- ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಆ. 17ರಂದು ಎಫ್ಐಆರ್ ದಾಖಲಿಸಿರುವ ದೆಹಲಿ ಪೊಲೀಸ್
- ನ್ಯೂಸ್ಕ್ಲಿಕ್ ಮತ್ತು ಅದರ ಪತ್ರಕರ್ತರಿಗೆ ಸಂಬಂಧಿಸಿದ 30 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ; ಖಂಡನೆ
ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ‘ನ್ಯೂಸ್ ಕ್ಲಿಕ್’ಸಂಸ್ಥೆಯ ವಿರುದ್ಧ ದಾಖಲಿಸಿಕೊಳ್ಳಲಾಗಿರುವ ಎಫ್ಐಆರ್ಗೆ ಸಂಬಂಧಿಸಿದಂತೆ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದ ದೆಹಲಿ ಪೊಲೀಸರ ವಿಶೇಷ ಸೆಲ್ನ ಅಧಿಕಾರಿಗಳು, ಶೋಧ ಕಾರ್ಯಾಚರಣೆಯ ಬಳಿಕ ‘ನ್ಯೂಸ್ ಕ್ಲಿಕ್’ ಕಚೇರಿಯನ್ನು ಜಪ್ತಿ ಮಾಡಿದ್ದಾರೆ.
ಚೀನಾ ಪರ ಪ್ರಚಾರಕ್ಕಾಗಿ ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣವನ್ನು ಆಗಸ್ಟ್ 17ರಂದು ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಹೀಗಾಗಿ, ಇಂದು ಬೆಳಗ್ಗೆ ನ್ಯೂಸ್ಕ್ಲಿಕ್ ಮತ್ತು ಅದರ ಪತ್ರಕರ್ತರಿಗೆ ಸಂಬಂಧಿಸಿದ 30 ಸ್ಥಳಗಳಲ್ಲಿ ಏಕಕಾಲಕಕ್ಕೆ ದಾಳಿ ನಡೆಸಿ, ಶೋಧ ನಡೆಸಿತ್ತು.
VIDEO | Office of online news portal 'NewsClick' in Delhi has been sealed by the Delhi Police.
— Press Trust of India (@PTI_News) October 3, 2023
READ: https://t.co/gqJAf60eJY pic.twitter.com/i2uW9MWa8N
ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿಸಿರುವ ಪೊಲೀಸರು, ನ್ಯೂಸ್ಕ್ಲಿಕ್ನ ಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಇವರು ಮಾತ್ರವಲ್ಲದೇ, ಪತ್ರಕರ್ತರಾದ ಊರ್ಮಿಲೇಶ್, ಔನಿಂದ್ಯೋ ಚಕ್ರವರ್ತಿ, ಅಭಿಸಾರ್ ಶರ್ಮಾ, ಪರಂಜಯ್ ಗುಹಾ ಠಾಕುರ್ತಾ ಮತ್ತು ಇತಿಹಾಸಕಾರ ಸೊಹೈಲ್ ಹಶ್ಮಿ ಅವರನ್ನು ಕೂಡ ವಿಚಾರಣೆ ನಡೆಸಿದ್ದು, ಮೊಬೈಲ್ ಹಾಗೂ ಲ್ಯಾಪ್ಟಾಪ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
#WATCH | Delhi Police Special Cell officials seal the office of 'NewsClick' in Delhi
— ANI (@ANI) October 3, 2023
Delhi Police is conducting raids at different premises linked to NewsClick under UAPA and other sections today. pic.twitter.com/yc1faa5sQw
ದಾಳಿಗೊಳಗಾಗಿರು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿಡಂಬನಕಾರರ ವಿದೇಶಿ ಪ್ರವಾಸಗಳು, ಶಾಹೀನ್ ಬಾಗ್ನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಗಳು ಮತ್ತು ರೈತರ ಆಂದೋಲನ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ 25 ಪ್ರಶ್ನೆಗಳ ಪಟ್ಟಿಯನ್ನು ಪೊಲೀಸರು ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ನ್ಯೂಸ್ಕ್ಲಿಕ್ ಮತ್ತು ಅದರ ಪತ್ರಕರ್ತರ ಮೇಲಿನ ಈ ದಾಳಿಯನ್ನು ಹಲವು ಮಂದಿ ಹಿರಿಯ ಪತ್ರಕರ್ತರ ಸಹಿತ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಎಡಿಗರ್ಸ್ ಗಿಲ್ಡ್ ಖಂಡಿಸಿದೆ.