ಪಠ್ಯಪುಸ್ತಕದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಎನ್‌ಸಿಇಆರ್‌ಟಿಗೆ ದೇಶದ ಪ್ರತಿಷ್ಠಿತ 33 ವಿವಿ ಪ್ರಾಧ್ಯಾಪಕರ ಪತ್ರ

Date:

Advertisements

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ(ಎನ್‌ಸಿಇಆರ್‌ಟಿ) ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಯ ವಿವಿಧ ಹಂತಗಳಲ್ಲಿ ಭಾಗವಾಗಿದ್ದ ದೇಶದ ಪ್ರತಿಷ್ಠಿತ ವಿವಿಗಳ 33 ವಿದ್ವಾಂಸರ ಗುಂಪು ಪಠ್ಯಪುಸ್ತಕದಲ್ಲಿನ ಏಕಪಕ್ಷೀಯ ಬದಲಾವಣೆ ಹಾಗೂ ಗುರುತಿಸಲಾಗದಷ್ಟು ತಿರುಚಿರುವುದಕ್ಕೆ ತಾವು ಕೊಡುಗೆ ನೀಡಿದ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಿಂದ ತಮ್ಮ ಹೆಸರನ್ನು ಅಳಿಸುವಂತೆ ಎನ್‌ಸಿಇಆರ್‌ಟಿಗೆ ಪತ್ರ ಬರೆದಿದ್ದಾರೆ.

ಪತ್ರ ಬರೆದ 33 ಶಿಕ್ಷಣ ತಜ್ಞರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಮುಜಾಫರ್ ಅಸ್ಸಾದಿ, ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಸಂದೀಪ್‌ ಶಾಸ್ತ್ರಿ ಕೂಡ ಸೇರಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ತಮ್ಮ ಹೆಸರನ್ನು ಮುಖ್ಯ ಸಲಹೆಗಾರರ ಮಂಡಳಿಯಿಂದ ಕೈಬಿಡುವಂತೆ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಹಾಗೂ ಶಿಕ್ಷಣ ತಜ್ಞ ಸುಹಾಸ್ ಪಾಲ್ಶಿಕರ್ ಅವರು ಎನ್‌ಸಿಇಆರ್‌ಟಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಹಾಗೆಯೇ ಪತ್ರಕ್ಕೆ ಸಹಿ ಹಾಕಿದವರಲ್ಲಿ ಅಶೋಕ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಮತ್ತು ರಾಜಕೀಯ ಶಾಸ್ತ್ರಜ್ಞ ಪ್ರತಾಪ್ ಭಾನು ಮೆಹ್ತಾ, ದೆಹಲಿ ವಿಶ್ವವಿದ್ಯಾಲಯದ ರಾಧಿಕಾ ಮೆನನ್, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ನಿವೇದಿತಾ ಮೆನನ್, ಕಾಂತಿ ಪ್ರಸಾದ್ ಬಾಜಪೈ, ನ್ಯಾಷನಲ್ ಯೂನಿವರ್ಸಿಟಿ ಸಿಂಗಾಪುರ್ ಸಹಾಯಕ ಡೀನ್ ಮತ್ತು ಜೆಎನ್‌ಯು ಮಾಜಿ ಪ್ರಾಧ್ಯಪಕ ರಾಜೀವ್ ಭಾರ್ಗವ ಕೂಡ ಸೇರಿದ್ದಾರೆ.

