370 ನೇ ವಿಧಿ ರದ್ದತಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಉಪನ್ಯಾಸಕ ಜಹೂರ್ ಅಹ್ಮದ್ ಭಟ್ ಅವರನ್ನು ಅಮಾನತುಗೊಳಿಸಿದ ಹಿಂದಿನ ಕಾರಣವನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಕೇಳಿದೆ.
ಇದರೊಂದಿಗೆ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಮಾತನಾಡುವಂತೆ ಕೇಂದ್ರದ ಉನ್ನತ ಕಾನೂನು ಅಧಿಕಾರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಅಮಾನತುಗೊಳಿಸುವಿಕೆಗೂ ನ್ಯಾಯಾಲಯದ ಮುಂದೆ ಉಪನ್ಯಾಸಕರು ಹಾಜರಾಗಿದ್ದಕ್ಕೂ ಸಂಬಂಧವಿದೆಯೇ ಎಂದು ತಿಳಿದುಕೊಳ್ಳಲು ನ್ಯಾಯಾಲಯ ಬಯಸಿತು ಹಾಗೂ ಇದನ್ನು ‘ಪ್ರತೀಕಾರ’ ಎಂದು ಪರಿಗಣಿಸಬಹುದು ಎಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠ ತಿಳಿಸಿದೆ.
ಕಳೆದ ಬುಧವಾರ ಹಿರಿಯ ರಾಜ್ಯಶಾಸ್ತ್ರ ಉಪನ್ಯಾಸಕ ಝಹೂರ್ ಅಹ್ಮದ್ ಭಟ್ ಅವರು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಮುಂದೆ ಹಾಜರಾಗಿದ್ದರು.
ಎರಡು ದಿನಗಳ ನಂತರ, ಶುಕ್ರವಾರ, ಜಮ್ಮು ಮತ್ತು ಕಾಶ್ಮೀರ ನಾಗರಿಕ ಸೇವಾ ನಿಯಮಗಳು, ಜಮ್ಮು ಮತ್ತು ಕಾಶ್ಮೀರ ಸರಕಾರಿ ನೌಕರರ ನಡವಳಿಕೆ ನಿಯಮಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ರಜೆ ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಕ್ಷಣವೇ ಜಾರಿಗೆ ಬರುವಂತೆ ಭಟ್ ಅವರನ್ನು ಅಮಾನತುಗೊಳಿಸಿ ಜಮ್ಮು ಕಾಶ್ಮೀರ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು.
ಈ ಸುದ್ದಿ ಓದಿದ್ದೀರಾ? ಯುಪಿ ಬಾಲಕನ ಕಪಾಳ ಮೋಕ್ಷ ಪ್ರಕರಣ: ಆಲ್ಟ್ ನ್ಯೂಸ್ ಸಹ-ಸ್ಥಾಪಕ ಮೊಹಮ್ಮದ್ ಝುಬೇರ್ ವಿರುದ್ಧ ಎಫ್‌ಐಆರ್
ಅಮಾನತು ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿರುವ ಹಿರಿಯ ವಕೀಲ ಕಪಿಲ್ ಸಿಬಲ್, “ಈ ನ್ಯಾಯಾಲಯದ ಮುಂದೆ ಹಾಜರಾದ ಕೂಡಲೇ ಅವರನ್ನು ಅಮಾನತುಗೊಳಿಸಲಾಗಿದೆ. ಎರಡು ದಿನ ರಜೆ ಪಡೆದು ವಾಪಸ್ ಹೋಗಿದ್ದ ಅವರನ್ನು ಅಮಾನತು ಮಾಡಲಾಗಿದೆ. ಇದು ನ್ಯಾಯಸಮ್ಮತವಲ್ಲ. ಇದು ನಮ್ಮ ರೀತಿ ಅಲ್ಲ. ಸರ್ಕಾರ ಪ್ರಜಾಪ್ರಭುತ್ವದ ರೀತಿ ಕಾರ್ಯನಿರ್ವಹಿಸಬೇಕು” ಎಂದರು.
ಅಮಾನತು ಇತರ ವಿಷಯಗಳಿಗೆ ಸಂಬಂಧಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಆಗಸ್ಟ್ 24 ರಂದು, ಜಹೂರ್ ಅಹ್ಮದ್ ಭಟ್ ಅವರು ಸುಪ್ರೀಂ ಕೋರ್ಟ್ ಮುಂದೆ ಖುದ್ದಾಗಿ ಹಾಜರಾಗಿದ್ದರು ಮತ್ತು 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರದ ವಿರುದ್ಧ ಆಗಸ್ಟ್ 5, 2019 ರಂದು ವಾದಿಸಿದ್ದರು.
ನಂತರ ಜಹೂರ್ ಅಹ್ಮದ್ ಭಟ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಆಗಸ್ಟ್ 25,2019 ರಂದು ಅಮಾನತುಗೊಳಿಸಿತ್ತು.
ಭಟ್ ಅವರನ್ನು ಶ್ರೀನಗರದಲ್ಲಿ ನಿಯೋಜಿಸಲಾಗಿದ್ದ ಸ್ಥಳದಿಂದ ಅಮಾನತುಗೊಳಿಸಲಾಗಿತ್ತು ಮತ್ತು ಜಮ್ಮುವಿನ ಶಾಲಾ ಶಿಕ್ಷಣ ನಿರ್ದೇಶಕರ ಕಚೇರಿಗೆ ಆದೇಶವನ್ನು ಲಗತ್ತಿಸಲಾಗಿತ್ತು. ಆದರೆ ಅವರ ನಡವಳಿಕೆಯ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲು ಹಿರಿಯ ಅಧಿಕಾರಿಯನ್ನು ವಿಚಾರಣಾ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಸಂವಿದಾನದ 370ನೇ ವಿಧಿಯನ್ನು ರದ್ದುಗೊಳಿಸಿ ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರವನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು.