ಸತತ ಕುಸಿದ ಭಾರತದ ಪತ್ರಿಕಾ ಸ್ವಾತಂತ್ರ್ಯ; ಸರ್ಕಾರದಿಂದ ಬಾಯಿ ಮಾತಿನ ಸಮರ್ಥನೆ

Date:

Advertisements
  • ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಅಂತಾರಾಷ್ಟ್ರೀಯ ಶ್ರೇಯಾಂಕ ಒಪ್ಪುವುದಿಲ್ಲ ಎಂದ ಸರ್ಕಾರ
  • ಭಾರತಕ್ಕಿಂತ ಉತ್ತಮವಾಗಿರುವ ನೇಪಾಳ, ಪಾಕಿಸ್ತಾನ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕ

ಕಳೆದ ಹತ್ತು ವರ್ಷಗಳಿಂದ ಭಾರತದ ಪತ್ರಿಕಾ ಸ್ವಾತಂತ್ರ್ಯ ಸತತ ಕುಸಿಯುತ್ತಿದ್ದರೂ ಆಡಳಿತರೂಢ ಬಿಜೆಪಿ ಸರ್ಕಾರ ಮಾತ್ರ ಪ್ರಕಟಿತ ಸಂಸ್ಥೆಗಳ ಮೇಲೆಯೇ ಗೂಬೆ ಕೂರಿಸುತ್ತಿದೆ.

ರಾಜ್ಯಸಭೆಯಲ್ಲಿ ಸೋಮವಾರ ಹೇಳಿಕೆ ನೀಡಿರುವ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಶ್ರೇಯಾಂಕಗಳನ್ನು ಕೇಂದ್ರ ಸರ್ಕಾರ ಒಪ್ಪುವುದಿಲ್ಲ ಅಥವಾ ಶ್ರೇಯಾಂಕಗಳನ್ನು ನಡೆಸುವ ಸಂಸ್ಥೆಯಾದ ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ ರೂಪಿಸುವ ತೀರ್ಮಾನಗಳನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯದಲ್ಲಿ ಸತತ ಕುಸಿತ

Advertisements

ಕಳೆದ (2022) ವರ್ಷ ರಿಪೋರ್ಟರ್ಸ್ ವಿತೌಟ್ ಬಾರ್ಡರ್ (ಆರ್‌ಎಸ್‌ಎಫ್) ಸಂಸ್ಥೆ ಪ್ರಕಟಿಸಿರುವ ಭಾರತದ ಪತ್ರಿಕಾ ಸ್ವಾತಂತ್ರ್ಯದ ಶ್ರೇಯಾಂಕ 180 ದೇಶಗಳ ಪೈಕಿ 150ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಭಾರತ 142ನೇ ಸ್ಥಾನ ಪಡೆದಿತ್ತು. ಆ ಮೂಲಕ ದೇಶದಲ್ಲಿ ಪತ್ರಕರ್ತರು ಅತಿ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ ಅಥವಾ ಅಭದ್ರತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿದೆ.

ಆರ್‌ಎಸ್‌ಎಫ್ 2022ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಪ್ರಕಾರ, ನೇಪಾಳವು ಜಾಗತಿಕ ಶ್ರೇಯಾಂಕದಲ್ಲಿ 30 ಅಂಕ ಹೆಚ್ಚು ಪಡೆದು 76ನೇ ಸ್ಥಾನದಲ್ಲಿದೆ. ಪಾಕಿಸ್ತಾನ 145, ಶ್ರೀಲಂಕಾ 127, ಬಾಂಗ್ಲಾದೇಶ 152 ಮತ್ತು ಮ್ಯಾನ್ಮಾರ್ 140ನೇ ಸ್ಥಾನದಲ್ಲಿತ್ತು.

ಇತ್ತೀಚೆಗಷ್ಟೆ ವಿ-ಡೆಮ್ ಇನ್‌ಸ್ಟಿಟ್ಯೂಟ್ ಎಂಬ ಸಂಸ್ಥೆ ಪ್ರಕಟಿಸಿದ ಪತ್ರಿಕಾ ಸ್ವಾತಂತ್ರ್ಯದ ಅಂಕಿಅಂಶಗಳ ಪ್ರಕಾರ ಗಮನಾರ್ಹ ಕುಸಿತ ಕಂಡ 22 ದೇಶಗಳಲ್ಲಿ ಭಾರತವು ಸೇರಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿನ ಪತ್ರಕರ್ತರು ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದೆ.

