಂದು ಬಹುತೇಕ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೋಧಿಸುವ ಶಾಸಕರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ದೆಹಲಿಯಿಂದ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಶಾಸಕರೊಬ್ಬರು ಬೀರೆನ್ ಸಿಂಗ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕುಟುಂಬ ರಾಜಕಾರಣದ ಮೂಲಕ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ ಎಂದು ದೂಷಿಸಿದ್ದಾರೆ. 24-25 ಬಿಜೆಪಿ ಶಾಸಕರು ಬೀರೆನ್ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಕೇಂದ್ರದ ನಾಯಕರು ಶಾಸಕರ ಅಭಿಪ್ರಾಯವನ್ನು ವೈಯಕ್ತಿಕವಾಗಿ ವಿಚಾರಿಸಿಕೊಳ್ಳಬೇಕು. ಬೀರೆನ್ ಅವರ ಸೇಡಿನ ರಾಜಕೀಯ ಆತಂಕ ಸೃಷ್ಟಿಸಿದೆ. ಬೀರೆನ್‌ಗೆ ಕೇಂದ್ರದ ಬೆಂಬಲವಿದೆ ಎನ್ನುವ ಭಾವನೆ ವ್ಯಕ್ತವಾಗಿದೆ” ಎಂದು ಶಾಸಕರು ಹೇಳಿದ್ದಾರೆ.

ಮಣಿಪುರ ಸಂಸದ ರಾಜ್‌ಕುಮಾರ್ ಇಮೋ ಸಿಂಗ್ ಅವರು ಶಾಸಕರ ದೋಷಾರೋಪಣೆಯನ್ನು ನಿರಾಕರಿಸಿದ್ದಾರೆ. “ಸರ್ಕಾರ/ಸಚಿವ/ ಪಕ್ಷದ ವಿರುದ್ಧ ಉನ್ನತ ಮಟ್ಟದಲ್ಲಿ ದೂರು ಸಲ್ಲಿಸಬಹುದು. ಆದರೆ ಈ ವ್ಯಾಜ್ಯವನ್ನು ಮಾಧ್ಯಮಗಳ ಮುಂದಿಡಬಾರದು. ಹಾಗೆ ಮಾಡಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಇತರ ಅನೇಕರು ಮುಖ್ಯಮಂತ್ರಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ. “ವೈಯಕ್ತಿಕ ಹಿತಾಸಕ್ತಿಗಾಗಿ ಸರ್ಕಾರದಲ್ಲಿ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ” ಎಂದು ಬಿಜೆಪಿ ಶಾಸಕರೊಬ್ಬರು ಟೀಕಿಸಿದ್ದಾರೆ. ಬಿಜೆಪಿ ರಾಜ್ಯ ವಕ್ತಾರ ಚಿಂಗಂಬಮ್ ಚಿದಾನಂದ ಸಿಂಗ್ ಬಿಕ್ಕಟ್ಟು ಇರುವುದನ್ನು ನಿರಾಕರಿಸಿದ್ದಾರೆ. “60 ಸ್ಥಾನದ ವಿಧಾನಸಭೆಯಲ್ಲಿ 55 ಶಾಸಕರ ಬೆಂಬಲದಲ್ಲಿ ಸರ್ಕಾರ ರಚನೆಯಾಗಿದೆ. ಸರ್ಕಾರ ಅಥವಾ ನಾಯಕತ್ವಕ್ಕೆ ಬೆದರಿಕೆಯಿಲ್ಲ” ಎಂದು ಚಿದಾನಂದ ಹೇಳಿದ್ದಾರೆ.