Advertisements

‘ವಿಭಿನ್ನ ದೃಷ್ಟಿಕೋನಗಳ ಹೊರತಾಗಿಯೂ ನಾವೆಲ್ಲರೂ ಶಾಲಾ ಪಠ್ಯಪುಸ್ತಕಗಳ ರಾಜಕೀಯ ಶಾಸ್ತ್ರದಲ್ಲಿ ಗಮನಾರ್ಹವಾದ ಪಠ್ಯ ರಚಿಸುವಿಕೆಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಆದಾಗ್ಯೂ, ಎನ್‌ಸಿಇಆರ್‌ಟಿ ಈಗ ಈ ಪಠ್ಯಪುಸ್ತಕಗಳಲ್ಲಿ ಹಲವು ನಿರ್ಣಾಯಕ ಬದಲಾವಣೆಗಳನ್ನು, ತಿರುಚುವಿಕೆ ಮತ್ತು ಅಳಿಸುವಿಕೆಗಳನ್ನು ಮಾಡಿದೆ. ಇವುಗಳು ಯಾವುದೂ ಸ್ವೀಕಾರಾರ್ಹವಲ್ಲ ಮತ್ತು ಅಪೇಕ್ಷಣೀಯ ವಿಷಯಗಳನ್ನು ಯಾವುದೇ ಪ್ರಮುಖ ಕಾರಣ ನೀಡದೆ ಮುದ್ರಿಸಲಾಗಿದೆ. ಇವು ಶೈಕ್ಷಣಿಕ ಜ್ಞಾನ ಉತ್ಪಾದನೆಗೆ ಆಧಾರವಾಗಿರುವ ಪಾರದರ್ಶಕತೆಯನ್ನು ಉಲ್ಲಂಘಿಸುವುದರ ಜೊತೆ ವಿವಾದವನ್ನು ಸೃಷ್ಟಿಸುತ್ತದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.  

ಈ ಸುದ್ದಿ ಓದಿದ್ದೀರಾ?  ಕವಿ ಮೊಹಮ್ಮದ್ ಇಕ್ಬಾಲ್ ಪಠ್ಯಕ್ರಮ ಸ್ಥಗಿತಕ್ಕೆ ದೆಹಲಿ ವಿವಿ ನಿರ್ಣಯ

‘ಮೂಲ ಪಠ್ಯಗಳಲ್ಲಿ ಹಲವಾರು ವಿಷಯಾಧಾರಿತ ಪರಿಷ್ಕರಣೆಗಳು ಇರುವುದರಿಂದ, ಅವುಗಳನ್ನು ವಿಭಿನ್ನ ಪುಸ್ತಕಗಳಾಗಿ ಮಾಡುವುದರಿಂದ ನಾವು ತಯಾರಿಸಿದ ಪುಸ್ತಕಗಳು ಎಂದು ಹೇಳಿಕೊಳ್ಳುವುದು ಮತ್ತು ನಮ್ಮ ಹೆಸರನ್ನು ಅವುಗಳೊಂದಿಗೆ ಸಂಯೋಜಿಸುವುದು ನಮಗೆ ಕಷ್ಟಕರವಾಗಿದೆ. ಬದಲಾವಣೆಯಿಂದ ಪಠ್ಯಪುಸ್ತಕಗಳನ್ನು ಗುರುತಿಸಲಾಗದಷ್ಟು ವಿರೂಪಗೊಳಿಸಲಾಗಿದೆ ಮತ್ತು ಅವುಗಳನ್ನು ಶೈಕ್ಷಣಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಈಗ ಕೈಗೊಂಡಿರುವ ಸೃಜನಾತ್ಮಕ ಸಾಮೂಹಿಕ ಪ್ರಯತ್ನವು ಅಪಾಯದಲ್ಲಿದೆ ಎಂದು ನಾವು ಈಗ ನಂಬುತ್ತೇವೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

“ನಾವೆಲ್ಲರೂ ವಿವಿಧ ಸೈದ್ಧಾಂತಿಕ ಸ್ಥಾನಗಳನ್ನು ಹೊಂದಿದ್ದವರು ಹಾಗೂ ಬಹು ದೃಷ್ಟಿಕೋನದಿಂದ ಬಂದವರಾಗಿದ್ದರೂ ರಾಜಕೀಯ ಶಾಸ್ತ್ರದಲ್ಲಿ ನಿಜವಾಗಿಯೂ ಗಮನಾರ್ಹವಾದ ಶಾಲಾ ಪಠ್ಯಪುಸ್ತಕಗಳನ್ನು ರಚಿಸಲು ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಯಿತು. ನಾವು ಹಲವಾರು ತಿಂಗಳುಗಳ ಕಾಲ ಸಾಮೂಹಿಕವಾಗಿ ಚರ್ಚಿಸಿ ಒಪ್ಪಿಗೆ ನೀಡಿದ್ದೆವು. ಆದರೆ ಏಕಪಕ್ಷೀಯ ಬದಲಾವಣೆ ಹಾಗೂ ಗುರುತಿಸಲಾಗದಷ್ಟು ತಿರುಚಿರುವಿಕೆಯಿಂದ ನಮ್ಮ ಹೆಸರಿಗೆ ಕಳಂಕ ಬರುವ ಸಾಧ್ಯತೆಯಿದೆ. ಈ ಕರಣದಿಂದ ತಮ್ಮ ಹೆಸರುಗಳನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕಬೇಕೆಂದು ಮನವಿಯಲ್ಲಿ ಹೇಳಲಾಗಿದೆ.