“2013ರ ಸುಮಾರಿಗೆ, ಭಾರತದ ಪತ್ರಿಕಾ ಸ್ವಾತಂತ್ರ್ಯ ಸತತವಾಗಿ ಕುಸಿಯಲು ಪ್ರಾರಂಭಿಸಿತು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾದಾಗ ಮತ್ತಷ್ಟು ಹೆಚ್ಚಾಯಿತು. ಇತ್ತೀಚಿನ ದಿನಗಳಂತೂ ಆಳುವ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ವಾತಂತ್ರ್ಯವೇ ಇಲ್ಲವಾಗಿದೆ. ಪತ್ರಕರ್ತರು ಅಧಿಕಾರ ನಡೆಸುವ ಸರ್ಕಾರದ ಪರವಾಗಿ ಇಲ್ಲದಿದ್ದರೆ ನಿತ್ಯವು ಒಂದಲ್ಲಾ ಒಂದು ರೀತಿಯಲ್ಲಿ ಭಯದ ವಾತಾವರಣದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

2021ರಲ್ಲಿ 6 ಮಂದಿ ಪತ್ರಕರ್ತರ ಹತ್ಯೆ

2022ರ ಫೆಬ್ರವರಿಯಲ್ಲಿ ರೈಟ್ಸ್ ಅಂಡ್ ರಿಸ್ಕ್ ಅನಾಲಿಸಿಸ್ ಗ್ರೂಪ್ (ಆರ್‌ಆರ್‌ಎಜಿ) ಬಿಡುಗಡೆ ಮಾಡಿದ ಇಂಡಿಯಾ ಪ್ರೆಸ್ ಫ್ರೀಡಂ ವರದಿಯ ಪ್ರಕಾರ, 2021ರಲ್ಲಿ ಭಾರತದಲ್ಲಿ ಕನಿಷ್ಠ ಆರು ಪತ್ರಕರ್ತರನ್ನು ಒಂದೇ ವರ್ಷದಲ್ಲಿ ಹತ್ಯೆ ಮಾಡಲಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ತಲಾ ಇಬ್ಬರು ಪತ್ರಕರ್ತರು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಬ್ಬರು ಪತ್ರಕರ್ತರು ಕೊಲೆಯಾಗಿದ್ದಾರೆ. ಅಲ್ಲದೆ 108 ಪತ್ರಕರ್ತರು ಸೇರಿ ಒಟ್ಟು 13 ಮಾಧ್ಯಮ ಸಂಸ್ಥೆಗಳು ಸರ್ಕಾರದಿಂದ ಪರೋಕ್ಷ ಗುರಿಗೆ ಒಳಗಾಗಿದ್ದಾರೆ.

ಒಟ್ಟು 121 ಭಾರಿ ಪತ್ರಕರ್ತರ ಮೇಲೆ ದಾಳಿಗಳಾಗಿದ್ದು, ಅವುಗಳಲ್ಲಿ ಕನಿಷ್ಠ 34 ಪ್ರಕರಣಗಳು ರಾಜಕೀಯ ಪಕ್ಷಗಳು, ಪಕ್ಷಗಳ ಕಾರ್ಯಕರ್ತರು ಮತ್ತು ಮಾಫಿಯಾಗಳಿಂದ ನಡೆದಿವೆ. ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದಲ್ಲಿ ಅತಿ ಹೆಚ್ಚು ಪತ್ರಕರ್ತರನ್ನು(25) ಟಾರ್ಗೆಟ್‌ ಮಾಡಲಾಗಿದೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ (23) ರಾಜ್ಯವಿದೆ.

2021ರಲ್ಲಿ 44 ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕೆಲವರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಅನೇಕ ಎಫ್‌ಐಆರ್‌ಗಳು ಆಗಿವೆ ಎಂಬುದನ್ನು ವರದಿ ತಿಳಿಸಿದೆ. 9 ಎಫ್‌ಐಆರ್‌ಗಳನ್ನು ದಾಖಲಿಸುವ ಮೂಲಕ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. ಜಮ್ಮು- ಕಾಶ್ಮೀರ ಮತ್ತು ದೆಹಲಿ ನಂತರದ ಸ್ಥಾನದಲ್ಲಿವೆ.

ಮೊಂಡು ವಾದಕ್ಕಿಳಿದ ಕೇಂದ್ರ ಸರ್ಕಾರ

ಇಷ್ಟೆಲ್ಲಾ ದಾಳಿಗೊಳಗಾಗುತ್ತಿದ್ದರೂ, ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಈ ಬಗ್ಗೆ ಉತ್ತರಿಸಿದ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ಸಮರ್ಥಿಸಿಕೊಂಡಿದೆ.”ಭಾರತದಲ್ಲಿ ಪತ್ರಕರ್ತರು ಸುರಕ್ಷಿತವಾಗಿದ್ದಾರೆ. ಮಾಧ್ಯಮಗಳು ನಿರ್ಭೀತಿಯಿಂದ ಕೆಲಸ ಮಾಡಬಹುದಾಗಿದೆ” ಎಂದು ಮೊಂಡು ವಾದಕ್ಕಿಳಿದಿದೆ.

