ಕಾಂಗ್ರೆಸ್, ವಿಸಿಕೆ ಮತ್ತು ಎಡಪಕ್ಷಗಳಂತಹ ಮೈತ್ರಿ ಪಕ್ಷಗಳ ನಾಯಕರು ನಮ್ಮೊಂದಿಗೆ ಇರುವುದರಿಂದ, ತಮಿಳುನಾಡು ಒಗ್ಗಟ್ಟಾಗಿ ಇರುವವರೆಗೆ ರಾಜ್ಯದಲ್ಲಿ ದೆಹಲಿಯ ಯಾವುದೇ ವಿಭಜನಕಾರಿ ಕೇಸರಿ ಅಜೆಂಡಾ ಯಶಸ್ವಿಯಾಗದು ಎಂದು ಡಿಎಂಕೆ ಅಧ್ಯಕ್ಷ, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ಎಲ್ ಇಲಯಪೆರುಮಾಳ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಸ್ಟಾಲಿನ್ ನಾಲ್ಕು ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿದ ಸಾಧನೆಗಳ ಬಗ್ಗೆ ವಿವರಿಸಿದರು. ಹಾಗೆಯೇ ಕಲ್ಯಾಣ ಯೋಜನೆಗಳು ಫಲಾನುಭವಿಗಳನ್ನು ತಲುಪುವಂತೆ ನೋಡಿಕೊಳ್ಳಲು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನು ಓದಿದ್ದೀರಾ? ತಮಿಳುನಾಡು | ನೀಟ್ ರದ್ದುಗೊಳಿಸುವ ಭರವಸೆ ನೀಡಿದ ಸಿಎಂ ಎಂ ಕೆ ಸ್ಟಾಲಿನ್
ಇನ್ನು ಸ್ಟಾಲಿನ್‌ಗೂ ಮುನ್ನ ಮಾತನಾಡಿದ ಸಿಕೆ ಮುಖ್ಯಸ್ಥ ಥೋಲ್ ತಿರುಮಾವಲವನ್, ತಮ್ಮ ಪಕ್ಷವು ಡಿಎಂಕೆ ಮೈತ್ರಿಕೂಟದಲ್ಲಿ ಮುಂದುವರಿಯುತ್ತದೆ ಮತ್ತು ಜಾತ್ಯತೀತ ಪ್ರಗತಿಪರ ಒಕ್ಕೂಟದ ವಿಜಯಕ್ಕಾಗಿ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಾರೆ ಎಂದು ಹೇಳಿದರು.
“ಈ ವೇದಿಕೆಯಲ್ಲಿ, ಪೆರಿಯಾರ್ ಮಾರ್ಗವನ್ನು ಅನುಸರಿಸುವ ದ್ರಾವಿಡ ಚಳುವಳಿಯ ನಾಯಕರು, ಮಾರ್ಕ್ಸ್‌ವಾದಿ ಸಿದ್ಧಾಂತದೊಂದಿಗೆ ಕಮ್ಯುನಿಸ್ಟ್ ಚಳುವಳಿಯ ನಾಯಕರು, ಗಾಂಧಿ ಮಾರ್ಗ ಹೊಂದಿರುವ ರಾಷ್ಟ್ರೀಯ ಚಳುವಳಿಯ ನಾಯಕರು ಮತ್ತು ಅಂಬೇಡ್ಕರ್ ಚಳುವಳಿಯ ನಾಯಕರು ನಾವು ಏಕತೆಯಿಂದ ಇರುತ್ತೇವೆ. ಇದು ತಮಿಳುನಾಡು, ಒಂದಾಗಿ ಒಗ್ಗಟ್ಟಾಗಿದೆ” ಎಂದು ತಿಳಿಸಿದರು.
“ತಿರುಮಾವಲವನ್ ಹೇಳಿದಂತೆ, ತಮಿಳುನಾಡು ಒಗ್ಗಟ್ಟಾಗಿ ಇರುವವರೆಗೆ, ದೆಹಲಿಯ ಯಾವುದೇ ವಿಭಜನಕಾರಿ ಕೇಸರಿ ಅಜೆಂಡಾ ಇಲ್ಲಿ ಯಶಸ್ವಿಯಾಗದು ಎಂದು ನಾನು ಪ್ರತಿಪಾದಿಸುತ್ತೇನೆ” ಎಂದು ಸ್ಟಾಲಿನ್ ಹೇಳಿದರು.