ಪಠ್ಯಪುಸ್ತಕಗಳಲ್ಲಿ  ಪರಿಷ್ಕರಣೆಗೊಂಡಿರುವ ಪ್ರಮುಖ ಬದಲಾವಣೆಗಳು

  • ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಲು ಹಿಂದೂ ಉಗ್ರಗಾಮಿಗಳು ನಡೆಸಿದ ಪ್ರಯತ್ನಗಳು ಮತ್ತು ಅವರ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾದ ನಿಷೇಧದ ಪ್ಯಾರಾಗಳನ್ನು ಪಠ್ಯದಿಂದ ಕೈಬಿಡಲಾಗಿದೆ.
  • 9 ಮತ್ತು 10ನೇ ತರಗತಿಗಳ ವಿಜ್ಞಾನ ಪಠ್ಯಪುಸ್ತಕಗಳ ಚಾರ್ಲ್ಸ್ ಡಾರ್ವಿನ್ ಅವರಿಗೆ ಸಂಬಂಧಿಸಿದ ಭೂಮಿಯ ಮೇಲಿನ ಜೀವಿಗಳ ಮೂಲ, ಜೀವವಿಕಾಸ, ವಿಕಸನೀಯ ಸಂಬಂಧಗಳ ಪತ್ತೆಹಚ್ಚುವಿಕೆ, ಮಾನವ ವಿಕಸನ ಇತ್ಯಾದಿ ಪಠ್ಯಗಳನ್ನು ಕೈಬಿಡಲಾಗಿದೆ.
  • ಕಳೆದ ವರ್ಷ, ಎನ್‌ಸಿಎಆರ್‌ಟಿ 2002ರ ಗುಜರಾತ್ ಗಲಭೆಗಳು, ಭಾರತದಲ್ಲಿ ಮೊಘಲ್ ಆಳ್ವಿಕೆ ಮತ್ತು 1975ರಲ್ಲಿ ಹೇರಲಾದ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ವಿಷಯವನ್ನು ಸಹ ಕೈಬಿಟ್ಟಿತು. ಈಗ ಪಠ್ಯಪುಸ್ತಕದಲ್ಲಿ ಗುಜರಾತ್ ಗಲಭೆಯ ಬಗ್ಗೆ ಯಾವುದೇ ಉಲ್ಲೇಖಗಳು ಇಲ್ಲದಂತಾಗಿದೆ.
  • 7ನೇ ತರಗತಿಯ ಪಠ್ಯಪುಸ್ತಕದಲ್ಲಿನ ಮೊಘಲ್ ಸಾಮ್ರಾಜ್ಯದ ಅಧ್ಯಾಯ, ಹುಮಾಯೂನ್, ಷಹಜಹಾನ್, ಬಾಬರ್, ಅಕ್ಬರ್, ಜಹಾಂಗೀರ್ ಮತ್ತು ಔರಂಗಜೇಬ್‌ನಂತಹ ಮೊಘಲ್ ಚಕ್ರವರ್ತಿಗಳ ಸಾಧನೆ ವಿವರಿಸುವ ಎರಡು ಪುಟಗಳ ಮಾಹಿತಿಯನ್ನು ಕಡಿತಗೊಳಿಸಲಾಗಿದೆ. ಹಾಗೆಯೇ ಇತಿಹಾಸ ಪಠ್ಯಪುಸ್ತಕದ ‘ನಮ್ಮ ಹಳತು – ಭಾಗ ಎರಡು’ ಅಧ್ಯಾಯದಲ್ಲಿ ದೇಶದ ಮೇಲೆ ಆಕ್ರಮಣ ಮಾಡಿದ ಮತ್ತು ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದ ಅಫ್ಘಾನಿಸ್ತಾನದ ಮಹಮ್ಮದ್ ಘಜ್ನಿಯ ಕುರಿತ ಉಲ್ಲೇಖವನ್ನು ತಿರುಚಲಾಗಿದೆ.
