- ‘ನಾವು ಬಿಜೆಪಿಯವರ ಬಗ್ಗೆ ಹುಷಾರಾಗಿರಬೇಕು’
- ‘ಕೆಲವು ಶಾಸಕರಿಗೆ ಆಫರ್ ಬಂದಿರಬಹುದು’
ನಾವು ಬಿಜೆಪಿಯವರ ಬಗ್ಗೆ ಹುಷಾರಾಗಿರಬೇಕು. ಆಪರೇಷನ್ ಕಮಲ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ‘ಮುಂದಿನ ಐದು ವರ್ಷಗಳ ಕಾಲವೂ ಆಪರೇಷನ್ ಕಮಲ ಪ್ರಯತ್ನ ನಡೆಯುತ್ತಲೇ ಇರುತ್ತದೆ. ನಾವು ಹುಷರಾಗಿರಬೇಕು ಅಷ್ಟೇ. ಕೆಲವು ಶಾಸಕರಿಗೆ ಆಫರ್ ಬಂದರೂ ಬಂದಿರಬಹುದು’ ಎಂದರು.
ಪರಮೇಶ್ವರ್ ಮನೆಯಲ್ಲಿ ಡಿನ್ನರ್ ವಿಚಾರವಾಗಿ ಪ್ರತಿಕ್ರಿಯಿಸಿ, “ಭರ್ಜರಿ ಊಟ ಇತ್ತು. ಅದು ಬಿಟ್ರೆ ಬೇರೆ ಏನೂ ಇಲ್ಲ. ರಾಜಕೀಯ ಚರ್ಚೆ ಏನೂ ಇರಲಿಲ್ಲ. ಪರಸ್ಪರ ಮಾತನಾಡಿಕೊಂಡೆವು ಅಷ್ಟೇ” ಎಂದರು.
ಈ ಸುದ್ದಿ ಓದಿದೀರಾ? ಈ ದಿನ ಸಂಪಾದಕೀಯ | ಹುಲಿಯುಗುರು ಲಾಕೆಟ್ ; ಸಂತೋಷನಿಗೇನೋ ಸುಣ್ಣ, ಸೆಲೆಬ್ರಿಟಿಗಳಿಗೇಕೆ ಬೆಣ್ಣೆ?
ಎರಡೂವರೆ ವರ್ಷದ ಬಳಿಕ ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿ, “ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಹೈಕಮಾಂಡೇ ಸ್ಪಷ್ಟಪಡಿಸಬೇಕು. ಆ ನಿರ್ಣಯ ಕೈಗೊಳ್ಳುವ ಶಕ್ತಿ ಇರೋದು ಅವರ ಬಳಿಯೇ. ಅದು ನಮ್ಮ ಕೈಯಲ್ಲಿ ಇಲ್ಲ. ಇದ್ದಿದ್ದರೆ ಹೇಳ್ತಾ ಇದ್ದೆ” ಎಂದು ತಿಳಿಸಿದರು.
“ನಿಗಮ ಮಂಡಳಿ ನೇಮಕ ವಿಚಾರ ಸಿಎಂ, ಡಿಸಿಎಂ ಸೇರಿ ಮಾಡಬೇಕು. ಅದು ಅವರಿಗೆ ಬಿಟ್ಟ ವಿಚಾರ. ಅದು ನಮ್ಮ ವ್ಯಾಪ್ತಿಗೆ ಬರೋದಿಲ್ಲ” ಎಂದರು.