ಪದ್ಮಶ್ರೀ ಪುರಸ್ಕೃತ ಇಂಡೋ-ಆಂಗ್ಲನ್ ಕವಿ ಜಯಂತ್ ಮಹೋಪಾತ್ರ ಭಾನುವಾರ ಸಂಜೆ ಕಟಕ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ.
95 ವರ್ಷ ವಯಸ್ಸಿನ ಅವರು ಪಾರ್ಶ್ವವಾಯು ಮತ್ತು ವಯೋಸಹಜ ಅಸ್ವಸ್ಥತೆಗೆ ತುತ್ತಾಗಿದ್ದರು. ಆಗಸ್ಟ್ 4ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಆಸ್ಪತ್ರೆಯಲ್ಲಿಯೇ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಮೇರು ಸಾಧನೆ ಮಾಡಿದ್ದ ಮಹೋಪಾತ್ರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊಟ್ಟಮೊದಲ ಇಂಡೋ-ಆಗ್ಲನ್ ಕವಿ ಎಂಬ ಹೆಗ್ಗಳಿಕೆಗೂ ಅವರು ಭಾಜನರಾಗಿದ್ದರು.
ಶಿಕ್ಷಕ ವೃತ್ತಿ ಮಾಡುತ್ತಿದ್ದ ಅವರು ನೂರಾರು ವಿದ್ಯಾರ್ಥಿಗಳಿಗೆ ಉತ್ತಮ ಜೀವನ ರೂಪಿಸಿದ್ದಾರೆ. ‘ಇಂಡಿಯನ್ ಸಮ್ಮರ್’ ಮತ್ತು ‘ಹಂಗರ್’ ಸೇರಿದಂತೆ ಹಲವಾರು ಜನಪ್ರಿಯ ಕವನಗಳನ್ನು ಅವರು ರಚಿಸಿದ್ದಾರೆ. ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಕಾವ್ಯಾತ್ಮಕ ಪರಂಪರೆಯನ್ನು ಸೃಷ್ಟಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಂಚಾರ ದಟ್ಟಣೆ ನಿರ್ವಹಣೆಗೆ ಒಆರ್‌ಆರ್‌ಸಿಎ ಸಲಹೆಗಳಿವು
2009ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. ಆದರೆ, 2015ರಲ್ಲಿ ದೇಶದಲ್ಲಿ ಅಸಹಿಷ್ಣುತೆ ಬೆಳೆಯುತ್ತಿರುವುದನ್ನು ಖಂಡಿಸಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು.
ಅವರು ಆಧುನಿಕ ಭಾರತದ ಇಂಗ್ಲಿಷ್ ಕಾವ್ಯ ಜಗತ್ತನ್ನು ಕಟ್ಟಿದ ತ್ರಿಮೂರ್ತಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದರು. ಎ.ಕೆ.ರಾಮಾನುಜಂ ಹಾಗೂ ನಿಸ್ಸಿಮ್ ಎಝೆಕೀಲ್ ಇನ್ನಿಬ್ಬರು.