  • ಮೊಘಲರ ಕಾಲದ ಪಠ್ಯ ಮತ್ತು ಭಾರತದ ಮುಸ್ಲಿಂ ಆಡಳಿತಗಾರರ ಕುರಿತ ವಿಷಯಗಳಲ್ಲಿ ಭಾರೀ ಕಡಿತವಾಗಿದೆ. ತುಘಲಕ್‌, ಖಲ್ಜಿ ಮತ್ತು ಲೋದಿ ಮತ್ತು ಮೊಘಲ್ ಸಾಮ್ರಾಜ್ಯ ಸೇರಿದಂತೆ ಹಲವು ರಾಜವಂಶಗಳಿಂದ ಆಳಲ್ಪಟ್ಟ ದೆಹಲಿ ಸುಲ್ತಾನರ ಹಲವಾರು ಪುಟಗಳನ್ನು 7 ನೇ ತರಗತಿಯ ಇತಿಹಾಸ ಪಠ್ಯಪುಸ್ತಕವಾದ ‘ನಮ್ಮ ಹಳತುಗಳು – ಭಾಗ ಎರಡರಿಂದ ತೆಗೆದುಹಾಕಲಾಗಿದೆ. ಮೊದಲಿಗೆ ಆತನ ಹೆಸರಿನ ಮೊದಲಿಗೆ ಇದ್ದ ಸುಲ್ತಾನ ಎಂಬ ಪಟ್ಟವನ್ನು ಕೈಬಿಡಲಾಗಿದೆ. ಎರಡನೆಯದಾಗಿ “ಘಜ್ನಿ ಭಾರತದ ಮೇಲೆ ಪ್ರತಿ ವರ್ಷವೂ ದಾಳಿ ಮಾಡಿದ” ಎಂಬ ವಾಕ್ಯವನ್ನು “ಘಜ್ನಿ ಧಾರ್ಮಿಕ ಉದ್ದೇಶದಿಂದ ಭಾರತದ ಮೇಲೆ 17 ಬಾರಿ (ಕ್ರಿ.ಶ. 1000-1025) ದಾಳಿ ನಡೆಸಿದ” ಎಂದು ಎನ್‌ಸಿಇಆರ್‌ಟಿ ಪರಿಷ್ಕರಿಸಿದೆ.
  • 2014 ರಿಂದ ಎನ್‌ಸಿಇಆರ್‌ಟಿ ನಡೆಸಿದ ಮೂರನೇ ಪಠ್ಯಪುಸ್ತಕ ಪರಿಷ್ಕರಣೆ ಇದಾಗಿದೆ. 2017ರಲ್ಲಿ ಮೊದಲಿಗೆ ಪಠ್ಯ ಪರಿಷ್ಕರಿಸಲಾಗಿತ್ತು. ಇದರಲ್ಲಿ 182 ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗಳು, ತಿದ್ದುಪಡಿಗಳು ಮತ್ತು ಹೊಸ ದತ್ತಾಂಶ ಸೇರ್ಪಡೆ ಸೇರಿದಂತೆ 1,334 ಬದಲಾವಣೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಆಗಿನ ಶಿಕ್ಷಣ ಸಚಿವ ಪ್ರಕಾಶ್ ಜಾವಡೇಕರ್ ಅವರ ಆದೇಶದ ಮೇರೆಗೆ 2019ರಲ್ಲಿ ಎರಡನೇ ಬಾರಿಗೆ ಪಠ್ಯ ಪರಿಷ್ಕರಣೆ ನಡೆಸಲಾಯಿತು ಎಂದು ಎನ್‌ಸಿಇಆರ್‌ಟಿ ತಿಳಿಸಿತ್ತು.
  • ಇತ್ತೀಚಿಗಷ್ಟೆ ಚಾರ್ಲ್ಸ್ ಡಾರ್ವಿನ್ ಅವರ ವಿಕಸನ ಸಿದ್ಧಾಂತವನ್ನು ಕೈಬಿಟ್ಟಿರುವುದನ್ನು ಖಂಡಿಸಿ ಭಾರತದಾದ್ಯಂತ ಸುಮಾರು 1,800 ಕ್ಕೂ ಹೆಚ್ಚು ವಿಜ್ಞಾನಿಗಳು, ಶಿಕ್ಷಕರು ಮತ್ತು ವಿಜ್ಞಾನ ಲೇಖಕರು ಎನ್‌ಸಿಇಆರ್‌ಟಿಗೆ ಪತ್ರ ಬರೆದಿದ್ದರು.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X