ರಾಜ್ಯಸಭೆಯಲ್ಲಿ ಹೇಳಿಕೆ ನೀಡಿರುವ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, “ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಶ್ರೇಯಾಂಕಗಳನ್ನು ಕೇಂದ್ರ ಸರ್ಕಾರ ಒಪ್ಪುವುದಿಲ್ಲ ಅಥವಾ ಶ್ರೇಯಾಂಕಗಳನ್ನು ನಡೆಸುವ ಸಂಸ್ಥೆಯಾದ ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ ರೂಪಿಸುವ ತೀರ್ಮಾನಗಳನ್ನು ಪರಿಗಣಿಸುವುದಿಲ್ಲ” ಎಂದು ತಿಳಿಸಿದ್ದಾರೆ.

“ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಎಂದು ಕರೆಯಲಾಗುವ ವಿದೇಶಿ ಸರ್ಕಾರೇತರ ಸಂಸ್ಥೆಯಿಂದ ಪ್ರಕಟಿಸಲಾಗಿದೆ. ಸರ್ಕಾರವು ಈ ಸಂಸ್ಥೆ ರೂಪಿಸಿದ ತೀರ್ಮಾನಗಳನ್ನು ಒಪ್ಪುವುದಿಲ್ಲ. ಈ ಸಂಸ್ಥೆ ನೀಡಿರುವ ಶ್ರೇಯಾಂಕ, ಅಂಕಿಅಂಶ ಸೇರಿದಂತೆ ಮೊದಲಾದ ಮಾಹಿತಿಗಳು ಪ್ರಜಾಪ್ರಭುತ್ವದ ಮೂಲಭೂತ ಅಂಶಗಳಿಗೆ ಅನುಗುಣವಾಗಿಲ್ಲ. ಅಲ್ಲದೆ ಪಾರದರ್ಶಕವಲ್ಲದ ವಿಧಾನವನ್ನು ಅಳವಡಿಸಿಕೊಳ್ಳದ ಕಾರಣ ಶ್ರೇಯಾಂಕಕ್ಕೆ ಯಾವುದೇ ತೂಕವಿಲ್ಲ” ಎಂದು ಸುಳ್ಳಿನ ಸಮರ್ಥನೆ ನೀಡಿದ್ದಾರೆ.

ಪತ್ರಕರ್ತರ ಸುರಕ್ಷತೆಯ ವಿಷಯದ ಕುರಿತು ಮಾತನಾಡಿದ ಠಾಕೂರ್, “ಸಂವಿಧಾನದ 19(2)ರ ಅನ್ವಯ, ಅಭಿವ್ಯಕ್ತಿ ಸ್ವಾತಂತ್ರ್ಯವು ದೇಶದ ನಾಗರಿಕರಿಗೆ ನೀಡಲಾಗಿರುವ ಸಾಂವಿಧಾನಿಕ ಮೂಲಭೂತ ಹಕ್ಕಾಗಿದೆ. ಭಾರತದ ಸಾರ್ವಭೌಮತೆ ಮತ್ತು ಐಕ್ಯತೆ, ದೇಶದ ಭದ್ರತೆ, ವಿದೇಶಗಳೊಂದಿಗೆ ಸೌಹಾರ್ದ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ, ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ಸಭ್ಯತೆ ಹಾಗೂ ನೈತಿಕತೆ, ಮಾನಹಾನಿ ಅಥವಾ ಅಪರಾಧದ ಲಕ್ಷಣವಿರುವ ಸಂದರ್ಭಗಳಲ್ಲಿ, ದೇಶದ ಹಿತಾಸಕ್ತಿ ಕಾಪಾಡಲು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಧಿ 19(2)ರ ಅನ್ವಯ ನ್ಯಾಯೋಚಿತ ನಿರ್ಬಂಧ ವಿಧಿಸಲು ಸರ್ಕಾರಕ್ಕೆ ಅಧಿಕಾರವಿದೆ” ಎಂದು ಪರೋಕ್ಷವಾಗಿ ಮಾಧ್ಯಮಗಳ ಮೇಲೆ ಸರ್ಕಾರ ಹಕ್ಕು ಸಾಧಿಸಬಹುದೆಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X