‘ದಿ ಕೇರಳ ಸ್ಟೋರಿ’ ಬಿಡುಗಡೆಗೆ ತಡೆ ಕೋರಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

Date:

  • ವಿವಾದಿತ ‘ದಿ ಕೇರಳ ಸ್ಟೋರಿ’ ಬಿಡುಗಡೆಗೆ ತಡೆ ಕೋರಿ ಅರ್ಜಿ
  • ಅರ್ಜಿ ಸಲ್ಲಿಸಿದ್ದ ಜಮಿಯತ್ ಉಲಮಾ-ಐ-ಹಿಂದ್ ಸಂಘಟನೆ

ದೇಶಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿರುವ ಬಾಲಿವುಡ್‌ ಸಿನಿಮಾ  ”ದಿ ಕೇರಳ ಸ್ಟೋರಿ’ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಶುಕ್ರವಾರ, ಮೇ 5ರಂದು ತೆರೆಗೆ ಬರಲು ಸಿದ್ಧವಾಗಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ದ್ವೇಷಪೂರಿತ ಸಂಭಾಷಣೆಗಳನ್ನು ಒಳಗೊಂಡಿದೆ. ಇದೊಂದು ‘ಪ್ರಚಾರಾಭಿಯಾನಕ್ಕಾಗಿ ನಿರ್ಮಿಸಿದ ಸಿನಿಮಾ’ವಾಗಿರುವುದರಿಂದ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಜಮಿಯತ್ ಉಲಮಾ-ಇ-ಹಿಂದ್ ಸಂಘಟನೆ ಅರ್ಜಿ ಸಲ್ಲಿಸಿತ್ತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್​ ಸಿಬಲ್​ ಹಾಗೂ ನಿಜಾಮ್ ಪಾಷಾ ಈ ಚಿತ್ರವು ದ್ವೇಷ ಭಾಷಣದ ದೃಶ್ಯ ರೂಪದ ಪ್ರಚಾರ. ಚಿತ್ರ ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಕಾರಣ ನಾವು ಸುಪ್ರೀಂ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದ್ದೇವೆ. ದ್ವೇಷ ಭಾಷಣದ ವಿಚಾರವಾಗಿ ಸುಪ್ರೀಂ ಕೋರ್ಟ್​ ಮಧ್ಯಸ್ಥಿಕೆಗಾಗಿ ಅರ್ಜಿ ಸಲ್ಲಿಸಿರುವುದಾಗಿ ಹೇಳಿದರು.  

ಈ ಸುದ್ದಿ ಓದಿದ್ದೀರಾ?: ಎನ್‌ಸಿಪಿ ಅಧ್ಯಕ್ಷ ಸ್ಥಾನ ತೊರೆಯುವ ನಿರ್ಧಾರ ಪ್ರಕಟಿಸಿದ ಶರದ್‌ ಪವಾರ್‌

ಅರ್ಜಿದಾರರ ವಾದ ಆಲಿಸಿದ ಜಸ್ಟಿಸ್​ ಕೆ ಎಂ ಜೋಸೆಫ್​ ಹಾಗೂ ಬಿ ವಿ ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠವು, “ದ್ವೇಷ ಭಾಷಣಗಳಲ್ಲಿ ವೈವಿಧ್ಯತೆ ಇದೆ.  ಒಬ್ಬ ವ್ಯಕ್ತಿ ವೇದಿಕೆಯನ್ನು ಏರಿ ಭಾಷಣ ಮಾಡಿದಂತಲ್ಲ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಕ್ಕಿದೆ. ಮೊದಲು ನೀವು ಮಂಡಳಿಯನ್ನು ಪ್ರಶ್ನಿಸಿ ಆ ನಂತರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕು” ಎಂದು ಹೇಳಿತು.

ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸುವ ಮೊದಲು ನೀವು ಹೈಕೋರ್ಟ್​ಗೆ ಹೋಗಬೇಕಿತ್ತು, ಇದೇನು ಮೈದಾನವಲ್ಲ. ಇಲ್ಲಿದ್ದರೆ ಎಲ್ಲರೂ ಸುಪ್ರೀಂ ಕೋರ್ಟ್​ಗೆ ಬರಲು ಪ್ರಾರಂಭಿಸುತ್ತಾರೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವೇರಿ ವಿವಾದ | ತಮಿಳು ನಟ ಸಿದ್ಧಾರ್ಥ್‌ ಕ್ಷಮೆ ಕೇಳಿದ ನಟ ಶಿವರಾಜ್‌ಕುಮಾರ್

ತಮಿಳು ನಟ ಸಿದ್ಧಾರ್ಥ್‌ ಅವರ ಸುದ್ದಿಗೋಷ್ಠಿಗೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ...

ಕಾವೇರಿ ವಿವಾದ | ಕಲಾವಿದರನ್ನು ಹಿಂಸಿಸುವುದು ತಪ್ಪು; ಬಹುಭಾಷಾ ನಟ ಪ್ರಕಾಶ್ ರಾಜ್

ತಮಿಳು ನಟ ಸಿದ್ದಾರ್ಥ್ ಪತ್ರಿಕಾಗೋಷ್ಠಿ ತಡೆದಿದ್ದ ಕರವೇ ನಡೆಗೆ ಕ್ಷಮೆ ಕೇಳಿದ...

ಲಕ್ನೋ | ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಎರಡು ತಿಂಗಳ ಮಗು ಸಹಿತ ಇಬ್ಬರ ಮೃತ್ಯು; 14 ಮಂದಿಗೆ ಗಾಯ

ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನೆಲಮಾಳಿಗೆಯ ಮಹಡಿ ಕುಸಿದ ಪರಿಣಾಮ ನಿದ್ರೆಯಲ್ಲಿದ್ದ ಎರಡು...