ಆದರೆ ಬೀರೆನ್ ಸಿಂಗ್‌ ನಾಯಕತ್ವದ ಬಗ್ಗೆ ಟೀಕೆ ವ್ಯಕ್ತವಾಗಿರುವುದು ಇದೇ ಮೊದಲಲ್ಲ. ಅವರ ಹಿಂದಿನ ಅವಧಿಯಲ್ಲೂ ‘ಸರ್ವಾಧಿಕಾರಿ’ ಎನ್ನುವ ಟೀಕೆ ವ್ಯಕ್ತವಾಗಿತ್ತು. “ಬೀರೆನ್ ಅಧಿಕಾರವನ್ನು ತಮ್ಮಲ್ಲಿ ಕೇಂದ್ರೀಕರಿಸುತ್ತಿದ್ದಾರೆ. ಎಲ್ಲರನ್ನೂ ತಮ್ಮ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದ್ದಾರೆ. ಇತರರಿಗೆ ಅಧಿಕಾರ ಕೊಡಲು ಇಷ್ಟಪಡುವುದಿಲ್ಲ” ಎಂದು ಮಾಧ್ಯಮಗಳಲ್ಲಿ ಪತ್ರಕರ್ತರು ಅಭಿಪ್ರಾಯಪಟ್ಟಿದ್ದರು.

ಈ ಸುದ್ದಿ ಓದಿದ್ದೀರಾ?: ಸಮೀಪದ ಸ್ಪರ್ಧೆ ಕಾಣಲಿರುವ ಕರ್ನಾಟಕದ 70 ಸೀಟುಗಳಲ್ಲಿ ಗೆಲುವಿಗೆ ಕಾಂಗ್ರೆಸ್ ಒತ್ತು

ಮಣಿಪುರ ಸರ್ಕಾರದಲ್ಲಿ ಶಾಸಕರ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲರಿಗೂ ಸ್ಥಾನಗಳ ಭರವಸೆ ನೀಡಲು ಮುಖ್ಯಮಂತ್ರಿಗೆ ಸಾಧ್ಯವಾಗಿಲ್ಲದೆ ಇರುವುದೂ ಈಗಿನ ಅಸಮಾಧಾನಕ್ಕೆ ಇಂಬು ನೀಡಿದೆ. ಈಗ 32 ಬಿಜೆಪಿ ಶಾಸಕರ ಜೊತೆಗೆ ಜೆಡಿಯುನಿಂದ ವಿಲೀನಗೊಂಡ ಐವರು, 17 ಇತರ ಶಾಸಕರು ಸರ್ಕಾರವನ್ನು ಬೆಂಬಲಿಸಿದ್ದಾರೆ.

ಮಣಿಪುರ ಸರ್ಕಾರ ಬುಡಕಟ್ಟು ಸಮುದಾಯಗಳ ಪ್ರತಿಭಟನೆ ಎದುರಿಸುತ್ತಿರುವ ಸಂದರ್ಭದಲ್ಲಿ ಬಿಕ್ಕಟ್ಟು ಎದುರಾಗಿದೆ. ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಿರುವ ಕುಕೀ ಸಮುದಾಯ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಕುಕಿ ಗ್ರಾಮಗಳ ಜನರನ್ನು ಮಾರ್ಚ್‌ನಲ್ಲಿ ಹಿಂಸಾತ್ಮಕವಾಗಿ ಹೊರ ಹಾಕಲಾಗಿತ್ತು. ನಂತರ ಸರ್ಕಾರ ಸಮುದಾಯದ ಕ್ರಾಂತಿಕಾರಿ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ಕುಕಿ ಸಮುದಾಯ ಸರ್ಕಾರ ತಾರತಮ್ಯದ ಧೋರಣೆ ಪ್ರಯೋಗಿಸುತ್ತಿದೆ ಎಂದು ಆರೋಪಿಸಿದೆ.

ದೆಹಲಿಗೆ ಹೋದ ಶಾಸಕರಿಗೆ ಕುಕಿ ಸಮುದಾಯದ ಶಾಸಕರ ಬೆಂಬಲವಿದೆ ಎನ್ನಲಾಗಿದೆ. ಸರ್ಕಾರ ಕುಕಿ ಮತ್ತು ಮುಸ್ಲಿಂ ಸಮುದಾಯವನ್ನು ಮುಖ್ಯವಾಗಿ ಗುರಿ ಮಾಡಿದೆ. ಅಂತಹ ವಿಭಜನೆ ಮತ್ತು ಆಡಳಿತ ನೀಡಿ ರಾಜ್ಯ ಮತ್ತು ಸರ್ಕಾರ ಎರಡಕ್ಕೂ ಹಾನಿಕರ ಎಂಬ ಅಭಿಪ್ರಾಯವೂ ಪಕ್ಷದೊಳಗೆ ವ್ಯಕ್ತವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X