ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ದೇಶದ 96.88 ಕೋಟಿ ಮತದಾರರು ಅರ್ಹರಾಗಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಶುಕ್ರವಾರ ಘೋಷಿಸಿದೆ.
18 ರಿಂದ 29 ವರ್ಷದೊಳಗಿನ ಎರಡು ಕೋಟಿಗೂ ಹೆಚ್ಚು ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆಯೋಗ ಹೇಳಿದೆ. 2019ರ ಲೋಕಸಭಾ ಚುನಾವಣೆ ಬಳಿಕ ನೋಂದಾಯಿತ ಮತದಾರರಲ್ಲಿ ಆರು ಶೇಕಡಾ ಹೆಚ್ಚಳವಾಗಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.
“ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮತ ಚಲಾಯಿಸಲು 96.88 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. ಮತದಾರರ ಸಂಖ್ಯೆಯ ಪೈಕಿ ಇದು ವಿಶ್ವದಲ್ಲೇ ಅತಿದೊಡ್ಡ ಸಂಖ್ಯೆಯಾಗಿದೆ” ಎಂದು ಚುನಾವಣಾ ಆಯೋಗ ಟ್ವೀಟ್ ಮಾಡಿದೆ.
ಇದೇ ವೇಳೆ ಲಿಂಗಾನುಪಾತವು 2023ರಲ್ಲಿ 940 ಇತ್ತು. 2024ರಲ್ಲಿ 948ಕ್ಕೆ ಏರಿಕೆಯಾಗಿರುವುದಾಗಿಯೂ ತಿಳಿಸಿದೆ.
The largest electorate in the world – 96.88 crores are now registered to vote #GeneralElection2024 After months long
intensive Special Summary Revision 2024 (SSR 2024) exercise the Election Commission has
published the electoral rolls in all States/UTshttps://t.co/tF7OZwAPGE— Spokesperson ECI (@SpokespersonECI) February 9, 2024
ಕರಡು ಪಟ್ಟಿ ಸಿದ್ದಪಡಿಸುತ್ತಿದ್ದ(Draft) ವೇಳೆ 95,73,52,077 ಇದ್ದ ಮತದಾರರ ಸಂಖ್ಯೆಯು, ಫೆ.8ರ ಅಂತಿಮ ಪಟ್ಟಿಯ ವೇಳೆ 96,88,21,926 ಒಟ್ಟು ಮತದಾರರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 49,72,31,994 ಮಂದಿ ಪುರುಷ ಮತದಾರರು, 47,15,41,888 ಮಂದಿ ಮಹಿಳೆಯರಿದ್ದಾರೆ ಎಂದು ಅಂಕಿ-ಸಂಖ್ಯೆಗಳನ್ನು ಆಯೋಗ ಪ್ರಕಟಿಸಿದೆ.
48,044 ಮಂದಿ ಲೈಂಗಿಕ ಅಲ್ಪಸಂಖ್ಯಾತರು(ತೃತೀಯ ಲಿಂಗಿ) ನೋಂದಾಯಿಸಿಕೊಂಡಿದ್ದಾರೆ. ಒಟ್ಟು 88,35,449 ವಿಶೇಷ ಚೇತನ ಮತದಾರರು ನೋಂದಾಯಿಸಿರುವುದಾಗಿ ತಿಳಿಸಿರುವ ಎಂದಿರುವ ಆಯೋಗವು, 18ರಿಂದ 19ರ ವಯಸ್ಸಿನ 1,84,81,610 ಮಂದಿ, 20-29 ವಯಸ್ಸಿನ 19,74,37,160 ಮಂದಿ, 80+ ವಯಸ್ಸು ಹೊಂದಿರುವ 1,85,92,918 ಮಂದಿ ಮತದಾರರು ನೋಂದಾಯಿಸಿದ್ದಾರೆ ಎಂದು ಕೋಷ್ಟಕವನ್ನು ಬಿಡುಗಡೆಗೊಳಿಸಿದೆ.
ಇದರ ಜೊತೆಗೆ 2,38,791 ಮಂದಿ ಶತಾಯುಷಿಗಳು(100+) ಕೂಡ ಮತದಾರರ ಪಟ್ಟಿಯಲ್ಲಿರುವುದಾಗಿ ತಿಳಿಸಿದೆ. ಜನಸಂಖ್ಯೆ ಅನುಪಾತವು 66.76 ಇರುವುದಾಗಿ ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.
17 ದಾಟಿರುವವರಿಂದಲೂ ಅರ್ಜಿ
ಈಗಾಗಲೇ 17+ ವಯಸ್ಸು ಆಗಿರುವವರಿಂದ ಕೂಡ ಅರ್ಜಿ ಸ್ವೀಕರಿಸಲಾಗಿದ್ದು, ಈವರೆಗೆ ದೇಶದಲ್ಲಿ 10.64 ಲಕ್ಷ ಮಂದಿಯಿಂದ ಮುಂಗಡ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದಿರುವ ಚುನಾವಣಾ ಆಯೋಗ, ಮುಂದಿನ ದಿನಗಳಲ್ಲಿ 18 ಪೂರ್ತಿಯಾದವರನ್ನು ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದೆ.
ಮತದಾರರು ಸಂಕ್ಷಿಪ್ತ ವಿವರ ಹೀಗಿದೆ
- ಒಟ್ಟು ಮತದಾರರ ಸಂಖ್ಯೆ: 96,88,21,926
- ಪುರುಷ ಮತದಾರರು: 49,72,31,994
- ಮಹಿಳಾ ಮತದಾರರು: 47,15,41,888
- ಲೈಂಗಿಕ ಅಲ್ಪಸಂಖ್ಯಾತರು: 48,044
- ವಿಶೇಷ ಚೇತನ ಮತದಾರರು: 88,35,449
- 18-19ರ ವಯಸ್ಸಿನವರು: 1,84,81,610
- 20-29ರ ವಯಸ್ಸಿನವರು:19,74,37,160
- 80+ ಇರುವವರು: 1,85,92,918
- 100+ ಇರುವವರು: 2,38,791
- ಜನಸಂಖ್ಯೆ ಅನುಪಾತ: 66.76
- ಲಿಂಗಾನುಪಾತ: 948